ದಸರಾ ಆಹಾರ ಮೇಳದಲ್ಲಿ ಸವಿಸವಿ ರುಚಿಯ ಭಕ್ಷ್ಯಗಳು...!

KannadaprabhaNewsNetwork |  
Published : Oct 12, 2026, 01:15 AM IST
31 | Kannada Prabha

ಸಾರಾಂಶ

ಪ್ರತಿ 50 ಕಿ.ಮೀಗೆ ಆಹಾರ ಪದ್ಧತಿ ಬದಲಾಗುತ್ತದೆ. ಮೈಸೂರು, ಕರಾವಳಿ, ಉತ್ತರ ಕನ್ನಡ, ಹೈದಾರಾಬಾದ್‌, ಕೇರಳ ಸೇರಿದಂತೆ ವಿವಿಧ ರಾಜ್ಯ ಹೀಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಇದೆ, ಅದು ಭಾರತದಲ್ಲಿ ಮಾತ್ರ, ವಿಶೇಷವಾದ ಆಹಾರಗಳು ಸಿಗಲಿದೆ, ಆಹಾರ ಮೇಳದಲ್ಲಿ ಎಲ್ಲಾ ತರಹದ ಊಟ ದೊರೆಯುವುದು.

ಎಲ್.ಎಸ್. ಶ್ರೀಕಾಂತ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಹಾರ ಪ್ರಿಯರಿಗಾಗಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ಆಯೋಜಿಸಿರುವ ಆಹಾರ ಮೇಳವನ್ನು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ನಾಡಹಬ್ಬ ದಸರಾ ಎಂದರೆ ಯಾವುದೇ ಒಂದು ಜಾತಿಗಳಿಗೆ ಸೀಮಿತವಾಗಿಲ್ಲ, ಎಲ್ಲ ಧರ್ಮದವರು ಸೇರಿ ಸಂಭ್ರಮಿಸುವಂತಹ ಹಬ್ಬವಾಗಿದೆ.

ಹಿಂದೆ ಮಹಾರಾಜರು ನಡೆಸುತ್ತಿದ್ದ ರೀತಿಯಲ್ಲೆ ಎಲ್ಲ ಪಕ್ಷಗಳು ದಸರಾ ಹಬ್ಬವನ್ನು ಬಹಳ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿವೆ. ಮುಖ್ಯಮಂತ್ರಿಗಳು ಈ ಬಾರಿ ಇನ್ನೂ ವಿಶೇಷವಾಗಿ ಮಾಡುವ ಉದ್ದೇಶದಿಂದ ವಿಶೇಷವಾಗಿ ಸಿದ್ದತೆ ಮಾಡಿದ್ದಾರೆ ಎಂದರು.

ಅ. 25ರವರೆಗೂ ಆಹಾರ ಮೇಳ ನಡೆಯಲಿದ್ದು, 39 ವಿಶೇಷ ಆಹಾರ ಸ್ಟಾಲ್ ಸೇರಿದಂತೆ 140 ಸ್ಟಾಲ್ ಗಳಿವೆ. ಆಹಾರ ಮೇಳದಲ್ಲಿ ಕುಡಿಯುವ ನೀರು ಸೇರಿದಂತೆ ಆಹಾರವು ಗುಣಮಟ್ಟದಿಂದ ಕೂಡಿರಬೇಕು. ಆಹಾರ ಮೇಳಕ್ಕೆ ಆಗಮಿಸುವ ಜನರ ಆರೋಗ್ಯವನ್ನು ಕಾಪಾಡುವುದು ನಮ್ಮ ಕರ್ತವ್ಯವಾಗಿದ್ದು, ತಿನ್ನುವ ಆಹಾರ, ಕುಡಿಯುವ ನೀರಿಗೆ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿ 50 ಕಿ.ಮೀ ಗೆ ಆಹಾರ ಪದ್ಧತಿ ಬದಲಾಗುತ್ತದೆ. ಮೈಸೂರು, ಕರಾವಳಿ, ಉತ್ತರ ಕನ್ನಡ, ಹೈದಾರಾಬಾದ್‌, ಕೇರಳ ಸೇರಿದಂತೆ ವಿವಿಧ ರಾಜ್ಯ ಹೀಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಇದೆ, ಅದು ಭಾರತದಲ್ಲಿ ಮಾತ್ರ, ವಿಶೇಷವಾದ ಆಹಾರಗಳು ಸಿಗಲಿದೆ, ಆಹಾರ ಮೇಳದಲ್ಲಿ ಎಲ್ಲಾ ತರಹದ ಊಟ ದೊರೆಯುವುದು ಎಂದರು.

ಆಹಾರ ಮೇಳ ಉದ್ಘಾಟನೆ ನನ್ನ ಭಾಗ್ಯ. ನಾನು ಮೈಸೂರಿನವನಾಗಿದ್ದು, ಮೈಸೂರು ಜನರ ಸೇವೆ ಸಲ್ಲಿಸಲು ಇದು ಸದವಕಾಶವಾಗಿದೆ ಎಂದು ತಿಳಿಸಿದರು.

ಆಹಾರ ಮೇಳ ಉದ್ಘಾಟನೆಯ ನಂತರ ಸಚಿವರು ಪುಡಿ ಬೆಣ್ಣೆ ದೋಸೆ, ವಿಶ್ವವಿಖ್ಯಾತಿ ಬಂಬೂ ಬಿರಿಯಾನಿ, ಸುಲ್ತಾನ್‌, ಮತ್ಸ್ಯ ದರ್ಶಿನಿ, ಬುಡಕಟ್ಟು ಶೈಲಿಯಲ್ಲಿ ಬೊಂಬು ಬಿರಿಯಾನಿ, ಹೋಟೆಲ್‌ನ್ಯೂ ಶ್ರೀ, ಅಭಿಮನ್ಯು ಬಿರಿಯಾನಿ, ಗೌಡ್ರು ಮನೆ ಬೀಗರ ಊಟ, ಅರೇಬಿಯನ್‌ಬಿರಿಯಾನಿ, ಆರೋನ್‌ರೋಲ್ಸ್‌ಮಳಿಗೆಗಳಿಗೆ ಭೇಟಿ ನೀಡಿ ಆಹಾರಗಳ ರುಚಿಯನ್ನು ಸವಿದು, ಸ್ವಚ್ಛತೆ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ಮಾಲೀಕರಿಗೆ ಸೂಚಿಸಿದರು.

ಮೈಸೂರು ದಸರಾ ಆಹಾರ ಮೇಳ ವಿಶೇಷಾಧಿಕಾರಿ ಬಿ..ಎನ್‌. ವೀಣಾ, ಹಲವು ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೋದಾರ್ ಶಾಲೆಯಲ್ಲಿ ಸಂಭ್ರಮದ ನವರಾತ್ರಿ ದಾಂಡಿಯಾ ಉತ್ಸವ
ಹಾಸನ ಜಿಲ್ಲೆಯಲ್ಲಿ ಜನತಾದಳ ಸಂಘಟನೆ ಬಲಪಡಿಸಲು ಮಹಿಮಾ ಪಟೇಲ್ ಸೂಚನೆ