ಮುಂಗಾರು ಹಂಗಾಮಿಗೆ ಸಿದ್ಧತೆ

KannadaprabhaNewsNetwork |  
Published : May 30, 2024, 12:53 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಬಹುತೇಕ ತಾಲೂಕಿನಲ್ಲಿ ಈಗಾಗಲೇ ಮಳೆ ಸುರಿದಿದ್ದು, ಕೃಷಿ ಕೆಲಸ ಕಾರ್ಯಗಳಿಗೆ ಅಗತ್ಯ ಸಿದ್ಧತೆಗಳನ್ನು ರೈತರು ಮಾಡಿಕೊಳ್ಳುತ್ತಿದ್ದಾರೆ.

ಕಾರವಾರ: ಮುಂಗಾರು ಮಳೆಯ ಸಿಂಚನ ಸಮೀಪಿಸುತ್ತಿದ್ದು, ಕೃಷಿ ಇಲಾಖೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ರೈತರಿಗೆ ನೀಡಲು ಆರಂಭಿಸಿದೆ. ಪ್ರಸಕ್ತ ಹಂಗಾಮಿನಲ್ಲಿ ೭೨೫೦.೦೦ ಕ್ವಿಂಟಲ್ ಬಿತ್ತನೆ ಬೀಜ ಹಾಗೂ ೩೨೨೫೦ ಮೆಟ್ರಿಕ್ ಟನ್ ರಸಗೊಬ್ಬದ ಬೇಡಿಕೆಯಿದೆ.

ಬಹುತೇಕ ತಾಲೂಕಿನಲ್ಲಿ ಈಗಾಗಲೇ ಮಳೆ ಸುರಿದಿದ್ದು, ಕೃಷಿ ಕೆಲಸ ಕಾರ್ಯಗಳಿಗೆ ಅಗತ್ಯ ಸಿದ್ಧತೆಗಳನ್ನು ರೈತರು ಮಾಡಿಕೊಳ್ಳುತ್ತಿದ್ದಾರೆ. ಮುಂಗಾರು ಪ್ರವೇಶಿಸುತ್ತಿದ್ದಂತೆ ಕೆಲಸಗಳು ಆರಂಭವಾಗಲಿದೆ. ಜಿಲ್ಲೆಯಲ್ಲಿ ಭತ್ತ ಪ್ರಮುಖವಾಗಿ ಬೆಳೆಯಲಾಗುತ್ತಿದ್ದು, ಮೆಕ್ಕೆಜೋಳ ಕೂಡಾ ಕೆಲವು ಭಾಗದಲ್ಲಿ ಬೆಳೆಯಲಾಗುತ್ತದೆ.

ಬಿತ್ತನೆ ಬೀಜ ಬೇಡಿಕೆ: ಕಾರವಾರ ತಾಲೂಕಿನಲ್ಲಿ ೧೦೦ ಕ್ವಿಂಟಲ್ ಬೇಡಿಕೆಯಿದ್ದು, ೫೦ ಕ್ವಿಂಟಲ್ ಸರಬರಾಜಾಗಿದೆ. ಅಂಕೋಲಾದಲ್ಲಿ ೮೦೦ ಕ್ವಿಂಟಲ್ ಬೇಡಿಕೆಯಿದ್ದು, ೫೮೩.೪೫ ಕ್ವಿಂಟಲ್ ಸರಬರಾಜು, ಕುಮಟಾ ೮೦೦ ಕ್ವಿಂಟಲ್ ಬೇಡಿಕೆಯಿದ್ದು, ೪೬೬.೬೫ ಕ್ವಿಂಟಲ್ ಸರಬರಾಜು, ಹೊನ್ನಾವರ ೮೦೦ ಕ್ವಿಂಟಲ್ ಬೇಡಿಕೆಯಿದ್ದು, ೬೭೫ ಕ್ವಿಂಟಲ್ ಸರಬರಾಜು, ಭಟ್ಕಳ ೮೦೦ ಕ್ವಿಂಟಲ್ ಬೇಡಿಕೆಯಿದ್ದು, ೫೩೫ ಕ್ವಿಂಟಲ್ ಸರಬರಾಜು, ಶಿರಸಿ ೮೦೦ ಕ್ವಿಂಟಲ್ ಬೇಡಿಕೆಯಿದ್ದು, ೪೮೪ ಕ್ವಿಂಟಲ್ ಸರಬರಾಜು, ಸಿದ್ದಾಪುರ ೪೦೦ ಕ್ವಿಂಟಲ್ ಬೇಡಿಕೆಯಿದೆ. ೧೦೦ ಕ್ವಿಂಟಲ್ ಸರಬರಾಜು, ಯಲ್ಲಾಪುರ ೪೦೦ ಕ್ವಿಂಟಲ್ ಬೇಡಿಕೆಯಿದ್ದು, ೧೫೦ ಕ್ವಿಂಟಲ್ ಸರಬರಾಜು, ಮುಂಡಗೋಡ ೧ ಸಾವಿರ ಕ್ವಿಂಟಲ್ ಬೇಡಿಕೆಯಲ್ಲಿ ೬೮೯.೬೦ ಪೂರೈಕೆ, ಹಳಿಯಾಳ ೮೦೦ ಕ್ವಿಂಟಲ್‌ಗೆ ೮೫೦.೩೬ ಕ್ವಿಂಟಲ್ ಸರಬರಾಜು, ಜೋಯಿಡಾ ೫೦೦ ಕ್ವಿಂಟಲ್ ಬೇಡಿಕೆಯಲ್ಲಿ ೨೪೫ ಕ್ವಿಂಟಲ್ ಸರಬರಾಜು, ದಾಂಡೇಲಿ ತಾಲೂಕಿನಲ್ಲಿ ೫೦ ಕ್ವಿಂಟಲ್ ಬೇಡಿಕೆಯಿದ್ದು, ೩೨.೮೦ ಕ್ವಿಂಟಲ್ ಸರಬರಾಜಾಗಿದೆ.

ಅಂಕೋಲಾ ೯.೬೬, ಕುಮಟಾ ೮೧.೨೧, ಹೊನ್ನಾವರ ೩೦೯.೭೦, ಭಟ್ಕಳ ೧೧೫, ಸಿದ್ದಾಪುರ ೧೫, ಯಲ್ಲಾಪುರ ೧೮.೮೩, ಮುಂಡಗೋಡ ೧೩೮.೫೦, ಹಳಿಯಾಳ ೫೭೬.೮೬, ದಾಂಡೇಲಿ ತಾಲೂಕಿನಲ್ಲಿ ೨೩.೫೫ ಕ್ವಿಂಟಲ್ ಈಗಾಗಲೇ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ಇಲಾಖೆಗೆ ಸರಬರಾಜಾದ ಒಟ್ಟೂ ೪೮೬೧.೮೬ ಕ್ವಿಂಟಲ್‌ನಲ್ಲಿ ೧೨೮೮.೩೧ ಕ್ವಿಂಟಲ್ ವಿತರಣೆ ಮಾಡಲಾಗಿದ್ದು, ೩೫೭೩.೫೫ ಕ್ವಿಂಟಲ್ ದಾಸ್ತಾನು ಇದೆ.

ರಸಗೊಬ್ಬರ ಬೇಡಿಕೆ

ಮುಂಗಾರು ಹಂಗಾಮಿಗೆ ರಸಗೊಬ್ಬರದ ಬೇಡಿಕೆ ೩೨೨೫೦ ಮೆಟ್ರಿಕ್ ಟನ್‌ ಆಗಿದ್ದು, ೨೩೮೭೭ ಮೆಟ್ರಿಕ್ ಟನ್ ಸರಬರಾಜಾಗಿದೆ. ೮೯೧೭ ಮೆಟ್ರಿಕ್ ಟನ್ ವಿತರಣೆ ಮಾಡಲಾಗಿದೆ. ೧೪೯೫೯ ಮೆಟ್ರಿಕ್ ಟನ್ ಉಳಿಕೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!