ತೊಗರಿ ಬೆಳೆಗೆ ಪರಿಹಾರಕ್ಕೆ ಆಗ್ರಹ

KannadaprabhaNewsNetwork |  
Published : Dec 06, 2024, 09:01 AM IST
ಸಿಂದಗಿ | Kannada Prabha

ಸಾರಾಂಶ

ಸಿಂದಗಿ ಮತ್ತು ಆಲಮೇಲ ತಾಲೂಕಿನ ರೈತರು ಬೆಳೆದ ತೊಗರಿ ಬೆಳೆ ಈ ಬಾರಿ ನಷ್ಟದಲ್ಲಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ವೇ ಮಾಡಿಸಿ ಸರ್ಕಾರಕ್ಕೆ ವಾಸ್ತವಿಕ ವರದಿಯನ್ನು ಸಲ್ಲಿಸಿ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಸಿಂದಗಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮತ್ತು ತಾಲೂಕು ಕೃಷಿ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಸಿಂದಗಿ ಮತ್ತು ಆಲಮೇಲ ತಾಲೂಕಿನ ರೈತರು ಬೆಳೆದ ತೊಗರಿ ಬೆಳೆ ಈ ಬಾರಿ ನಷ್ಟದಲ್ಲಿದ್ದು, ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ವೇ ಮಾಡಿಸಿ ಸರ್ಕಾರಕ್ಕೆ ವಾಸ್ತವಿಕ ವರದಿಯನ್ನು ಸಲ್ಲಿಸಿ ಸೂಕ್ತ ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಭಾರತೀಯ ಜನತಾ ಪಕ್ಷದ ಸಿಂದಗಿ ಮಂಡಲದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ ಮತ್ತು ತಾಲೂಕು ಕೃಷಿ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ರಮೆಶ ಭೂಸನೂರ ಹಾಗೂ ಎ.ಎಸ್.ಪಾಟೀಲ ನಡಹಳ್ಳಿ, ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರೈತ ಮೋರ್ಚಾ ತಾಲೂಕಾಧ್ಯಕ್ಷ ಪೀರು ಕೆರೂರ ಮಾತನಾಡಿ, ಈ ಭಾಗದ ಬಹುತೇಕ ರೈತರು ಕೃಷಿ ಇಲಾಖೆಯಲ್ಲಿ 2024-24ನೇ ಸಾಲಿನಲ್ಲಿ ವಿತರಿಸಿದ ತೊಗರಿ ಬೀಜಗಳನ್ನು ಖರೀದಿಸಿ ಬೆಳೆದಿದ್ದಾರೆ. ಎತ್ತರಕ್ಕೆ ಬೆಳೆದ ಬೆಳೆ ಹೂವುಗಳು ಉದರಿ ಕಾಯಿ ಕಟ್ಟದೆ ಶೇ.50 ರಷ್ಟು ಬೆಳೆಗಳು ಹಾಳಾಗಿವೆ. ಇದರಿಂದ ಅನ್ನದಾತ ತೀವ್ರ ಸಂಕಸ್ಟದ ಬದುಕನ್ನು ಎದುರಿಸುತಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಈ ಭಾಗದ ಅನೇಕ ರೈತರು ಅಧಿಕಾರಗಳೆ ಹಾಳಾಗುತ್ತಿರುವ ಬೆಳೆಗಳ ಬಗ್ಗೆ ವಿವರಿಸಿದರೂ ಅಧಿಕಾರಿಗಳು ಸರ್ವೇ ಕಾರ್ಯ ಮಾಡಲ್ಲ ಮತ್ತು ಹೊಲಗಳಿಗೆ ಭೇಟಿ ನೀಡಿಲ್ಲ. ಈ ವಿಷಯದಲ್ಲಿ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ ಎಂದು ದೂರಿದರು.ರೈತರಿಗೆ ಅನ್ಯಾಯವಾದಾಗ ನಾವು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯ. ಕೂಡಲೇ ಜಿಲ್ಲಾಧಿಕಾರಿಗಳು ಸರ್ವೇ ಕಾರ್ಯ ಆರಂಭಿಸುವಂತೆ ಆದೇಶ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ಮುಂದಾಗುವಲ್ಲಿ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾವಿರಾರು ರೈತರೊಂದಿಗೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನಾ ಮೆರವಣಿಗೆಯು ಡಾ.ಅಂಬೇಡ್ಕರ್‌ ವೃತ್ತದಿಂದ ಎತ್ತಿನ ಗಾಡಿಗಳ ಮೂಲಕ ಪ್ರಾರಂಭವಾಗಿ ಟಿಪ್ಪು ವೃತ್ತ ನಂತರ ಗಾಂಧಿ ವೃತ್ತದವರೆಗೆ ಸಾಗಿ ಅಲ್ಲಿನ ಕೃಷಿ ಇಲಾಖೆಗೆ ಸಾಗಿ ಕೆಲ ಕಾಲ ಪ್ರತಿಭಟಿಸಿ ರೈತರು ಮತ್ತು ಬಿಜೆಪಿ ಮುಂಖಂಡರು ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಶ್ರೀಶೈಲಗೌಡ ಬಿರಾದಾರ ಮಗಾಣಗೇರಿ, ಸಿದ್ದು ಬುಳ್ಳಾ, ಈರಣ್ಣ ರಾವೂರ, ಗೋಲ್ಳಾಳಪ್ಪಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಶಿವುಕುಮಾರ ಬಿರಾದಾರ, ಗುರುಲಿಂಗಪ್ಪ ಅಂಗಡಿ, ಗುರು ತಳವಾರ, ಪ್ರಶಾಂತ ಕದ್ದರಕಿ, ವಿಠ್ಠಲ ಪೂಜಾರಿ, ಸಮಿ ಬಿಜಾಪೂರ, ನೀಲಮ್ಮ ಯಡ್ರಾಮಿ ಅನುಸುಬಾಯಿ ಪಾರಗೊಂಡ, ಚೇತನ ರಾಂಪೂರ, ಅಶೋಕ ನಾರಾಯಣಪೂರ, ವೀರುಪಾಕ್ಷಿ ಗಂಗನಳ್ಳಿ, ಮಂಜುನಾಥ ನಾಯ್ಕೋಡಿ, ಸತೀಶ ಬಿರಾದಾರ, ಶಿವರಾಜ ಕೆಂಗನಾಳ, ಸಲೀಂ ಬಾಗವಾನ, ಮಲ್ಲನಗೌಡ ಬಗಲಿ ಸೇರಿದಂತೆ ಅನೇಕ ರೈತರು ಕಾರ್ಯಕರ್ತರು ಭಾಗವಹಿಸಿದ್ದರು.ಪ್ರತಿಭಟನಾಕಾರರ ಬೇಡಿಕೆಗಳು

-ಹಾನಿ ಒಳಗಾದ ತೊಗರಿ ಬೆಳೆಯನ್ನು ಡ್ರೋಣದ ಮೂಲಕ ಸರ್ವೇ ಕಾರ್ಯ ಮಾಡುವುದು.

-ರೈತ ಸಂಪರ್ಕ ಕೆಂದ್ರದಲ್ಲಿ ರೈತರಿಗೆ ವಿತರಿಸಿದ ತೊಗರಿ ಬೀಜಗಳ ನೈಜತೆ ಮತ್ತು ಗುಣಮಟ್ಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. -ಕಳಪೆ ಬೀಜ ವಿತರಿಸಿದ ಖಾಸಗಿ ಎಜೆನ್ಸಿಗಳ ವಿರುದ್ದ ಕಠಿಣ ಕ್ರಮ ಜರುಗಿಸಬೇಕು.

-ವಿಮೆ ಮಾಡದೇ ಇರುವ ತೊಗರಿ ಬೆಳೆದ ನಷ್ಟಕ್ಕೆ ಒಳಗಾದ ರೈತರಿಗೂ ಸರ್ಕಾರವೇ ಪರಿಹಾರ ನೀಡಬೇಕು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ