ಕನ್ನಡಪ್ರಭ ವಾರ್ತೆ ಯಲ್ಲಾಪುರಭೌಗೋಳಿಕವಾಗಿ ಅತ್ಯಂತ ದುರ್ಗಮ ಹಳ್ಳಿಗಳನ್ನು ಹೊಂದಿರುವ ಯಲ್ಲಾಪುರ ತಾಲೂಕಿನಲ್ಲಿ ಆರೋಗ್ಯ ಸೌಲಭ್ಯಗಳನ್ನು ಮನೆ ಮನೆಗೆ ತಲುಪಿಸುವುದು ಮಹತ್ವದ್ದಾಗಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಹೇಳಿದರು. ಟಿ.ಎಂ.ಎಸ್. ಸಭಾಭವನದಲ್ಲಿ ನಡೆದ ಆರೋಗ್ಯ ಭಾರತಿ ಯಲ್ಲಾಪುರ ತಾಲೂಕು ಸಮಿತಿಯ ಪುನರ್ ರಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಸ್ಥ ಪರಿವಾರದ ಕಲ್ಪನೆ ಹೊಂದಿರುವ ಆರೋಗ್ಯ ಭಾರತಿಯ ಕಾರ್ಯ ಪ್ರಶಂಸನೀಯ ಎಂದರು. ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸಂತೋಷ್ ಎ.ಎಸ್. ಮಾತನಾಡಿದರು. ಆನಗೋಡ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅಧ್ಯಕ್ಷತೆ ವಹಿಸಿದ್ದರು.
ನೂತನ ಅಧ್ಯಕ್ಷರಾಗಿ ಎಸ್.ಟಿ.ಭಟ್ಟ, ಉಪಾಧ್ಯಕ್ಷರಾಗಿ ಡಾ. ನಾಗರಾಜ ಭಟ್ಟ, ಕಾರ್ಯದರ್ಶಿಯಾಗಿ ಶ್ರೀಪಾದ ಹೆಗಡೆ, ಸಹಕಾರ್ಯದರ್ಶಿಯಾಗಿ ಮಂಜುನಾಥ್. ಬಿ. ಶೇಟ್, ಮಹಿಳಾ ಪ್ರಮುಖರಾಗಿ ಗೌರಿ ನಂದೋಳ್ಳಿಮಠ್ ಆಯ್ಕೆಯಾದರು.
ಪ್ರಾರಂಭದಲ್ಲಿ ಆರೋಗ್ಯಭಾರತಿ ತಾಲೂಕಾ ಅಧ್ಯಕ್ಷ ಎಸ್.ಟಿ. ಭಟ್ಟ ಸ್ವಾಗತಿಸಿದರು. ಶಿರಸಿ ಜಿಲ್ಲಾ ಆರೋಗ್ಯ ಭಾರತಿಯ ಅಧ್ಯಕ್ಷ ಸುರೇಶ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶ್ರೀಪಾದ ಹೆಗಡೆ ಕಾರ್ಯಕ್ರಮ ನಿರೂಪಿದರು. ಸಹ ಕಾರ್ಯದರ್ಶಿ ಮಂಜುನಾಥ್ ಬಿ. ಶೇಟ್ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಕೃಷಿಕರು, ವ್ಯಾಪಾರಸ್ಥರು, ಸ್ವರ್ಣವಲ್ಲಿ ಮಾತೃ ಮಂಡಳಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಪದಾಧಿಕಾರಿಗಳು, ಸಂಘ ಪರಿವಾರದ ಪದಾಧಿಕಾರಿಗಳು, ದೈವಜ್ಞ ಸಮಾಜದ ಮುಖಂಡರು ಇನ್ನು ಹಲವಾರು ಸಂಘಟನೆಗಳ ಸದಸ್ಯರು ಪಾಲ್ಗೊಂಡಿದ್ದರು.