-ನಾಗಸುಬ್ರಮಣ್ಯ ದೇಗುಲ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಮಾಹಿತಿ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನ.9ರಂದು ನಗರದ ನಾಲ್ಕು ಸ್ಥಳಗಳಲ್ಲಿ ದೀಪಾವಳಿ ಗೋಪೂಜೆ ಆಯೋಜಿಸಲಾಗಿದೆ ಎಂದು ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.ಅವರು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 8 ರಿಂದ 11ರವರೆಗೆ ಗೋಪೂಜೆ ನಡೆಯಲಿದೆ.
ವಿನೋಬನಗರದ ಶಿವಾಲಯ, ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಮಣ್ಯ ದೇವಸ್ಥಾನ, ಕೋಟೆ ರಸ್ತೆಯ ವಾಸವಿ ಪಬ್ಲಿಕ್ ಶಾಲೆ ಹಾಗೂ ರವೀಂದ್ರನಗರದ ಗಣಪತಿ ದೇವಸ್ಥಾನಗಳಲ್ಲಿ ಪೂಜೆ ನಡೆಯಲಿದೆ.
ಗೋವಿನ ರಕ್ಷಣೆ ಎಲ್ಲರ ಹೊಣೆಗಾರಿಕೆಯಾಗಿದ್ದು, ಗೋಮಾತೆಯ ಆರಾಧನೆ ಮತ್ತು ಭಾರತೀಯ ಸಂಸ್ಕೃತಿಯ ಗೌರವದ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
....ಬಾಕ್ಸ್....
ದೀಪಾವಳಿ ಹಬ್ಬದ ಆಚರಣೆಯಲ್ಲಿ ತಿಥಿಗಳಿಗೆ ವಿಶೇಷ ಮಹತ್ವವಿದ್ದು, ಈ ಬಾರಿ ಪಾಡ್ಯಮಿ ತಿಥಿ ಹೆಚ್ಚಿನ ಅವಧಿ ಇರುವ ಹಿನ್ನೆಲೆಯಲ್ಲಿ ಸೋಮವಾರವೇ ಗೋಪೂಜೆ ನಡೆಸಲು ನಿರ್ಧರಿಸಲಾಗಿದೆ ಎಂದು ಅರ್ಚಕ ಸಂದೇಶ ಉಪಾಧ್ಯಾಯ ಹೇಳಿದರು.
ಭಾನುವಾರ (ನ.8) ಬೆಳಿಗ್ಗೆ ಅಭ್ಯಂಗ ಸ್ನಾನ (ಎಣ್ಣೆ ಸ್ನಾನ) ಮಾಡಿ, ಸಂಜೆ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ.
ನ. 9ರಂದು ಸೋಮವಾರ ಬೆಳಗ್ಗೆ 9 ಗಂಟೆಯವರೆಗೆ ಅಮಾವಾಸ್ಯೆ ತಿಥಿ ಇರಲಿದ್ದು, ಬೆಳಗ್ಗೆ 6.30ರಿಂದ 7 ಗಂಟೆಯ ಅವಧಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಬಹುದು. ಬಳಿಕ ಪಾಡ್ಯಮಿ ತಿಥಿ ಆರಂಭವಾಗಲಿದೆ. ಈ ತಿಥಿ 20 ಘಳಿಗೆಗಳಿಗಿಂತ ಹೆಚ್ಚು ಕಾಲ ಇರುವುದರಿಂದ ಸೋಮವಾರ ಗೋಪೂಜೆ ನಡೆಸುವುದು ಶಾಸ್ತ್ರೋಕ್ತವಾಗಿದೆ. ನ. 10 ರಂದು ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಪಾಡ್ಯಮಿ ತಿಥಿ ಇರುವುದರಿಂದ ಗೋಪೂಜೆಗೆ ಸೂಕ್ತ ದಿನವಾಗಿದೆ ಎಂದು ತಿಳಿಸಿದರು.
ಪೊಟೋ: 07ಎಸ್ಎಂಜಿಕೆಪಿ08ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಮಾತನಾಡಿದರು.