ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಶಕ್ತಿಯೋಜನೆ ಹಾಗೂ ಯುವನಿಧಿ ಯೋಜನೆಗಳು ತಾಲೂಕಿನಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗಿವೆ. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಇದೇ ಉತ್ಸಾಹದಿಂದ ಕರ್ತವ್ಯ ನಿರ್ವಹಿಸಬೇಕು. ಯಾವ ಫಲಾನುಭವಿಗೆ ಸೌಲಭ್ಯ ದೊರೆತಿಲ್ಲ ಎನ್ನುವ ಮಾಹಿತಿ ಪಡೆದು ಅವರಿಗೆ ಯೋಜನೆಗಳನ್ನು ತಲುಪಿಸಬೇಕು. ಬಹುತೇಕ ಬಡ ಸಮುದಾಯಗಳೇ ಹೆಚ್ಚಾಗಿ ವಾಸಿಸುವ ಈ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.ತಾಲೂಕಿನ ಗಡಿ ಗ್ರಾಮಗಳಲ್ಲಿ ಏಕಾಏಕಿ ವಿದ್ಯುತ್ ಸ್ಥಗಿತದ ಅನೇಕರು ದೂರು ನೀಡುತ್ತಿದ್ದಾರೆ. ಬೆಸ್ಕಾಂ ಇಲಾಖೆಯವರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಲೈನ್ ಮ್ಯಾನ್ ಗಳು ತಮ್ಮ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ವಾಸ ಮಾಡುವುದರಿಂದ ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. ಈ ಸಂಬಂಧ ಬೆಸ್ಕಾಂ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ತಿಳಿ ಹೇಳಬೇಕು ಎಂದು ಸಭೆಯಲ್ಲಿ ಸಮಿತಿ ಸದಸ್ಯರು ತಿಳಿಸಿದಾಗ ಮುಂದಿನ ಸಭೆಗೆ ಬೆಸ್ಕಾಂ ಅಧಿಕಾರಿಗಳು ಯಾವ ಗ್ರಾಮದಲ್ಲಿನ ಯಾವ ವಾರ್ಡ್ ಯಾವ ಲೈನ್ ಮ್ಯಾನ್ ನೇಮಿಸಲಾಗಿದೆ ಎನ್ನುವ ಮಾಹಿತಿ ತಿಳಿಸಿ, ಹೆಸರು ಹಾಗೂ ಇವರ ಮೊಬೈಲ್ ಸಂಖ್ಯೆಯನ್ನು ಖಡ್ಡಾಯವಾಗಿ ನೀಡಬೇಕು. ಸಮಸ್ಯೆ ತಿಳಿಸಿದಾಗ ನಾವು ಅವರಿಗೆ ಸಂಬಂಧಿಸಿದ ಲೈನ್ ಮ್ಯಾನ್ ಗೆ ಮಾಹಿತಿ ಹೇಳಲು ಅನುಕೂಲವಾಗಲಿದೆ ಎಂದು ಸಮಿತಿ ಸದಸ್ಯ ಇ.ಎಸ್.ವಿಜಯಕುಮಾರ್ ತಿಳಿಸಿದ್ದಕ್ಕೆ ಬೆಸ್ಕಾಂ ಸಹಾಯಕ ಎಂಜಿನಿಯರ್ ರಾಜಪ್ಪ ಸಮ್ಮತಿ ಸೂಚಿಸಿದರು.ಸಭೆಯಲ್ಲಿ ತಾಪಂ ಇಒ ಎಚ್.ಹನುಮಂತಪ್ಪ, ಸಿಡಿಪಿಒ ನವೀನ್ ಕುಮಾರ್, ಆಹಾರ ಶೀರೆಸ್ಸೇದಾರ್ ಗೀತಾಂಜನೇಯ, ಕೆಎಸ್‌ಆರ್‌ಟಿಸಿ ಮೇಲ್ವಿಚಾರಕ ಶಶಿಧರ್, ತಾಪಂ ವ್ಯವಸ್ಥಾಪಕ ನಂದೀಶ್, ಜಿಲ್ಲಾ ಸದಸ್ಯ ಜಿ.ಪಿ.ಸುರೇಶ್, ತಾಲೂಕು ಸದಸ್ಯರಾದ ಮಹಮ್ಮದ್ ರಫೀ, ಕೆ.ಸಿ.ಮಂಜುನಾಥ್, ಎಸ್.ಎಚ್.ನರಸಿಂಹರೆಡ್ಡಿ, ಜಿ.ಗೋವಿಂದಪ್ಪ, ಸಿ.ಹೊನ್ನೂರಪ್ಪ, ಲೋಕೇಶ್ ಪಲ್ಲವಿ, ಪಾಲಯ್ಯ, ಎಸ್.ಸಿ.ಸಿದ್ದಪ್ಪ ಇದ್ದರು.