ಮರಳು ಮಾಫಿಯಾ ವಿರುದ್ಧ ಕ್ರಮಕ್ಕೆ ಆಗ್ರಹ

KannadaprabhaNewsNetwork |  
Published : Dec 15, 2025, 03:15 AM IST
ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಜಿಲ್ಲಾದ್ಯಂತ ಕಳೆದ ಹಲವಾರು ದಿನಗಳಿಂದ ಎಗ್ಗಿಲ್ಲದೆ ರಾತ್ರಿಯ ವೇಳೆ ಮರಳು ಸಾಗಾಣಿಕೆಯನ್ನು ಮಾಡುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಕೊಳ್ಳಬೇಕು.

ಗದಗ: ನಗರ ಸೇರಿದಂತೆ ಜಿಲ್ಲಾದ್ಯಂತ ರಾತ್ರಿ ವೇಳೆ ಸರ್ಕಾರದಿಂದ ಪರವಾನಗಿಯನ್ನು ಪಡೆಯದೆ ಮರಳು ಸಾಗಾಣಿಕೆ ಮಾಡುವವರ ವಿರುದ್ಧ ಕ್ರಮ ಜರುಗಿಸುಂತೆ ಆಗ್ರಹಿಸಿ ಜೈಭೀಮ ಟಿಪ್ಪರ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾದ್ಯಂತ ಕಳೆದ ಹಲವಾರು ದಿನಗಳಿಂದ ಎಗ್ಗಿಲ್ಲದೆ ರಾತ್ರಿಯ ವೇಳೆ ಮರಳು ಸಾಗಾಣಿಕೆಯನ್ನು ಮಾಡುತ್ತಿದ್ದು, ಅಂಥವರ ವಿರುದ್ಧ ಕ್ರಮ ಕೈಕೊಳ್ಳಬೇಕು. ಇದರಿಂದಾಗಿ ಕಳೆದ ಹಲವಾರು ವರ್ಷರ್ಗಳಿಂದ ಸರ್ಕಾರದಿಂದ ಪರವಾನಗಿ ಪಡೆಯಲು ಹಣವನ್ನು ಖರ್ಚು ಮಾಡಿ ಪಾಸನ್ನು ಪಡೆದಿದ್ದೇವೆ. ಆದರೆ ಕೆಲವರು ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೆ ಯಾವುದೇ ಪಾಸನ್ನು ಇಟ್ಟುಕೊಳ್ಳದೇ ರಾತ್ರಿ ವೇಳೆಯಲ್ಲಿ ಅಕ್ರಮವಾಗಿ ಕಳ್ಳ ಮಾರ್ಗದಿಂದ ಮರಳು ಸಾಗಾಣಿಕೆಯನ್ನು ಮಾಡುತ್ತಿದ್ದಾರೆ.

ಇದರಿಂದಾಗಿ ಸರ್ಕಾರದ ಪರವಾನಗಿಯನ್ನು ಪಡೆದುಕೊಂಡು ಬಂದಿರುವ ಮರಳು ಸಾಗಾಣಿಕೆದಾರು ಅಪಾರವಾಗಿ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗಿದೆ. ಮರಳು ಸಾಗಾಣಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಜೀವನ ನಡೆಸಲು ತುಂಬಾ ತೊಂದರೆಯಾಗುತ್ತಿದೆ.ಅಕ್ರಮವಾಗಿ ರಾತ್ರಿಯ ವೇಳೆ ಮರಳು ಸಾಗಾಣಿಕೆ ಮಾಡುವವರು ಅನುಭವ ಇಲ್ಲದ ವಾಹನ ಚಾಲಕರನ್ನು ಇಟ್ಟುಕೊಂಡು ಮರಳು ಸಾಗಾಣಿಕೆ ಮಾಡುತ್ತಿದ್ದು, ಅವರಿಗೂ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಇರುವುದಿಲ್ಲ. ಅಲ್ಲದೆ ರಾತ್ರಿಯ ವೇಳೆ ಅತಿ ವೇಗದಿಂದ ಮರಳು ತುಂಬಿದ ವಾಹನವನ್ನು ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವ ಅಪಾಯವಿದೆ. ಬೇರೆ ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರು ಜೀವಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಕೊಂಡು ಸರ್ಕಾರದಿಂದ ಪರವಾನಗಿ ಪಡೆದ ಮರಲು ಸಾಗಾಣಿಕೆದಾರರನ್ನು ಹೊರತುಪಡಿಸಿ ಬೇರೆ ಯಾರಿಗೂ ಮರಳು ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜುನಾಥ ಬೆಳವಡಿ, ಅಪಜಲ್ ಅನ್ವರಸಾಬ ಸಂಶಿ, ಸರ್ಫರಾಜ ನಮಾಜಿ, ವೆಂಕಟೇಶ ಪೂಜಾರ, ರವಿ ವಡ್ಡರ, ದುರ್ಗಪ್ಪ ಗುಡಿ, ಆದಿಲ್ ಆರ್. ವಿವೇಕ ಬಂಕಾಪುರ, ಮಂಗಲೇಶ ಚಕ್ಕಡಿ, ಶಿವಬಸನಗೌಡ ಪೊಲೀಸಪಾಟೀಲ, ವೆಂಕಟೇಶ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!