ಕೇವಲ ಗಿಡ ನೆಡುವುದಲ್ಲ ಪೋಷಿಸಲೂ ಬೇಕು

KannadaprabhaNewsNetwork |  
Published : Jun 08, 2025, 01:56 AM IST
50 | Kannada Prabha

ಸಾರಾಂಶ

ನಮ್ಮ ವೈಯಕ್ತಿಕ ಬದುಕಿನ ಜೊತೆ ಸಾಮಾಜಿಕ ಜವಬ್ಧಾರಿಗಳನ್ನು ಪ್ರದರ್ಶಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ

ಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆವಿಶ್ವ ಪರಿಸರ ದಿನದ ಅಂಗವಾಗಿ ಮೈಸೂರಿನ ಹಾರ್ಟ್‌ ಸಂಸ್ಥೆ ಹಾಗೂ ದೀಪು ಅರಸ್ ಪಾರ್ಥ ಬ್ರಿಕ್ಸ್ ಇಂಡಸ್ಟ್ರಿ ಸಹಯೋಗದಲ್ಲಿ ಜಕ್ಕಹಳ್ಳಿ ಡೊಡ್ಡಕೆರೆ ರಸ್ತೆಯ ಎರಡು ಬದಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮವನ್ನು ಸರಗೂರಿನ ಆರಕ್ಷಕ ಉಪ ನಿರೀಕ್ಷಕ ಕಿರಣ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಹಾರ್ಟ್ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ವಿಶ್ವ ಪರಿಸರ ದಿನವನ್ನು 52 ವರ್ಷಗಳಿಂದ ಆಚರಿಸುತ್ತಾ ಬರುತ್ತಿದ್ದು, ನೆಟ್ಟ ಗಿಡವು ಮರವಾಗುವವರೆಗೆ ಅದರ ಜವಬ್ಧಾರಿಯನ್ನು ತೆಗೆದು ಕೊಳ್ಳುವವರ ಸಂಖ್ಯೆ ಅತಿ ವಿರಳ. ಇಂತಹ ಸಂದರ್ಭದಲ್ಲಿ ಇಂದು ಆಯೋಜಿಸಿರುವ ಈ ಗಿಡ ನೆಡುವ ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆ ಹಾಗೂ ದೀಪು ಅರಸ್ ಪಾರ್ಥ ಬ್ರಿಕ್ಸ್ ಇಂಡಸ್ಟ್ರಿ ಸಂಯುಕ್ತ ಆಶ್ರಯದಲ್ಲಿ ಎರಡು ವರ್ಷಗಳ ಕಾಲ 52 ಗಿಡಗಳನ್ನು ಪೋಷಣೆ ಮಾಡುವ ಹೊಣೆ ಹೊತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ ಎಂದರು.ಈ ವೇಳೆ ಅರಣ್ಯ ಇಲಾಖೆ ಮತ್ತು ಟ್ರೀ- ಗಾರ್ಡ್ನೆ ರವು ನೀಡಿದ ರಘುಲಾಲ್ ಕಂಪನಿಗೂ ಕೃತಜ್ಞತೆ ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ದೀಪು ಅರಸ್, ನಮ್ಮ ವೈಯಕ್ತಿಕ ಬದುಕಿನ ಜೊತೆ ಸಾಮಾಜಿಕ ಜವಬ್ಧಾರಿಗಳನ್ನು ಪ್ರದರ್ಶಿಸಿದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದರು. ಅಲ್ಲದೇ 52ನೇ ವರ್ಷದ ವಿಶ್ವ ಪರಿಸರ ದಿನದಂದು 52 ಗಿಡಗಳನ್ನು ನೆಟ್ಟು ಇವುಗಳನ್ನು ಕಾಪಾಡುವ ನೇತೃತ್ವ ವಹಿಸಿರುವುದು ನಮಗೆ ಬಹಳ ಸಂತೋಷ ನೀಡುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಹಾರ್ಟ್ ಸಂಸ್ಥೆಯ ಕಾರ್ಯಕಾರಿ ಸದಸ್ಯರು ಹಾಗೂ ಸಂಧಿವಾತ ಮತ್ತು ಕೀಲುರೋಗ ತಜ್ಞ ಡಾ. ಮಹಾಬಲೇಶ್ವರ ಮಮದಾಪುರ, ಸಂಯೋಜಕ ಶಿವಲಿಂಗ, ಜಕ್ಕಹಳ್ಳಿ ಹಿರಿಯ ಪ್ರಾಥಮೀಕ ಶಾಲೆ ಸಹ ಶಿಕ್ಷಕಿ ರೇಖಾ ಮತ್ತು ಶಾಲಾ ವಿದ್ಯಾರ್ಥಿಗಳು, ಯೋಧ ಯೋಗೇಶ, ರವೀಂದ್ರ, ಶತೀಶ್, ದೇವಲಾಪುರ, ಜಕ್ಕಹಳ್ಳಿ ಮತ್ತು ದೇವಲಾಪುರ ಗ್ರಾಮಸ್ಥರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ