ದೆಹಲಿಯ ಅಂತಾರಾಷ್ಟ್ರೀಯ ಕಿಕ್‌ಬಾಕ್ಸಿಂಗ್‌: ಆದರ್ಶ ಶಾಲೆ ಸಾಧನೆ

KannadaprabhaNewsNetwork |  
Published : Feb 14, 2026, 01:45 AM IST
ಕೊಳ್ಳೇಗಾಲದ ಆದರ್ಶ ಶಾಲೆಯ ವಿದ್ಯಾರ್ಥಿನಿ ಜೀವಿತಾ ಹಾಗೂ ಅವರ ತಾಯಿ ಅಂತಾರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ 1 ಚಿನ್ನ, 8 ಕಿಂಚಿನ ಪದಕ ವಿಜೇತರಾಗಿದ್ದಾರೆ. ವಿಜೇತರ ಜೊತೆ ತರಬೇತುದಾರರಾದ  ಡಿ.ಚಂದ್ರು,  ಅಂಬರೀಶ್ ಇದ್ದಾರೆ. | Kannada Prabha

ಸಾರಾಂಶ

ಇತ್ತೀಚೆಗೆ ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ವಾಕೋ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತರಬೇತುದಾರ ಸೆನ್ಸಾಯ್‌ ಡಿ. ಚಂದ್ರು, ಅಂಬರೀಶ್ ನೇತೖತ್ವದ ತಂಡಕ್ಕೆ 1 ಚಿನ್ನ ಹಾಗೂ 8 ಕಂಚಿನ ಪದಕಗಳು ಸಂದಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಇತ್ತೀಚೆಗೆ ನವದೆಹಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ವಾಕೋ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಿಕ್‌ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ತರಬೇತುದಾರ ಸೆನ್ಸಾಯ್‌ ಡಿ. ಚಂದ್ರು, ಅಂಬರೀಶ್ ನೇತೖತ್ವದ ತಂಡಕ್ಕೆ 1 ಚಿನ್ನ ಹಾಗೂ 8 ಕಂಚಿನ ಪದಕಗಳು ಸಂದಿದೆ.

ದೆಹಲಿಯಲ್ಲಿ ಫೆ.4ರಿಂದ 4 ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಮಟ್ಟದ ಕಿಕ್‌ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಓರ್ವ ಮಹಿಳೆ ಮತ್ತು 4 ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿ 1 ಚಿನ್ನ ಹಾಗೂ 8 ಕಂಚಿನ ಪದಕಗಳನ್ನು ಗಳಿಸಿದ್ದು, ಮಾಸ್ಟರ್ ಕ್ಯಾಟಗರಿಯ ಕಿಕ್‌ಲೈಟ್ ವಿಭಾಗದಲ್ಲಿ ಕೊಳ್ಳೇಗಾಲ ಪಟ್ಟಣದ ಬಸ್ತಿಪುರ ಗ್ರಾಮದ ಪುಷ್ಪಲತಾ ಅವರು 41 ವರ್ಷದ ವಿಭಾಗದಲ್ಲಿ ವಿಜೇತರಾಗಿ 1 ಚಿನ್ನದ ಪದಕಗಳಿಸಿದ್ದಾರೆ. ಅದೇ ರೀತಿ ಇವರ ಪುತ್ರಿ ಜೀವಿತಾ (ಆದರ್ಶ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವೇಪನ್ಸ್‌ ಮತ್ತು ಓಪನ್ ಹ್ಯಾಂಡ್ 2 ವಿಭಾಗದಲ್ಲೂ 2 ಕಂಚಿನ ಪದಕಗಳಿಸಿದ್ದು ಈ ಸ್ಪರ್ಧೆಯಲ್ಲಿ ಅಮ್ಮ, ಮಗಳಿಬ್ಬರು ಸಾಧನೆಗೈದು ಪ್ರಶಂಸೆಗೆ ಭಾಜನರಾಗಿದ್ದಾರೆ. ಉಳಿದಂತೆ ಕೊಳ್ಳೇಗಾಲ ಪಟ್ಟಣದ ಕುಕ್ಕೆ ಹೋಟೆಲ್‌ ಸಹ ಮಾಲೀಕ ನಾಗರಾಜು ಅವರ ಪುತ್ರಿ ಹಾಗೂ ವಾಸವಿ ವಿದ್ಯಾಸಂಸ್ಥೆಯ 6ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಓಪನ್ ಹ್ಯಾಂಡ್, ವೆಪಾನ್ ಹಾಗೂ ಮ್ಯೂಸಿಕಲ್ ವೆಪಾನ್ ಫಾಮ್‌ನ 3 ವಿಭಾಗಗಳಲ್ಲೂ 3 ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ.

ಅದೇ ರೀತಿಯಲ್ಲಿ ಕೊಳ್ಳೇಗಾಲ ವ್ಯಾಪ್ತಿಯ ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ನಿತ್ಯಶ್ರೀ (ಆದರ್ಶ ಸರ್ಕಾರಿ ಶಾಲೆ) ವಿದ್ಯಾರ್ಥಿನಿ ಲೈಟ್ ಕಾಂಟಾಕ್ಟ್ ಮತ್ತು ಓಪನ್ ಹ್ಯಾಂಡ್ ಫಾಮ್‌ನ 2 ವಿಭಾಗಗಳಲ್ಲೂ 2 ಕಂಚಿನ ಪದಕಗಳಿಸಿದ್ದಾರೆ. ಯಳಂದೂರು ಪಟ್ಟಣದ ಸ್ನೇಹಾ (7ನೇ ತರಗತಿ ಆದರ್ಶ ಶಾಲೆ ಮೆಲ್ಲಳ್ಳಿ) ಕಿಕ್‌ ಲೈಟ್ ವಿಭಾಗದಲ್ಲಿ 1 ಕಂಚಿನ ಪದಕ ಪಡೆದು ಸಾಧನೆಗೈದಿದ್ದಾರೆ. ಸಾಧಕರನ್ನು ತರಬೇತುದಾರರಾದ ಚಂದ್ರು.ಡಿ, ಅಂಬರೀಶ್ ಅಭಿನಂದಿಸಿದ್ದಾರೆ.

ಪದಕ ಪಡೆದವರು

ಪುಷ್ಪಲತಾ (ಚಿನ್ನ), ಜೀವಿತಾ, (2 ಕಂಚು), ಸಾನ್ವಿ (3 ಕಂಚು), ನಿತ್ಯಶ್ರೀ (2 ಕಂಚು), ಸ್ನೇಹಾ (1 ಕಂಚು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಲ್ಲದ ಚಿರತೆ ದಾಹ: ಎರಡು ಮೇಕೆ ಆಹುತಿ
ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರೀಲಿ ಭೀಕರ ಅಪಘಾತ: 7 ಜನ ದುರ್ಮರಣ