ಹರಾವರಿ ಕಾನೂರು ಕಟ್ಟಿನಮನೆ ಸರ್ಕಾರಿ ಶಾಲೆಗೆ ರೋಟರಿಯಿಂದ ಕ್ರೀಡಾ ಪರಿಕರ ವಿತರಿಸಿ
ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಅವನತಿ ಕಂಡು ಮುಚ್ಚುತ್ತಿವೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ವಿಷಾಧ ವ್ಯಕ್ತಪಡಿಸಿದರು.
ಹರಾವರಿ ಕಾನೂರು ಕಟ್ಟಿನಮನೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ನಿಂದ ವಿವಿಧ ಕ್ರೀಡಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.ಬಾಳೆಹೊನ್ನೂರು ರೋಟರಿ ಸಂಸ್ಥೆ ವಿವಿಧೆಡೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದು, ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಿಗೆ ವಿವಿಧ ಶಾಲಾ ಪರಿಕರಗಳು, ಕ್ರೀಡಾ ಸಾಮಾಗ್ರಿಗಳು, ಕುಡಿಯುವ ನೀರಿನ ವ್ಯವಸ್ಥೆ, ಸಮವಸ್ತ್ರ, ಬ್ಯಾಂಡ್‌ಸೆಟ್ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.ಗ್ರಾಮೀಣ ಭಾಗದ ಶಾಲೆಗಳು ಉಳಿದು ಬೆಳೆಯಬೇಕು ಎಂಬುದೇ ರೋಟರಿ ಸಂಸ್ಥೆ ಆಶಯವಾಗಿದೆ. ಈ ನಿಟ್ಟಿನಲ್ಲಿ ನಾವು ಸಹಕಾರ ಮಾಡುತ್ತಿದ್ದೇವೆ ಎಂದರು.
ಮುಖ್ಯಶಿಕ್ಷಕಿ ಭಾರತಿ, ರೋಟರಿ ಕಾರ್ಯದರ್ಶಿ ಯಶವಂತ, ಸಹಶಿಕ್ಷಕ ಲೋಕೇಶ, ಭರತ್, ಪದ್ಮರೇಖಾ, ಅಂಗನವಾಡಿ ಮೇಲ್ವಿಚಾರಕಿ ಬಿ.ಆರ್.ಭಾರತಿ, ಲವೀನಾ ಪಾಯ್ಸ್ ಮತ್ತಿತರರು ಇದ್ದರು.೦೮ಬಿಹೆಚ್‌ಆರ್ ೧: