ಕನ್ನಡಪ್ರಭ ವಾರ್ತೆ ಚವಡಾಪುರ
ಅಫಜಲ್ಪುರ ತಾಲೂಕಿನ ಸ್ಟೇಷನ್ ಗಾಣಗಾಪೂರ ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿಯಲ್ಲಿ ಮೊದಲ ಬಾರಿಗೆ ಕಮಲ ಅರಳಲು ನಾನು ಕೂಡ ಶ್ರಮಿಸಿದ್ದೆ. ಆದರೆ ಅವರಿಂದ ಬದಲಾವಣೆ ಬಯಸುವುದೇ ದೊಡ್ಡ ತಪ್ಪಾಯಿತು. ಅಭಿವೃದ್ಧಿ ಕೆಲಸ ಮಾಡುವುದು ಒಂದು ಮಾತಿರಲಿ, ಶಾಂತವಾಗಿರುವ ಸಮಾಜಗಳನ್ನು ಸಹ ಅವರು ಸುಮ್ಮನೆ ಬಿಡಲಿಲ್ಲ. ಕೋಮು ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಾ ಧರ್ಮ, ಜಾತಿಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಹೀಗಾಗಿ ಇಂತಹ ಮತೀಯ ಪಕ್ಷ ಅಧಿಕಾರದಲ್ಲಿ ಇರಬಾರದೆಂದು ಮತ್ತೆ ಜಾತ್ಯಾತೀತ ತತ್ವದ ಮೇಲೆ, ಸಾಮಾಜಿಕ ಕಳಕಳಿ ಇಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗಬೇಕೆಂದು ಈ ಬಾರಿ ಶ್ರಮ ವಹಿಸಿದ್ದೇವೆ. ನಮ್ಮ ಶ್ರಮಕ್ಕೆ ಮತದಾರರು ಉತ್ತಮ ಫಲಿತಾಂಶ ನೀಡುವ ಮೂಲಕ ಉತ್ತರ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಕಲಬುರಗಿಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಾಗಲಿದೆ ಎಂದು ಹೇಳಿದರು. ಪತ್ನಿ ವನೀತಾ, ಪುತ್ರ ರಿತೇಶ ಸೇರಿದಂತೆ ಅನೇಕರಿದ್ದರು.