ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಹಂತದ ಶಿಕ್ಷಣ ಅತಂತ್ರಗೊಳಿಸುವ ಹಾಗೂ ಬಾಲ ಕಾರ್ಮಿಕ ಪದ್ಧತಿಯನ್ನು ಮತ್ತೆ ಹೇರುವ ಹುನ್ನಾರ ಹೊಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ರದ್ದಿಗೆ ಆಗ್ರಹಿಸಿ ತಾಲೂಕಿನ ಮರಬ್ಬಿಹಾಳ್ ಗ್ರಾಮದಲ್ಲಿ ಇತ್ತೀಚಿಗೆ ಎಐಡಿಎಸ್‌ಓ ಪದಾಧಿಕಾರಿಗಳು ಪ್ರತಿಭಟಿಸಿದರು.
ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾಧ್ಯಕ್ಷ ಪಂಪಾಪತಿ ಪ್ರತಿಭಟನೆ ಬೆಂಬಲಿಸಿ ಮಾತನಾಡಿದರು.
ಈ ಕುರಿತಾದ ಪಠ್ಯಕ್ರಮವನ್ನು ಉದ್ಯಮ ಪಾಲುದಾರರೊಂದಿಗೆ ರೂಪಿಸಲು ಹೊರಟಿರುವ ಸರ್ಕಾರವು ರೈತ-ಕಾರ್ಮಿಕರ ಮಕ್ಕಳನ್ನು ಮತ್ತೆ ಅವರ ಕಾರ್ಖಾನೆಗಳಲ್ಲಿ ಅಗ್ಗದ ಕೂಲಿಗೆ ದೂಡುವ ಹುನ್ನಾರ ಹೊಂದಿದೆ ಎಂದು ಆರೋಪಿಸಿದರು.ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಯು.ಉಮಾದೇವಿ, ಜಿಲ್ಲಾ ಜಂಟಿ ಕಾರ್ಯದರ್ಶಿ ಆದಿತ್ಯ, ಸದಸ್ಯರಾದ ಶ್ರೀನಿವಾಸ, ಎಸ್‌ಡಿಎಂಸಿ ಅಧ್ಯಕ್ಷ ಹುಲುಗಪ್ಪ, ಗ್ರಾ.ಪಂ.ಸದಸ್ಯ ಹುಲುಗಪ್ಪ, ಪ್ರಮುಖರಾದ ಅಶೋಕಪ್ಪ, ಫಕ್ಕೀರಪ್ಪ, ಹನುಮಂತಪ್ಪ, ಆನಂದಪ್ಪ, ಪಿ.ಹನುಮಂತಪ್ಪ ಹಾಗೂ ಎ.ನಾಗಪ್ಪ ಮತ್ತಿತರರು ಇದ್ದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಮರಬ್ಬಿಹಾಳ್ ಗ್ರಾಮದಲ್ಲಿ ಇತ್ತೀಚಿಗೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು.