ಬೋಗ್ಯ, ಬಾಡಿಗೆ ಹೆಸರಲ್ಲಿ ಮನೆಕೊಡಿಸುದಾಗಿ ಜನರಿಗೆ ವಂಚನೆ

KannadaprabhaNewsNetwork |  
Published : Nov 14, 2026, 01:45 AM IST
ಎಫ್‌ಕೆಸಿಸಿಐ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಡಾ. ನಾ. ಸೋಮೇಶ್ವರ ಉದ್ಘಾಟಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಟಿ. ಸಾಯಿರಾಂ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಬೋಗ್ಯದ ಹಾಗೂ ಬಾಡಿಗೆ ಮನೆಗಳನ್ನು ಕೊಡಿಸುವ ನೆಪದಲ್ಲಿ ಜನರಿಗೆ ಲಕ್ಷಾಂತರ ರು.ವಂಚಿಸಿದ ಇಬ್ಬರು ಆರೋಪಿಗಳ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೋಗ್ಯದ ಹಾಗೂ ಬಾಡಿಗೆ ಮನೆಗಳನ್ನು ಕೊಡಿಸುವ ನೆಪದಲ್ಲಿ ಜನರಿಗೆ ಲಕ್ಷಾಂತರ ರು.ವಂಚಿಸಿದ ಇಬ್ಬರು ಆರೋಪಿಗಳ ವಿರುದ್ಧ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮಾರೇನಹಳ್ಳಿ ಮುಖ್ಯರಸ್ತೆ ಸಮೀಪದ ಸರಸ್ವತಿನಗರದ ನಿವಾಸಿ ಯೋಗೇಶ್‌ ಎಂಬುವರು ನೀಡಿದ ದೂರಿನ ಅನ್ವಯ ಬಿ.ಎಂ. ಭರತ್‌(28) ಮತ್ತು ಕೆ.ಎಸ್.ವಿಶ್ವನಾಥ್‌(55) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಯೋಗೇಶ್‌ ಎಂಬುವವರು 2024ರಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ ಫ್ಲ್ಯಾಟ್‌ ಮಾಲೀಕರಾದ ಭರತ್‌ ಮತ್ತು ವಿಶ್ವನಾಥ್ ಎಂಬುವವರ ಪರಿಚಯವಾಗಿದೆ. 3 ವರ್ಷದ ಅವಧಿಗೆ 2ಬಿಎಚ್‌ಕೆ ಬಾಡಿಗೆ ಮನೆಯನ್ನು 20 ಲಕ್ಷಕ್ಕೆ ಭೋಗ್ಯದ ಆಧಾರದ ಮೇಲೆ ನೀಡಲು ಪರಸರ ಒಪ್ಪಿಕೊಂಡಿದ್ದಾರೆ. ಅದರಂತೆ ಯೋಗೇಶ್‌ ಅವರು ಮುಂಗಡವಾಗಿ 20 ಲಕ್ಷ ರು.ಹಣವನ್ನು ನೀಡಿ ಭೋಗ್ಯದ ಕರಾರು ಮಾಡಿಕೊಂಡಿರುತ್ತಾರೆ.

ಕರಾರಿನ ಅನ್ವಯ ಭೋಗ್ಯದ ಅವಧಿಯು 2027ಕ್ಕೆ ಕೊನೆಯಾಗುತ್ತದೆ. ಆದರೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಲ್ಲೇಶ್ವರ ಶಾಖೆ ಅಧಿಕಾರಿಗಳು 2025 ರ ಜು.9 ರಂದು ಯೋಗೇಶ್‌ ಅವರು ಭೋಗ್ಯಕ್ಕೆ ವಾಸವಿರುವ ಮನೆಯ ಮೇಲೆ ಸ್ವಾಧೀನ ನೋಟಿಸ್ ಅಂಟಿಸಿ ಹೋಗಿದ್ದರು. ಇದರಿಂದಾಗಿ ಯೋಗೇಶ್‌ ಅವರು ಆಘಾತಗೊಂಡಿದ್ದಾರೆ. ಆರೋಪಿಗಳು ಕಟ್ಟಡದ ಮೇಲೆ 63,37,201 ರು.ಗಳನ್ನು ಸಾಲವನ್ನು ಪಾವತಿಸಲು ಬ್ಯಾಂಕಿಗೆ ಹೊಣೆಗಾರರಾಗಿರುತ್ತಾರೆಂದು ನೋಟಿಸ್‌ನಲ್ಲಿ ವಿವರಿಸಲಾಗಿತ್ತು.

ಈ ಬಗ್ಗೆ ಯೋಗೇಶ್‌ ಅವರು ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿ ಸಾಲದ ದಾಖಲಾತಿಗಳನ್ನು ಪಡೆದು ಪರಿಶೀಲಿಸಿದ್ದಾಗ ಎಸ್‌ಬಿಐನಲ್ಲಿ ಲಕ್ಷಾಂತರ ರು. ಸಾಲವಾಗಿ ಪಡೆದಿದ್ದು, ಸಾಲದ ಕಂತುಗಳನ್ನು ಮರುಪಾವತಿಸಿಲ್ಲ. ಹಾಗಾಗಿ ಬ್ಯಾಂಕ್ ಅಧಿಕಾರಿಗಳು ಆ ಕಟ್ಟಡವನ್ನು ಸ್ವಾಧೀನ ಪಡಿಸಿಕೊಡಲು ಮುಂದಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಬಳಿಕ ತಾವು ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಈ ಸಂಬಂಧ ಯೋಗೇಶ್‌ ಅವರು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.14ಕ್ಕೂ ಹೆಚ್ಚು ಮಂದಿಗೆ ವಂಚನೆ:

ಆರೋಪಿಗಳು ಇದೇ ರೀತಿ ಸುಮಾರು 14ಕ್ಕೂ ಹೆಚ್ಚು ಮಂದಿಗೆ ಬೋಗ್ಯದ ಹಾಗೂ ಬಾಡಿಗೆ ಮನೆಗಳನ್ನು ಕೊಡಿಸುವ ನೆಪದಲ್ಲಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದರಾಜನಗರ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ