ಆಟೋ ನಿಲ್ದಾಣಗಳಿಗೆ ಆಗ್ರಹ: ಪ್ರತಿಭಟನೆ

KannadaprabhaNewsNetwork |  
Published : Nov 18, 2026, 02:30 AM IST
ಪ್ರತಿಭಟನೆ | Kannada Prabha

ಸಾರಾಂಶ

ಹುಬ್ಬಳ್ಳಿಯಲ್ಲಿ ಸದ್ಯ 17 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳಿವೆ. ಆದರೆ, ಆಟೋ ನಿಲ್ದಾಣಗಳಿಲ್ಲದೇ ರಸ್ತೆ ಮೇಲೆ ನಿಲ್ಲಿಸಬೇಕಾಗಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ.

ಹುಬ್ಬಳ್ಳಿ:ನಗರದಲ್ಲಿ ಆಟೋ ರಿಕ್ಷಾಗಳಿಗೆ ಅನುಗುಣವಾಗಿ 155ಕ್ಕೂ ಹೆಚ್ಚು ಆಟೋರಿಕ್ಷಾ ನಿಲ್ದಾಣ ನಿರ್ಮಿಸಬೇಕೆಂದು ಒತ್ತಾಯಿಸಿ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.ಇಲ್ಲಿನ ನಿಲಿಜಿನ್‌ ರಸ್ತೆಯಿಂದ ಹು-ಧಾ ಮಹಾನಗರ ಪಾಲಿಕೆ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆಟೋರಿಕ್ಷಾ ಚಾಲಕರ ಸಂಘದ ಪದಾಧಿಕಾರಿಗಳು, ಮೇಯರ್‌ ದುರ್ಗಮ್ಮ ಬಿಜವಾಡ ಅವರಿಗೆ ಮನವಿ ಸಲ್ಲಿಸಿದರು. ನಗರದಲ್ಲಿ ಸದ್ಯ 17 ಸಾವಿರಕ್ಕೂ ಹೆಚ್ಚು ಆಟೋರಿಕ್ಷಾಗಳಿವೆ. ಆದರೆ, ಆಟೋ ನಿಲ್ದಾಣಗಳಿಲ್ಲದೇ ರಸ್ತೆ ಮೇಲೆ ನಿಲ್ಲಿಸಬೇಕಾಗಿದೆ. ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಹಳೇಬಸ್‌ ನಿಲ್ದಾಣ, ಭಾರತ್‌ಮಿಲ್‌ ಬಳಿ 300-400 ಅಡಿ ಉದ್ದ ಹಾಗೂ 60 ಅಡಿ ಅಗಲದ ಚತ್‌ ಆಟೋರಿಕ್ಷಾ ನಿಲ್ದಾಣ ನಿರ್ಮಿಸಬೇಕು. ಹಾಗೆಯೇ ರೈಲ್ವೆ ನಿಲ್ದಾಣ, ಗೋಕುಲ್‌ರೋಡ ಹೊಸ ಬಸ್‌ ನಿಲ್ದಾಣ ಸೇರಿದಂತೆ 155ಕ್ಕೂ ಹೆಚ್ಚು ಕಡೆ ಆಟೋ ನಿಲ್ದಾಣ ನಿರ್ಮಿಸಿ ಆಟೋಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.ಈಗಾಗಲೇ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ₹ 5 ಲಕ್ಷ ವೆಚ್ಚದಲ್ಲಿ ಆಟೋನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಿದ್ದರೂ, ವಿಮಾನ ನಿಲ್ದಾಣ ಪ್ರಾಧಿಕಾರ ಕಾಮಗಾರಿ ತಡೆಹಿಡಿದಿದೆ. ಈ ಕೂಡಲೇ ಕಾಮಗಾರಿ ಆರಂಭಿಸಲು ಕ್ರಮವಹಿಸಬೇಕು. ನಗರದ ಎಲ್ಲ ಮಾಲ್‌ಗಳ ಎದುರು ಕನಿಷ್ಠ 5 ಆಟೋ ನಿಲುಗಡೆಗೆ ನಿಲ್ದಾಣ ನಿರ್ಮಾಣ, ಚತ್‌ ಆಟೋ ನವೀಕರಣ ಸೇರಿದಂತೆ ಹತ್ತಾರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಶೇಖರಯ್ಯ ಮಠಪತಿ, ಲೋಕೇಶ ಚಿಕ್ಕಮಂಗಳೂರು, ಜೀವನ ಉತ್ಕುರಿ, ಅಮೇಶ ಅಣಿ, ದಾವಲಸಾಬ ಕುರಹಟ್ಟಿ, ಮುರಳಿ ಇಂಗಳಹಳ್ಳಿ, ಪರಶುರಾಮ ಪೂಜಾರ, ರಫೀಕ್‌ ಕುಂದಗೋಳ, ರಾಜೇಶ ಬಿಜವಾಡ, ದಾವೂದ ಅಲಿಶೇಖ್‌, ಮಹಾವೀರ ಬಿಲಾನ, ಮಲ್ಲಿಕಾರ್ಜುನ ನಂದಿಹಾಳ, ಗುರು ಬೆಟಗೇರಿ, ಬಾಬರ ಜಮಖಾನೆ, ಆರೀಫ್‌ ಕಿಂಗ್‌ಮೇಕರ್‌, ಸಾಧಿಕ್‌ ತಡಕೋಡ, ಅಮರ ಗದಗ, ಮುತ್ತು ಬಾರಕೇರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ