ಕೆಮಿಕಲ್ ಪದಾರ್ಥ ಮಾರಾಟದ ಮೇಲೆ ಕ್ರಮಕ್ಕೆ ಆಗ್ರಹ

KannadaprabhaNewsNetwork | Published : Feb 22, 2024 1:51 AM

ಸಾರಾಂಶ

ಬೀದಿಬದಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಲ್ಲಿ ನಿಷೇಧಿತ ವಿಷಪೂರಿತ ಟೇಸ್ಟಿಂಗ್ ಸಾಲ್ಟ್ ಬಳಕೆ ಮಾಡಲಾಗುತ್ತಿದೆ. ಇದರ ಬಳಕೆಯಿಂದ ಆರೋಗ್ಯ ಹದಗೆಡುವುದಲ್ಲದೆ, ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಂಭವ ಹೆಚ್ಚು

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ನಿಷೇಧಿತ ಕೆಮಿಕಲ್ ಪದಾರ್ಥಗಳನ್ನು ಬಳಕೆ ಮಾಡಿ ಆಹಾರ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವ ಬೀದಿಬದಿ ಫಾಸ್ಟ್ ಪುಡ್, ಹೋಟೆಲ್ ಮತ್ತು ಪಾನೀಪುರಿ, ಗೋಬಿ ಮಂಜೂರಿ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು.

ರಸ್ತೆ ಬದಿಯಲ್ಲಿ ಫಾಸ್ಟ್ ಪುಡ್, ಪಾನೀಪುರಿ ಇತ್ಯಾದಿ ಅಂಗಡಿಗಳಲ್ಲಿ ನಿಷೇಧಿತ ಕೆಮಿಕಲ್ ಪದಾರ್ಥಗಳ ಬಳಕೆ ವಿರೋಧಿಸಿ ಹಾಗೂ ಕೆಮಿಕಲ್ ಬಳಕೆ ಮಾಡುವ ಅಂಗಡಿಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಡಾ.ಎಚ್.ಎನ್. ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ನಂತರ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಸತ್ಯನಾರಾಯಣರೆಡ್ಡಿಗೆ ಮನವಿ ಪತ್ರ ಸಲ್ಲಿಸಿದರು.

ವೇಳೆ ಕರವೇ ತಾಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿ, ಜನರ ಆರೋಗ್ಯ ಹಾಳು ಮಾಡುವಂತಹ ವಿಷಪೂರಿತ ಕೆಮಿಕಲ್ ಪದಾರ್ಥಗಳನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಿದರು.ಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೀದಿಬದಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳಲ್ಲಿ ನಿಷೇಧಿತ ವಿಷಪೂರಿತ ಟೇಸ್ಟಿಂಗ್ ಸಾಲ್ಟ್ ಬಳಕೆ ಮಾಡಲಾಗುತ್ತಿದೆ ಇದನ್ನು ಅರಿಯದೆ ಪ್ರತಿನಿತ್ಯವೂ ಸೇವನೆ ಮಾಡುವ ಸಾರ್ವಜನಿಕರ ಆರೋಗ್ಯ ದಿನದಿಂದ ದಿನಕ್ಕೆ ಆರೋಗ್ಯ ಹದಗೆಡುವುದಲ್ಲದೆ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಗೆ ತುತ್ತಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಈ ವೇಳೆ ಕರವೇ ತಾ.ಪ್ರಧಾನ ಕಾರ್ಯದರ್ಶಿ ರಿಯಾಜ್‍ವುಲ್ಲಾ, ಉಪಾಧ್ಯಕ್ಷ ಚಿನ್ನು, ಅಲೀಮ್, ಶಂಕರ್, ಖಜಾಂಚಿ ನಾರಾಯಣಸ್ವಾಮಿ ಮುಖಂಡರಾದ ಮಂಜುನಾಥ್‍ನಾಯ್ಕ್, ರಘು, ಅಂಜಿ, ಗಣೇಶ್, ಮೂರ್ತಿ, ಕೃಷ್ಣಪ್ಪ, ಗಂಗರಾಜು, ನವೀನ್ ಮತ್ತಿತರರಿದ್ದರು. ನಂತರ ಪ್ರತಿಭಟನಾಕಾರರು ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Share this article