ಕನ್ನಡಪ್ರಭ ವಾರ್ತೆ ಖಾನಾಪುರ
ಸಂಘಟನೆ ಅಧ್ಯಕ್ಷ ಪಾಂಡುರಂಗ ಗೂಳಣ್ಣವರ ಮಾತನಾಡಿ, ಇತ್ತೀಚೆಗೆ ವಿಶ್ವ ಭಾರತೀ ಕಲಾ ಕ್ರೀಡಾ ಸಂಘಟನೆ, ಎಂಇಎಸ್ ಮುಖಂಡರು ಖಾನಾಪುರ ತಾಲೂಕಿನಲ್ಲಿ ಕನ್ನಡ ನಿರ್ಲಕ್ಷಿಸಿ ಮರಾಠಿ ಭಾಷೆಗೆ ಆದ್ಯತೆ ನೀಡಬೇಕು ಎಂದು ಜನಜಾಗೃತಿ ಮೂಡಿಸುತ್ತಿದ್ದಾರೆ. ಈ ವಿಷಯವಾಗಿ ಶಾಸಕ ವಿಠ್ಠಲ ಹಲಗೇಕರಗೂ ಮನವಿ ಸಲ್ಲಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಕನ್ನಡ ಭಾಷೆ ವಿರುದ್ಧ ಹುನ್ನಾರ ನಡೆಸುತ್ತಿರುವವರನ್ನು ಗಡಿಪಾರು ಮಾಡಬೇಕು ಮತ್ತು ಅವರು ನಡೆಸುತ್ತಿರುವ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಇದಕ್ಕೆ ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಗ್ರೇಡ್-2 ತಹಸೀಲ್ದಾರ್ ರಾಕೇಶ ಬುವಾ ಮನವಿ ಸ್ವೀಕರಿಸಿ ನಾಡ ವಿರೋಧಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಆಪ್ಜಲ್ ಐರಾಣಿ, ಸುಲೇಮಾನ ಕೋಟೂರ, ಆಶಿಪ ಬಾಬಣ್ಣವರ, ಆನಂದ ನಾಗನೂರ, ಜಗದೀಶ ಒಡೆಯರ, ಬಾಲಾಜಿ ಚೌಗುಲೆ ಹಾಗೂ ಇತರರು ಇದ್ದರು.