ಸಾಗರ: ತಾಲೂಕಿನ ಮಲಂದೂರು ಗ್ರಾಮದ ಸರ್ವೆ ನಂ.157ರಲ್ಲಿ ಏಳು ಮಂದಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಲಾಗಿದ್ದ ಸರ್ಕಾರಿ ಭೂಮಿಯನ್ನು, ನಕಲಿ ದಾಖಲೆ ಸೃಷ್ಟಿಸಿ ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಗುರುವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಈಗಾಗಲೆ ಶರಾವತಿ ಮುಳುಗಡೆ ಕುಟುಂಬದ 7 ಜನರಿಗೆ ಜಮೀನು ಸೇರಿದ್ದು ಎನ್ನುವುದಕ್ಕೆ ಕಾನೂನು ಹೋರಾಟದಲ್ಲಿ ಜಯಸಿಕ್ಕಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿಯೂ ಜಮೀನು ಸಂತ್ರಸ್ತರದ್ದು ಎನ್ನುವ ಪುರಾವೆಗಳಿವೆ. ಆದರೆ, ಷಣ್ಮುಖಪ್ಪ ಮಾತ್ರ ನಕಲಿ ದಾಖಲೆ ಸೃಷ್ಟಿಸಿ, ಬಡಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ತಕ್ಷಣ ಅಧಿಕಾರಿಗಳು ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಎಂ.ಬಿ. ಮಂಜಪ್ಪ ಹಿರೇನೆಲ್ಲೂರು, ಮುರಳೀಧರ, ಎನ್.ಸಿ. ಗಂಗಾಧರ, ಲಕ್ಷ್ಮಣಪ್ಪ, ಗಣಪತಿ ಎಂ., ಪ್ರೇಮಕುಮಾರ್, ಸಂದೀಪ್, ನವೀನ್, ಲಲಿತಮ್ಮ, ತೀರ್ಥಪ್ಪ, ಅನಿಲ್, ಚನ್ನಪ್ಪ ಇನ್ನಿತರರು ಹಾಜರಿದ್ದರು.- - - -1ಕೆಎಸ್.ಎಜಿ1: