ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳು ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿ ಗುಟ್ಕಾ ನಿಷೇಧದ ಮಾದರಿಯಲ್ಲಿ ಮದ್ಯಪಾನ, ಧೂಮಪಾನ ಬ್ಯಾನ್ ಮಾಡುವಂತೆ ಆಗ್ರಹಿಸಿದವು.
ರೈತ ಸಂಘ, ಜನಪರ ಸಂಘಟನೆಗಳ ಆಗ್ರಹ । ಬರಪೀಡಿತ ಪಟ್ಟಿಯಿಂದ ಮೂರು ತಾಲೂಕು ಹೊರಗಿಟ್ಟಿದ್ದಕ್ಕೆ ಆಕ್ರೋಶಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗುಟ್ಕಾ ಮಾದರಿಯಲ್ಲಿಯೇ ಮದ್ಯಪಾನ, ಧೂಮಪಾನ ನಿಷೇಧ ಮಾಡುವಂತೆ ರೈತ ಸಂಘ ಹಾಗೂ ವಿವಿಧ ಜನಪರ ಸಂಘಟನೆಗಳು ಆಗ್ರಹಿಸಿವೆ.
ಇಲ್ಲಿನ ಪ್ರವಾಸ ಮಂದಿರದಲ್ಲಿ ಸಭೆ ಸೇರಿದ್ದ ಸಂಘಟನೆಗಳು ಬರಪೀಡಿತ ಪಟ್ಟಿಯಿಂದ ಚಿತ್ರದುರ್ಗ, ಮೊಳಕಾಲ್ಮುರು ಹಾಗೂ ಹೊಳಲ್ಕೆರೆ ತಾಲೂಕನ್ನು ಹೊರಗಿಟ್ಟ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ಸೇರಿದ್ದ ಸಂಘದ ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲೆಯ ಮೂರು ತಾಲೂಕುಗಳು ಬರದಿಂದ ಕಂಗೆಟ್ಟಿದ್ದರೂ ಸರ್ಕಾರ ಬರ ಘೋಷಣೆ ಮಾಡದೇ ಇರುವುದು ಆತಂಕ ತಂದಿದೆ. ರಾಜ್ಯ ಸರ್ಕಾರ ರೈತರ ಮೇಲೆ ಗಧಾ ಪ್ರಹಾರ ನಡೆಸುತ್ತಿದೆ. ಗುಟ್ಕಾ ನಿಷೇಧದ ತೀರ್ಮಾನ ಕೈಗೊಂಡಿದೆ, ಆದೇ ರೀತಿ ಮದ್ಯಪಾನ, ಧೂಮಪಾನವನ್ನು ನಿಷೇಧಿಸಲಿ ಎಂದು ಆಗ್ರಹಿಸಿವೆ. ಈ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕಲು ಸೆ.8 ರಂದು ಚಿತ್ರದುರ್ಗ ಬಂದ್‌ಗೆ ಕರೆ ನೀಡಲು ಚಿಂತನೆ ನಡೆಸಿವೆ.
ಬಂದ್‌ಗೆ ಕನ್ನಡಪರ, ರೈತಪರ, ದಲಿತ ಪರ ಕಾರ್ಮಿಕ ಸಂಘಟನೆಗಳು ಹೋಟೆಲ್ ಮಾಲೀಕರ ಸಂಘ, ರೈತ ಸಂಘದ ಒಕ್ಕೂಟಗಳು, ರಕ್ಷಣಾ ವೇದಿಕೆಯವರು, ವಕೀಲ ಸಂಘದವರು ಮತ್ತು ಅಂಗಡಿ ಮಾಲೀಕರು, ಆಟೋ ಸಂಘದವರು ಮತ್ತು ದಲ್ಲಾಳಿ ಅಂಗಡಿ ಮಾಲೀಕರು, ಬಸ್ ಮಾಲೀಕರು ಸ್ವಯಂ ಪ್ರೇರಿತರಾಗಿ ಸಂಘದ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಲಾಯಿತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಎಲ್ಲಾ ರೈತ ಪರ ಸಂಘ ಒಕ್ಕೂಟಗಳ. ಪದಾಧಿಕಾರಿಗಳಾದ ರೆಡ್ಡಿಹಳ್ಳಿ ವೀರಣ್ಣ, ಕಬ್ಬಿಗೆರೆ ನಾಗರಾಜ್, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ಕುಮಾರ್ ಸಮತಳ, ಸತ್ಯಪ್ಪ ಮಲ್ಲಾಪುರ, ಸೂರಪ್ಪ, ಶೇಖರಪ್ಪ ಚಂದ್ರಪ್ಪ, ನಿಂಗರಾಜ್, ಜ್ಯೋತಿ ಪ್ರಕಾಶ್, ಶಿವಣ್ಣ, ಸಿದ್ದಣ್ಣ, ಕಾಂತರಾಜ್, ವೀರಣ್ಣ ,ರಾಮ್ ರೆಡ್ಡಿ, ರವಿಕುಮಾರ್, ಬಾಗೇನಾಳ ತಿಪ್ಪೇಸ್ವಾಮಿ, ಮಾರುತಿ ರಂಗೇಗೌಡ, ಕಾಂತರಾಜ್, ಮುದ್ದಾಪುರ ನಾಗಣ್ಣ, ಶಾಂತಮ್ಮ, ಶಿವಕುಮಾರ್, ಕರಿ ಬಸಣ್ಣ, ಮಲ್ಲಿಕಾರ್ಜುನ್, ಕಲ್ಲೇಶ್, ಸದಾಶಿವ, ಮಾರುತಿ, ಸಂಜೀವಪ್ಪ, ಜಯಣ್ಣ ಗುರುಸಿದ್ದಣ್ಣ, ಓಬಣ್ಣ, ಚಂದ್ರಪ್ಪ, ಚೆನ್ನಕೇಶವ, ಶೇಖರಪ್ಪ, ಕುಮಾರಸ್ವಾಮಿ, ವಿಜಯ, ಹನುಮಂತಪ್ಪ, ಸಿದ್ದಣ್ಣ ಸಭೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.