ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿ

KannadaprabhaNewsNetwork |  
Published : Aug 11, 2025, 12:54 AM IST
ಕಾರ್ಯಕ್ರಮದಲ್ಲಿ ಕಟಕೊಳದ ಸಚ್ಚಿದಾನಂದ ಸ್ವಾಮಿಗಳು ಮಾಅತನಾಡಿದರು. | Kannada Prabha

ಸಾರಾಂಶ

ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಯಶಸ್ವಿಗೆ ಸಮಸ್ತ ಲಿಂಗಾಯತರು ಶ್ರಮಿಸಬೇಕು. ಸೆ.11ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಮದುರ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು

ಕನ್ನಡಪ್ರಭ ವಾರ್ತೆ ರಾಮದುರ್ಗ

ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಯಶಸ್ವಿಗೆ ಸಮಸ್ತ ಲಿಂಗಾಯತರು ಶ್ರಮಿಸಬೇಕು. ಸೆ.11ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ರಾಮದುರ್ಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕಟಕೊಳ ವೀರಕ್ತಮಠದ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.

ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ ಒಂದು ವರ್ಷದ ಸವಿನೆನಪಿಗೆ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಸಮಸ್ತ ವಿರಕ್ತಮಠಗಳ ಸಹಯೋಗದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಬಸವ ಸಂಸ್ಕೃತಿ ಉತ್ಸವ 2025ರ ಯಾತ್ರೆ ಸೆ.11ರಂದು ಬೆಳಗಾವಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಅವರು ಆಶಿರ್ವಚನ ನೀಡಿದರು.

ಬಸವಣ್ಣನವರಿಗೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಅಲ್ಲ ಭಾರತದ ಸಾಂಸ್ಕೃತಿಕ ನಾಯಕನಾಗುವ ಅರ್ಹತೆ ಇದೆ ಎನ್ನುವುದು ದೇಶದ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ವಚನ ಅಧ್ಯಯನ, ಬಸವಣ್ಣನವರ ಕುರಿತು ಸಂಶೋಧನೆ ಮಾಡಲು ಸರ್ಕಾರ ತಾಂತ್ರಿಕ ಶಿಕ್ಷಣ ಇಲಾಖೆಗೆ ನೀಡಿರುವ ಆದೇಶವೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದೆ. ಬೆಳಗಾವಿಯಲ್ಲಿ ಸೆ.11ರಂದು ನಡೆಯಲಿದ್ದು ಈ ಕಾರ್ಯಕ್ರಮ ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದರು. ಅಭಿಯಾನದ ವೇಳೆ ಜನರಲ್ಲಿ ಬಸವಣ್ಣನವರ ಸಮಸಮಾಜದ ನಿರ್ಮಾಣ, ವ್ಯಸನ ಮುಕ್ತ ಸಮಾಜ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಸದೃಢ ಸಮಾಜ ಕಟ್ಟುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವದು, ಮಹಿಳೆಯರ ಘನತೆ ಕಾಪಾಡುವುದು ಮತ್ತು ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಲ್ಲರೂ ಸಹಕಾರ ನೀಡಬೇಕೆಂದರು.

ಜಿಲ್ಲಾ ಕಾರ್ಯದರ್ಶಿ ಅಶೋಕ ಮಳಗಲಿ ಮಾತನಾಡಿ, ಬಸವ ಸಂಸ್ಕೃತಿ ಅಭಿಯಾನದ ಸಂದರ್ಭದಲ್ಲಿ ಒಳಪಂಗಡಗಳ ಹೆಸರಿನಲ್ಲಿ ಒಡೆದು ಹೋಳಾಗುತ್ತಿರುವ ಲಿಂಗಾಯತ ಸಮಾಜ ಒಂದೇ ವೇದಿಕೆಯಲ್ಲಿ ತರುವುದಾಗಿದೆ. ಮೀಸಲಾತಿಗಾಗಿ ಒಳಪಂಗಡಗಳ ಸಂಘಟನೆಯಾಗಲಿ. ಆದರೆ ಲಿಂಗಾಯತರೆಲ್ಲ ಒಂದು ಎನ್ನುವ ಕಲ್ಪನೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ನಾಗನೂರಿನ ಬಸವಪ್ರಭುಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರು ವಚನ ಸಂಸ್ಕೃತಿ ಅಧ್ಯಯನ ಮಾಡಿ ಮಕ್ಕಳಲ್ಲಿ ಬಸವ ಸಂಸ್ಕೃತಿ ಬೆಳೆಸಬೇಕು. ಅದಕ್ಕಾಗಿ ಮೊದಲು ಹಿರಿಯರಾದವರೆಲ್ಲ ವಚನ ಅಧ್ಯಯನ ಮಾಡಿ, ಅಳವಡಿಸಿಕೊಂಡರೆ ಮಾತ್ರ ಮಕ್ಕಳಲ್ಲಿ ಸಂಸ್ಕಾರ ನೀಡಲು ಸಾಧ್ಯವೆಂದರು.

ಸೆ.11ರಂದು ಬೆಳಗ್ಗೆ ಬಾಗಲಕೋಟದಿಂದ ಆಗಮಿಸುವ ಬಸವ ಋತವನ್ನು ತಾಲೂಕಿನ ಸಾಲಹಳ್ಳಿಯಲ್ಲಿ ಬೆಳಗಾವಿ ಜಿಲ್ಲೆಗೆ ಸ್ವಾಗತಿಸುವ ಮುಖಾಂತರ ರಥದೊಂದಿಗೆ ತಾಲೂಕಿ ಸಮಸ್ತ ಜನತೆ ಬೆಳಗಾವಿಗೆ ತೆರಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಜಿಲ್ಲಾ ಖಜಾಂಚಿ ಎಂ.ಎಂ.ಬಾಳಿ, ತಾಲೂಕು ಘಟಕದ ಅಧ್ಯಕ್ಷ ಜಿ.ವಿ. ನಾಡಗೌಡ್ರ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಆರಿಬೆಂಚಿ, ಡಾ.ವೈ. ಬಿ.ಕುಲಗೋಡ ಸೇರಿದಂತೆ ಹಲವರಿದ್ದರು. ಪ್ರೊ.ಎಸ್.ಸಕ್ರಿ ಸ್ವಾಗತಿಸಿದರು. ಈರಣ್ಣ ಬುಡ್ಡಾಗೋಳ ನಿರೂಪಿಸಿದರು. ಪ್ರೊ.ಎಸ್.ಲೇಪಾಕ್ಷಿ ವಂದಿಸಿದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ