ಕನ್ನಡಪ್ರಭ ವಾರ್ತೆ ತಾಂಬಾ
ತಡವಗಾ ಗ್ರಾಮದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಹೋಬಳಿ ಮಟ್ಟದ ಪ್ರಜಾಸೇವೆ ಆಂದೋಲನದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಸಿಎಂ ಡಿ.ಕೆ.ಶಿವಕುಮಾರವರ ಸಂಕಲ್ಪದಂತೆ ಪ್ರತಿ ಶನಿವಾರ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಜನ ಸಂಪರ್ಕ ಸಭೆ ಆಯೋಜನೆ ಮಾಡಲಾಗುತ್ತದೆ. ಅದೇ ರೀತಿ ತಮ್ಮದೆಯಾದ ವಿಭಿನ್ನವಾದ ಮುಂದಾಲೋಚನೆ ಇಟ್ಟುಕೊಂಡು ಪ್ರಜಾ ಸೇವೆ ಮೂಲಕ ಆಡಳಿತವನ್ನು ಜನರ ಹತ್ತಿರಕ್ಕೆ ಕೊಂಡ್ಯೊಯುವ ಕಾರ್ಯ ಮಾಡಿದ್ದಾರೆ. ಇದರಿಂದ ಆ ಭಾಗದ ಜನರ ಸಮಸ್ಯಗಳು ಪರಿಹಾರವಾಗಬೇಕು. ಸಾರ್ವಜನಿಕರು ಕಚೇರಿಗಳಿಗೆ ಅಲೇದಾಡಬಾರದು ಎಂಬ ಪರಿಕಲ್ಪನೆಯಿಂದ ಸರ್ಕಾರ ಇಂತಹ ಮಹತ್ವದ ಹೆಜ್ಜೆ ಇಟ್ಟಿದೆ ಎಂದರು.
ಅಂದು ೮೪ ಟಿಎಂಸಿ ನೀರು ನಿಗದಿ ಮಾಡಿದ್ದರಿಂದ ಇಂದು ನಮ್ಮ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೆ ಬಂದಿದ್ದು ಅಂದು ಸಿದ್ದರಾಮಯ್ಯನವರು ಸಹಕರಿಸಿದ್ದರಿಂದ ಎಲ್ಲ ನೀರಾವರಿ ಯೋಜನೆಗಳು ಬರಲು ಸಾಧ್ಯವಾಗಿದೆ. ನಾವು ನೀರಾವರಿ ಯೋಜನಾ ಪ್ರದೇಶದ ಕೊನೆ ಹಂತದಲ್ಲಿ ಹುಟ್ಟಿದ್ದರಿಂದ ನೀರಿನ ಸ್ವಲ್ಪ ತೊಂದರೆ ಅನುಭವಿಸುವುದು ಸ್ವಾಭಾವಿಕ. ಕೊನೆ ಪಂಕ್ತಿ ಉಟ ಮಾಡುವು ಒಂದೇ ಕೊನೆ ಭಾಗದಲ್ಲಿ ಇರುವುದು ಒಂದೇ ಹಾಗಾಗಿ ತೊಂದರೆ ಅನುಭವಿಸುವುದು ಸ್ವಾಭಾವಿಕ ಎಂದರು.ಸಾರ್ವಜನಿಕರು ನೀಡಿದ ಕಂದಾಯ ಇಲಾಖೆ, ರಸ್ತೆ, ನೀರಾವರಿ, ಪಿಂಚಣಿ ಸೇರಿದಂತೆ ತಮ್ಮ ವೈಯಕ್ತಿಕ ಅಹವಾಲಗಳ ಅರ್ಜಿಗಳಿಗೆ ಅಧಿಕಾರಿಗಳಿಂದ ಪರಿಹಾರವನ್ನು ಶಾಸಕರು ಸೂಚಿಸಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಬಂದ ಕೆಲವು ಅರ್ಜಿಗಳಿಗೆ ಸ್ಥಳದಲ್ಲಿ ಪರಿಹಾರವನ್ನು ಅಧಿಕಾರಿಗಳಿಂದ ಸೂಚಿಸಿದರು. ಇನ್ನೂ ಸೂಕ್ತವಾದ ಉತ್ತರವನ್ನು ನೀಡಿ ತ್ವರಿತವಾಗಿ ಪರಿಹರಿಸಲು ಅಧಿಕಾರಿಗಳಿಗೆ ತಿಳಿಸಿದರು.ವೇದಿಕೆ ಮೇಲೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭಿಮಣ್ಣ ಕವಲಗಿ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ತಾಪಂ ಇಒ ಮಹಾದೇವಪ್ಪ ಏವೂರ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ ಕಾಳೆ, ಭೂಸ್ವಾಧಿನಾಧಿಕಾರಿ ಹಿರೇಮಠ, ಬಿ.ಸಿ.ಸಾವಕಾರ, ಎಂ.ಆರ್.ಪಾಟೀಲ, ತಮ್ಮಣ್ಣ ಪೂಜಾರಿ, ಆನಂದಪ್ಪ ದೇಸಾಯಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.ಇಂಡಿ ತಾಲೂಕು ತೀವ್ರ ಬರಗಾಲ ಛಾಯೆ ಆವರಿಸಿದ್ದರಿಂದ ರೈತ ವರ್ಗ ತೀವ್ರ ಸಂಕಷ್ಟದಲ್ಲಿದೆ. ಇದನ್ನು ಕಂಡು ಸರ್ಕಾರ ಬರ ಘೊಷಣೆ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ದೊರೆಯು ಎಲ್ಲ ಸೌಲಭ್ಯ ಮುಂಬರುವ ದಿನಗಳಲ್ಲಿ ನಮ್ಮ ಭಾಗದ ಪ್ರತಿಯೊಬ್ಬ ರೈತನಿಗೂ ಸಿಗಲಿದೆ.