ಹೊಳೆನರಸಿಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ಲಿಖಿತ ಎಚ್.ಜೆ. ಅವರು, ಜನವರಿ ೨೬ ರಂದು ದೆಹಲಿಯ ಕೆಂಪುಕೋಟೆ ಮೈದಾನದಲ್ಲಿ ಜರುಗಿದ ೭೫ನೇ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿ, ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದ ಸವಿತ ಸಮಾಜದ ಎಚ್.ಡಿ.ಜಯರಾಮ ಶುಭಲಕ್ಷ್ಮೀ ದಂಪತಿಗಳ ಪುತ್ರಿ ಲಿಖಿತ, ೧೫ ನೇ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ಹಾಸನದಿಂದ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಅವರ ಸಾಧನೆಯನ್ನು ತಾ. ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್ ಹಾಗೂ ಸದಸ್ಯರು, ಸಂಘ, ಸಂಸ್ಥೆಗಳ ಪದಾಧಿಕಾರಿಗಳು,ಗಣ್ಯರು ಅಭಿನಂದಿಸಿದ್ದಾರೆ.