ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಗುರುವಾರ (ಫೆ.12) ರಂದು 1.31 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳು ಬಂದಿದ್ದು ಪ್ರಸಕ್ತ ಹಂಗಾಮಿನಲ್ಲೇ ಎರಡನೇ ಬಾರಿಗೆ ಲಕ್ಷದ ಗಡಿ ದಾಟಿದೆ.
ಮೆಣಸಿನಕಾಯಿ ಆವಕದ ಕೊರತೆ ಎದುರಿಸುತ್ತಿದ್ದ ಮಾರುಕಟ್ಟೆ ವ್ಯಾಪಾರಸ್ಥರಿಗೆ ಕಳೆದ ಎರಡು ವಾರ ಆಗಿರುವ ಆವಕ ಕೊಂಚ ನೀರಾಳತೆ ನೀಡಿದೆ, ಕಳೆದ ಫೆ.9ರಂದು 1.12 ಲಕ್ಷ ಮೆಣಸಿನಕಾಯಿ ಆವಕವಾಗಿದ್ದು, ವ್ಯಾಪಾರ ವಹಿವಾಟು ಗರಿಗೆದರುವಂತೆ ಮಾಡಿದ್ದರೆ. ಗುರುವಾರ ಆಗಿರುವ 1.31 ಲಕ್ಷ ಆವಕ ಇನ್ನಷ್ಟು ವ್ಯಾಪಾರಸ್ಥರಲ್ಲಿ ಉತ್ಸಾಹ ತುಂಬಿದೆ, ಗುರುವಾರದ ಮಾರುಕಟ್ಟೆಯಲ್ಲಿ ಡಬ್ಬಿತಳಿ 87 ಸಾವಿರ ರುಪಾಯಿ ಪ್ರತಿ ಕ್ವಿಂಟಲ್ ಮಾರಾಟವಾಗಿದೆ.
ಗುರುವಾರದ ಮಾರುಕಟ್ಟೆ ದರ: ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿತಳಿ ಮೆಣಸಿನಕಾಯಿ ಕನಿಷ್ಠ ₹ 4809 ಗರಿಷ್ಠ 68889, ಸರಾಸರಿ 48009, ಡಬ್ಬಿತಳಿ ಕನಿಷ್ಠ ₹ 5799, ಗರಿಷ್ಠ 87786, ಸರಾಸರಿ 51509 ಗುಂಟೂರು ಕನಿಷ್ಠ 1999 ಗರಿಷ್ಠ ₹ 19000 ಸರಾಸರಿ 15000 ಗಳಿಗೆ ಮಾರಾಟವಾಗಿವೆ.