ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾನಿಕೇತನದಲ್ಲಿ ಶನಿವಾರ ಪ್ರಾಥಮಿಕ ಹಾಗೂ 10ನೇ ತರಗತಿಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ನಂತರ ಆಯೋಜಿಸಿದ್ದ ಪದವಿ ಪತ್ರ ಪ್ರದಾನ ಸಮಾರಂಭದಲ್ಲಿ ಪದವಿ ಪತ್ರಗಳನ್ನು ವಿತರಿಸಿ ಮಾತನಾಡಿ, ಒಬ್ಬ ವಿದ್ಯಾರ್ಥಿ ಅಥವಾ ಎಲ್ಲಾ ವಿದ್ಯಾರ್ಥಿಗಳು ತಮ್ಮ ಇಡೀ ಶಿಕ್ಷಣವನ್ನು ಒಂದು ಹಂತದಲ್ಲಿ ಮುಗಿಸಲಾಗುವುದಿಲ್ಲ. ಆಯಾ ಹಂತದ ನಿರೀಕ್ಷಿತ ಕಲಿಕೆ ಸಾಮರ್ಥ್ಯಗಳು ಹಾಗೂ ಒಟ್ಟಾರೆ ವಿದ್ಯಾರ್ಥಿಯ ಮುಂದಿನ ಹಂತದ ಕಾಲೇಜು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಈ ಸಮಾರಂಭದ ಆಶಯವಾಗಿದೆ ಎಂದರು.
ಪ್ರತಿಯೊಬ್ಬರು ರಚನಾತ್ಮಕ ಅಭ್ಯಾಸವನ್ನು ರೂಢಿಸಿಕೊಂಡು ಸ್ವಾತಂತ್ರ್ಯ ಚಿಂತನೆ ಹಾಗೂ ನಿರಂತರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಶಾಲೆಗಳಲ್ಲಿ ನಾಲ್ಕು ಗೋಡೆಗಳ ನಡುವೆ ಪಠ್ಯ ಆಧಾರಿತ ಕಲಿಕೆಯ ಜೊತೆಗೆ ಸಾಮರ್ಥ್ಯ ಬೆಳವಣಿಗೆಗೆ, ಜ್ಞಾನಾರ್ಜನೆ ,ಉನ್ನತ ಮಟ್ಟದ ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಪರಿಪೂರ್ಣ ವ್ಯಕ್ತಿತ್ವಗಳಿಸಿಕೊಳ್ಳಬೇಕು. ನಿರಂತರ ಅಭ್ಯಾಸ ರಚನಾತ್ಮಕ, ಚಟುವಟಿಕೆಗಳಿಂದ ಎಲ್ಲಾ ವಿದ್ಯಾರ್ಥಿಗಳು ಪರಿಪೂರ್ಣ ವ್ಯಕ್ತಿಗಳಾಗಿ ರೂಪಗೊಳ್ಳಬೇಕು ಎಂದು ಮನವಿ ಮಾಡಿದರು. ನಿರ್ದೇಶಕ ಡಾ.ಕೋಡಿರಂಗಪ್ಪ ಮಾತನಾಡಿ, ಪದವಿ ಪತ್ರ ನಿಮ್ಮ ಶಕ್ತಿ ಸಾಮರ್ಥ್ಯಗಳು, ಗುಣ ಸ್ವಾವಭಾವಗಳು ಹಾಗೂ ನಿಮ್ಮ ಮೌಲ್ಯಗಳ ಬದಗಿನ ಮರು ಚಿಂತನೆಯೂ ಆಗಬೇಕು. ಯಾರೂ ಪರಿಪೂರ್ಣವಾಗಿ ಜನಿಸುವುದಿಲ್ಲ. ಶಿಕ್ಷಣದಲ್ಲಿ ಶ್ರೇಷ್ಠತೆ ಹಾಗೂ ಪರಿಪೂರ್ಣತೆ ಪಡೆಯಲು ರಚನಾತ್ಮಕ ಉಪಕ್ರಮಗಳನ್ನು ಅಧ್ಯಾಪಕ ವೃಂದ ಅಳವಡಿಸಿಕೊಳ್ಳಬೇಕು. ಶಿಕ್ಷಣ ಮುಂದುವರಿಕೆಗೆ ಅಗತ್ಯ ಭಾಷಾ ಸಾಮರ್ಥ್ಯಗಳು, ಜೀವನ ಕೌಶಲಗಳು, ಅಧ್ಯಯನಶೀಲತೆ, ಪಠ್ಯಪುಸ್ತಕ ಸಂಸ್ಕೃತಿ ಹಾಗೂ ಸಮಯ ಪಾಲನೆಗಳನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕಲಿಕೆಯಲ್ಲಿ ಪಾಲಿಸಬೇಕು. ಮಕ್ಕಳ ಬೆಳವಣಿಗೆಗೆ ಶಾಲೆ, ಅಧ್ಯಾಪಕರ ಸಂಘಟಿತ ಕಾರ್ಯಗಳು ಜೊತೆಗೆ ಪೋಷಕರಿಂದ ಸಹಕಾರ ಅತ್ಯಗತ್ಯವಾಗಿದ್ದು ಶಾಲೆ ಮತ್ತು ಪೋಷಕರು ಒಗ್ಗೊಡಿ ಮಕ್ಕಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ವಿಭಾಗದ ಪ್ರಾಂಶುಪಾಲ ಪ್ರಸಾದ್ ಅಪ್ಪಲ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಲ್ಲಿ ವಿಶಿಷ್ಟ ರೀತಿಯ ಶಕ್ತಿ ಸಾಮರ್ಥ್ಯಗಳು ಹುದುಗಿದ್ದು ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಪೋಷಕರು ಸಹಕರಿಸಬೇಕು ಎಂದು ಮನವಿ ಮಾಡಿದರು.ಸಮಾರಂಭದಲ್ಲಿ ಉಪ ಪ್ರಾಂಶುಪಾಲರಾದ ಕಲ್ಯಾಣಿ, ರಂಗರಾಜನ್, ಕಲೀಮ್, ವೆಂಕಟೇಶ್, ಸಿರಿಷ, ರಾಧಾ, ರೇಷ್ಮಾ, ರಾಜೇಶ್, ಲೆಕ್ಕಾಧಿಕಾರಿ ಶರವಣ ಸೇರಿರುವಂತೆ ಎಲ್ಲಾ ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಇದ್ದರು.ಸಿಕೆಬಿ-2 ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ವಿದ್ಯಾನಿಕೇತನದಲ್ಲಿ 10ನೇ ತರಗತಿಗಳ ವಿದ್ಯಾರ್ಥಿಗಳ ಪರೀಕ್ಷೆಗಳು ಮುಗಿದ ನಂತರ ಆಯೋಜಿಸಿದ್ದ ಪದವಿ ಪತ್ರ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳೊಂದಿಗೆ ಡಾ.ಪ್ರೀತಿ ಸುಧಾಕರ್