ವಿಶ್ವಗುರು ಬಸವಣ್ಣಗೆ ಅವಮಾನಿಸಿದ ವ್ಯಕ್ತಿ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : May 30, 2024, 12:53 AM IST
ಸುರಪುರದಲ್ಲಿ ವಿಶ್ವಗುರು ಬಸವಣ್ಣನವರಿಗೆ ಅವಮಾನಿಸಿದ ವ್ಯಕ್ತಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ವತಿಯಿಂದ ಡಿವೈಎಸ್ಪಿ  ಜಾವಿದ್ ಇನಾಂದಾರ್ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸುರಪುರದಲ್ಲಿ ವಿಶ್ವಗುರು ಬಸವಣ್ಣನವರಿಗೆ ಅವಮಾನಿಸಿದ ವ್ಯಕ್ತಿ ಮೇಲೆ ಕ್ರಮಕ್ಕೆ ಆಗ್ರಹಿಸಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆ ವತಿಯಿಂದ ಡಿವೈಎಸ್ಪಿ ಜಾವಿದ್ ಇನಾಂದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಬಸ್ ನಿಲ್ದಾಣದಲ್ಲಿ ಕೆಲ ದಿನಗಳ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ಬಸ್ ನಿಲ್ದಾಣದ ನಿಯಂತ್ರಕರೊಂದಿಗೆ ವಾಗ್ವಾದ ನಡೆಸಿ, ಬಸ್ ನಿಲ್ದಾಣದಲ್ಲಿ ಬಸವಣ್ಣನ ಭಾವಚಿತ್ರ ಏಕೆ ಹಾಕಿದ್ದೀರಿ, ಏಸುಕ್ರಿಸ್ತನ ಭಾವಚಿತ್ರವನ್ನು ಹಾಕಬೇಕು. ಬಸವ ಕಲ್ಯಾಣ ಎಂದು ಹೆಸರು ಏಕೆ ಇಟ್ಟಿದ್ದೀರಿ, ಏಸು ಕಲ್ಯಾಣ ಎಂದು ಇಡಬೇಕು, ಬಸವಣ್ಣ 12ನೇ ಶತಮಾನದಲ್ಲಿ ಬಂದಿದ್ದಾನೆ, ಏಸು ಬಸವಣ್ಣನಿಗಿಂತ ಮೊದಲೆ ಬಂದಿದ್ದು, ಏಸು ಕಲ್ಯಾಣ ಎಂದು ಹೆಸರಿಡಬೇಕು ಎಂದು ಉದ್ಧಟತನದ ಮಾತುಗಳನ್ನಾಗಿ ಬಸವಣ್ಣನವರಿಗೆ ಅವಮಾನಿಸುವ ಜೊತೆಗೆ ಬಸವಣ್ಣನ ಅಭಿಮಾನಿಗಳಿಗೆ ನೋವುಂಟು ಮಾಡಿದ್ದಾನೆ.

ಕೂಡಲೇ ಆ ವ್ಯಕ್ತಿ ಯಾರು ಎಂದು ಪತ್ತೆ ಮಾಡಿ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ನೇತೃತ್ವದಲ್ಲಿ ಅನೇಕ ಮುಖಂಡರು ನಗರದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಜಾವಿದ್ ಇನಾಂದಾರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಸಿದರು.

ಈ ಸಂದರ್ಭದಲ್ಲಿ ಸುರಪುರ ಠಾಣೆಯ ಪೊಲೀಸ್ ಇನ್‌ಸ್ಪೇಕ್ಟರ್ ಆನಂದ ವಾಘಮೊಡೆ ಅವರಿಗೆ ಮತ್ತು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಮುಖಂಡರಾದ ಸಿದ್ದಲಿಂಗಯ್ಯಸ್ವಾಮಿ, ಮಲ್ಲಣ್ಣ ಸಾಹು, ರವಿಗೌಡ ಹೆಮನೂರ, ಪ್ರದೀಪ ಕದರಾಪುರ, ಸಿದ್ದನಗೌಡ ಹೆಬ್ಬಾಳ, ಶಾಂತಗೌಡ ಗೋನಾಲ, ಗುರುನಾಥರಡ್ಡಿ, ಬಸನಗೌಡ ಪಾಟೀಲ್ ಸೇರಿದಂತೆ ಅನೇಕರಿದ್ದರು.ಬಸ್ ನಿಲ್ದಾಣದಲ್ಲಿ ಬಸವಣ್ಣನವರಿಗೆ ಅವಮಾನಕರವಾಗಿ ಮಾತನಾಡಿ, ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಲು ಕಾರಣವಾದ ವ್ಯಕ್ತಿ ಬೀದರ್ ಜಿಲ್ಲೆಯ ಬೀದರ್ ತಾಲೂಕಿನ ನಾಗವಾರ ಗ್ರಾಮದ ಜಿ. ಜೈಶೀಲ ಪಾಸ್ಟರ್ ಎನ್ನಲಾಗಿದ್ದು, ಈತನು ಸುರಪುರ ತಾಲೂಕಿನ ಸೂಗೂರ ಗ್ರಾಮದಲ್ಲಿ ವಾಸವಾಗಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರು ಆದಷ್ಟು ಬೇಗ ಈತನ ಕರೆತಂದು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು.

- ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ, ಅಕವೀಲಿಂ ಸಮಾಜ ಸಂಘದ ರಾಜ್ಯಾಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ರೈಲ್ವೆ ಬಡ್ತಿ ಪರೀಕ್ಷೆ ಕನ್ನಡದಲ್ಲೂ ನಡೆಸಲು ಸೋಮಣ್ಣ ತಾಕೀತು