ಸಿರಿಗೆರೆ: ಪ್ರತಿವರ್ಷ 9 ದಿನಗಳ ಕಾಲ ವಿವಿಧ ನಗರ ಪಟ್ಟಣಗಳಲ್ಲಿ ನಡೆಯುತ್ತಿದ್ದ ತರಳಬಾಳು ಜಗದ್ಗುರು ಬೃಹನ್ಮಠದ ತರಳಬಾಳು ಹುಣ್ಣಿಮೆ ಮಹೋತ್ಸವವು ಈ ಬಾರಿ ಸಿರಿಗೆರೆಯಲ್ಲಿ ಫೆ.22ರಿಂದ ಫೆ.24ರವರೆಗೆ ಸರಳವಾಗಿ ನಡೆಯುವುದು.
75 ವರ್ಷಗಳ ಕಾಲ ನಾಡಿನ ಹಲವು ಪ್ರಮುಖ ನಗರ, ಪಟ್ಟಣ, ತಾಲೂಕು ಕೇಂದ್ರಗಳಲ್ಲಿ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಚಲಿಸುವ ವಿಶ್ವವಿದ್ಯಾನಿಲಯ ಎಂಬ ಪ್ರತೀತಿಯೂ ಇದೆ.ಮೂರು ದಿನ ಕಾಲ ನಡೆಯುವ ಹುಣ್ಣಿಮೆ ಮಹೋತ್ಸವಕ್ಕೆ ಬಿಎಲ್ಆರ್ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ನಡೆದಿವೆ. ಇಲ್ಲಿಯ ಸಿಬಿಎಸ್‌ಇ ಶಾಲೆಯ ಮುಖ್ಯದ್ವಾರಕ್ಕೆ ಹೊಂದಿಕೊಂಡಂತೆ ಬೃಹತ್ ವೇದಿಕೆಯನ್ನು ರೂಪುಗೊಳಿಸಲಾಗಿದೆ. ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಭಾಗಿಯಾಗುವ ಪ್ರಮುಖ ಮಠಾಧೀಶರು, ರಾಜಕಾರಣಿಗಳು, ವಿಷಯತಜ್ಞರು, ಸಾಮಾಜಿಕ ಚಿಂತಕರು ಉಪನ್ಯಾಸ ನೀಡುವರು.
ಬರದ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಒತ್ತು: ತರಳಬಾಳು ಹುಣ್ಣಿಮೆ ಎಂದರೆ ರಾಜ್ಯದ ತುಂಬೆಲ್ಲಾ ಹರಡಿಕೊಂಡಿರುವ ಮಠದ ಭಕ್ತರಿಗೆ ಸಂಭ್ರಮ. ಒಂಭತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಅವರು ಭಾಗಿಯಾಗಿ ಶ್ರೀಗಳ ಆಶೀರ್ವಚನ, ಗಣ್ಯರ ಉಪನ್ಯಾಸಗಳಿಂದ ಪ್ರೇರಣೆ ಪಡೆದುಕೊಳ್ಳುವಂತಹ ಸಂಭ್ರಮ.ಪಲ್ಲಕ್ಕಿ ಉತ್ಸವವೂ ಇಲ್ಲ: ಶ್ರೀಗಳು ಈಗಾಗಲೇ ಪ್ರಕಟಿಸಿರುವಂತೆ ಈ ಹುಣ್ಣಿಮೆ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಅಡ್ಡಪಲ್ಲಕ್ಕಿ ಉತ್ಸವವೂ ಇರುವುದಿಲ್ಲ. ಇದು ಭಕ್ತರಲ್ಲಿ ನಿರಾಶೆ ತಂದಿದ್ದರೂ ಅವರು ಶ್ರೀಗಳ ತೀರ್ಮಾನಕ್ಕೆ ಸಮ್ಮತಿಸಿದ್ದಾರೆ. ಉತ್ಸವದ ಕೊನೆಯ ದಿನ ಪೀಠದ ಸಂಪ್ರದಾಯದಂತೆ ತರಳಬಾಳು ಶ್ರೀಗಳು ರಜತ ಸಿಂಹಾಸನವನ್ನು ಆರೋಹಣ ಮಾಡಲಿದ್ದಾರೆ.
ವಿಜ್ಞಾನ ಮೇಳ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ಬಾರಿ ಮೊದಲ ಬಾರಿಗೆ ವಿಜ್ಞಾನ ಮೇಳವನ್ನು ಮೂರು ದಿನಗಳ ಕಾಲ ಏರ್ಪಡಿಸಿದೆ. ತರಳಬಾಳು ವಿದ್ಯಾಸಂಸ್ಥೆಯ 150 ಶಾಲೆಗಳಿಂದ ಬರುವ ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ. ಉಪನ್ಯಾಸಕರು ಮತ್ತು ವಿಜ್ಞಾನಿಗಳೊಂದಿಗೆ ಸಂವಾದಗೋಷ್ಠಿಯನ್ನು ಸಹ ಆಯೋಜಿಸಲಾಗಿದೆ.ಗ್ರಾಮೀಣ ಕ್ರೀಡಾಕೂಟ: ದಾವಣಗೆರೆ, ಜಗಳೂರು, ಚನ್ನಗಿರಿ, ಹರಿಹರ, ಹರಪನಹಳ್ಳಿ, ಕೊಟ್ಟೂರು, ರಾಣೆಬೆನ್ನೂರು, ಹಳೆಬೀಡು, ಹೊಳಲ್ಕೆರೆ, ಚಿತ್ರದುರ್ಗ, ತಿಪಟೂರು ಮತ್ತು ಭದ್ರಾವತಿ ತಾಲೂಕಿನ ಯುವಕರನ್ನು ಸಂಘಟಿಸಿ ಗ್ರಾಮೀಣ ಕ್ರೀಡಾಕೂಟವನ್ನು ಸಹ ಆಯೋಜಿಸಲಾಗಿದೆ. ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಿ ಒಂದು ಸುತ್ತಿನ ಸ್ಪರ್ಧೆಗಳನ್ನು ಈಗಾಗಲೇ ನಡೆಸಲಾಗಿದೆ. ಅಂತಿಮ ಸುತ್ತಿನ ಸ್ಪರ್ಧೆಗಳು ಫೆ.22 ಮತ್ತು 23ರಂದು ನಡೆಯಲಿವೆ.
ದೇಶ ರಕ್ಷಣೆಯಲ್ಲಿ ಹುತಾತ್ಮರಾದ ಸೈನಿಕ ಕುಟುಂಬಗಳಿಗೆ ನೆರವು: ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿ ಸಾವನ್ನಪ್ಪಿದ ಹುತಾತ್ಮರಿಗೆ ಅಂತಿಮ ದಿನದಿಂದ ತರಳಬಾಳು ಮಠದಿಂದ 1 ಲಕ್ಷ ರು. ಆರ್ಥಿಕ ನೆರವು ನೀಡಿ ಸತ್ಕರಿಸಲಾಗುವುದು. ಬೆಂಗಳೂರಿನ ಕ್ಯಾಪ್ಟನ್ ಎಂ.ಜಿ.ಪ್ರಾಂಜಲ್, ಗೋಕಾಕಿನ ಮಂಜುನಾಥ ಗೌಡನ್ನವರ, ಕಲಬುರಗಿ ಸಿ.ಟಿ.ರಾಜಕುಮಾರ್ ಮಾವಿನ್, ಜಗಳೂರು ವೈ.ಹನುಮಂತಪ್ಪ, ಚಿತ್ರದುರ್ಗ ಆರ್.ಸುನೀತ, ನಿಪ್ಪಾಣಿಯ ಪ್ರಕಾಶ್ ಜಾಧವ್ ಕುಟುಂಬದವರಿಗೆ ಈ ಬಾರಿ ಆರ್ಥಿಕ ನೆರವು ನೀಡಿ ಗೌರವಿಸಲಾಗುವುದು.ಕಾರ್ಯಕ್ರಮ ಪಟ್ಟಿ
22 ಹುಣ್ಣಿಮೆ ಕಾರ್ಯಕ್ರಮಬೆಳಗ್ಗೆ ೯.೩೦ ಗಂಟೆಗೆ ಎಚ್.ಎಂ.ವಿರೂಪಾಕ್ಷಯ್ಯ ಶಿವಧ್ವಜಾರೋಹಣ
ಬೆಳಗ್ಗೆ ೧೦.೦೦ ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟನೆಸೀಮಾ ಜೆ. ಪಟೇಲ್, ಎಸ್.ಎಸ್.ಟಿ. ಸ್ವಾಮಿ ಉಪನ್ಯಾಸ
ಸಂಜೆ ೬ ಗಂಟೆಗೆ ವೇದಿಕೆ ಕಾರ್ಯಕ್ರಮಸಾನ್ನಿಧ್ಯ: ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಆಶೀರ್ವಚನ: ವಿಜಯಪುರ ಜ್ಞಾನಯೋಗಾಶ್ರಮ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಮುಖ್ಯ ಅತಿಥಿ: ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಶಾಸಕರು ಭಾಗಿ: ಎಂ.ಚಂದ್ರಪ್ಪ, ಬಿ.ಪಿ.ಹರೀಶ್, ಎಚ್.ಡಿ.ತಮ್ಮಯ್ಯ, ಬಿ.ದೇವೇಂದ್ರಪ್ಪಉಪನ್ಯಾಸ: ಗಂಗಾವತಿ ಪ್ರಾಣೇಶ್, ಅಣ್ಣಾಪುರ ಶಿವಕುಮಾರ್
ಪುಸ್ತಕ ಲೋಕಾರ್ಪಣೆ: ಮಹದೇವ ಬಣಕಾರರ ವಿಶ್ವಬಂಧು ಮರುಳಸಿದ್ದ ಕಾವ್ಯ, ಪಂ.ವಿಶ್ವಕುಮಾರ್ ಶರ್ಮಾರ ಮರುಳಸಿದ್ದಾಂಕ ವಿಮರ್ಶೆ, ಡಾ.ವೀರಣ್ಣ ರಾಜೂರ ಹಾಗೂ ಕಾಶಿ ಸೋಮರಾಧ್ಯ ಅವರ ಶರಣರ ನುಡಿಮುತ್ತುಗಳು, ಲಿಂಗಾರೆಡ್ಡಿ ಶೇರಿ ಅವರ ವಿಶ್ವಬಂಧು ಮರುಳಸಿದ್ಧ ಕಾವ್ಯದರ್ಪಣ.