ಪಟ್ಟಣದಲ್ಲಿರುವ ಸಿ.ಎ.ಸೈಟ್‌ಗಳು, ಗಾರ್ಡನ್ ಜಾಗಗಳು ಹಾಗೂ ವಿವಿಧ ಲೇಔಟ್‌ಗಳಲ್ಲಿರುವ ಸರ್ಕಾರಿ ಜಾಗಗಳನ್ನು ಪಟ್ಟಣ ಪಂಚಾಯತಿ ಹೆಸರಿಗೆ ದಾಖಲಿಸುವ ಕಾರ್ಯದಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ನಾಲತವಾಡ ಪಟ್ಟಣ ಪಂಚಾಯತಿ ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರಾಗಲು ನಿರ್ಧಾರ ಕೈಗೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ನಾಲತವಾಡ
ಪಟ್ಟಣದಲ್ಲಿರುವ ಸಿ.ಎ.ಸೈಟ್‌ಗಳು, ಗಾರ್ಡನ್ ಜಾಗಗಳು ಹಾಗೂ ವಿವಿಧ ಲೇಔಟ್‌ಗಳಲ್ಲಿರುವ ಸರ್ಕಾರಿ ಜಾಗಗಳನ್ನು ಪಟ್ಟಣ ಪಂಚಾಯತಿ ಹೆಸರಿಗೆ ದಾಖಲಿಸುವ ಕಾರ್ಯದಲ್ಲಿ ವಿಳಂಬವಾಗಿರುವುದನ್ನು ಖಂಡಿಸಿ ನಾಲತವಾಡ ಪಟ್ಟಣ ಪಂಚಾಯತಿ ಸದಸ್ಯರು ಸಾಮಾನ್ಯ ಸಭೆಗಳಿಗೆ ಗೈರಾಗಲು ನಿರ್ಧಾರ ಕೈಗೊಂಡಿದ್ದಾರೆ.ಪಟ್ಟಣ ಪಂಚಾಯತಿ ಸದಸ್ಯರು ಈ ಕುರಿತು ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ, ಈಗಾಗಲೇ ನಡೆದ ಅನೇಕ ಸಭೆಗಳಲ್ಲಿ ಈ ವಿಷಯವನ್ನು ಹಲವು ಬಾರಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದರಿಂದ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಮಹತ್ವದ ವಿಷಯ ನಿರ್ಲಕ್ಷ್ಯಗೊಳ್ಳುತ್ತಿದೆ ಎಂದು ಆಕ್ಷೇಪಿಸಿದ್ದಾರೆ.ಪಟ್ಟಣದಲ್ಲಿರುವ ಸಿಎ ಸೈಟ್‌ಗಳು, ಗಾರ್ಡನ್ ಜಾಗಗಳು ಹಾಗೂ ಎಲ್ಲ ಲೇಔಟ್‌ಗಳಲ್ಲಿರುವ ಸರ್ಕಾರಿ ಜಾಗಗಳನ್ನು ನಿಯಮಾನುಸಾರವಾಗಿ ಪಟ್ಟಣ ಪಂಚಾಯತ ಹೆಸರಿಗೆ ದಾಖಲಿಸುವ ಹಾಗೂ ಸಂಬಂಧಿತ ಕ್ರಮಗಳನ್ನು ಪೂರ್ಣಗೊಳಿಸುವ ತನಕ ನಡೆಯುವ ಸಾಮಾನ್ಯ ಸಭೆಗಳಿಗೆ ಹಾಜರಾಗುವುದಿಲ್ಲವೆಂದು ಸದಸ್ಯರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಒಂದು ವೇಳೆ ಎರಡು ತಿಂಗಳ ಅವಧಿಯಲ್ಲಿ ಇದಾಗದಿದ್ದರೇ ಸದಸ್ಯತ್ವ ಸ್ಥಾನದಿಂದ ರಾಜೀನಾಮೆ ಸಲ್ಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.ಮುಖ್ಯಾಧಿಕಾರಿ ಈರಣ್ಣ ಕೊಣ್ಣೂರ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ನಿಯಮದಂತೆ ಹೊಸ ಲೇಔಟ್ ಗಳ ಜಾಗವನ್ನು ಪ.ಪಂ ಹೆಸರಿಗೆ ಮಾಡಿದ್ದೇವೆ. ಹಿಂದೆ ಗ್ರಾಮ ಪಂಚಾಯತಿ ಅವಧಿಯಲ್ಲಿ ಲೇಔಟಗಳ ದಾಖಲಾತಿ ನೀಡಲು ಸಾಕಷ್ಟು ಬಾರಿ ತಾ.ಪಂಗೆ ಪತ್ರ ಬರೆದರು ಅವರು ದಾಖಲೆ ನೀಡುತ್ತಿಲ್ಲ. ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದರು.
ಈ ವೇಳೆ ಸದಸ್ಯರಾದ ಪೃಥ್ವಿರಾಜ್ ನಾಡಗೌಡ, ಸಂಗಣ್ಣ ಬಾರಡ್ಡಿ, ಬಾಬು ಕ್ಷತ್ರಿ, ಪುತ್ರಪ್ಪ ಗುರಿಕಾರ, ರಮೇಶ ಆಲಕೊಪ್ಪರ, ಮಹ್ಮದ್ ನಾಡದಾಳ, ಸೇರಿದಂತೆ ಇನ್ನಿತರರು ಇದ್ದರು. ಸಾಕಷ್ಟು ಬಾರಿ ಸಾಮಾನ್ಯ ಸಭೆಯಲ್ಲಿ ಸರ್ಕಾರಿ ಜಾಗಗಳನ್ನು ಪ.ಪಂ ಹೆಸರಿಗೆ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದೇವೆ. ಗಾರ್ಡನ್ ಜಾಗಗಳು ಸಂಪೂರ್ಣ ಕಬಳಿಕೆಯಾಗಿವೆ. ಹಲವರು ಅದರಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಆದ್ದರಿಂದ ಕೂಡಲೇ ಮುಖ್ಯಾಧಿಕಾರಿ ಸಿಎ ಸೈಟ್ ಜಾಗ, ಗಾರ್ಡನ್ ಜಾಗ ಪ.ಪಂ ಅಂಡರ್ ತೆಗೆದುಕೊಳ್ಳದಿದ್ದರೇ ನಮ್ಮ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇವೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.