ಪ್ರೀತಮ್‌ ಆತ್ಮಹತ್ಯೆ ಪ್ರಕರಣ ಸಮಗ್ರ ತನಿಖೆಗೆ ಆಗ್ರಹ

KannadaprabhaNewsNetwork |  
Published : May 23, 2024, 01:11 AM IST
ಶಿರಸಿಯಲ್ಲಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಪ್ರೀತಮ್ ಪ್ರಕಾಶ ಪಾಲನಕರ ಆತ್ಮಹತ್ಯೆ ಪ್ರಕರಣದ ಸಂಬಂಧ ಅತಿ ಶೀಘ್ರವಾಗಿ ಸಮಗ್ರ ತನಿಖೆ ಮಾಡಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಸಮಾಜದಲ್ಲಿ ಹಂತಕರದಿಂದ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಶಿರಸಿ: ಸ್ವರ್ಣ ಉದ್ಯಮಿಯ ಪುತ್ರ ಪ್ರೀತಮ್ ಪ್ರಕಾಶ ಪಾಲನಕರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ಮೃತರ ಕುಟುಂಬಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ, ಇಲ್ಲಿನ ದೈವಜ್ಞ ಬ್ರಾಹ್ಮಣ ಸಮಾಜ ಮತ್ತು ದೈವಜ್ಞ ಬ್ರಾಹ್ಮಣ ಸರಾಫರ ಹಾಗೂ ಆಭರಣ ತಯಾರಕರ ಸಂಘದ ವತಿಯಿಂದ ಮೆರವಣಿಗೆ ನಡೆಸಿ, ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನಗರದ ಸಿಂಪಿಗಲ್ಲಿಯಿಂದ ಸಿಪಿ ಬಜಾರ್ ಮೂಲಕ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ನೂರಾರು ಪ್ರತಿಭಟನಾಕಾರರು ಪ್ರೀತಮ್ ಸಾವಿನ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು ಎಂದು ಘೋಷಣೆ ಮೂಲಕ ಆಗ್ರಹಿಸಿದರು.ದೈವಜ್ಞ ಸಮಾಜದ ಸದಸ್ಯ ಹಾಗೂ ಕಾಮಧೇನು ಜ್ಯುವೆಲರಿ ಮಾಲೀಕನ ಪುತ್ರ ಪ್ರೀತಮ್‌ ಪ್ರಕಾಶ ಪಾಲನಕರ ಮೇ ೧೫ರಂದು ನೇಣಿಗೆ ಶರಣಾಗಿದ್ದಾನೆ. ಪ್ರೀತಮ್‌ ಒಳ್ಳೆಯ ವ್ಯಕ್ತಿಯಾಗಿದ್ದು, ತನ್ನ ವ್ಯಾಪಾರ ಮತ್ತು ವ್ಯವಹಾರದಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯ, ಸ್ಥಾನಮಾನ ಹೊಂದಿದ್ದ.

ಬಂಗಾರ ವ್ಯಾಪಾರದ ಜತೆ ಹಲವು ಉದ್ಯಮವನ್ನು ನಡೆಸಿಕೊಂಡು ಉತ್ತಮ ಸ್ಥಿತಿವಂತನಾಗಿದ್ದನು. ಇಷ್ಟೆಲ್ಲ ಅನುಕೂಲ ಇದ್ದರೂ ಪ್ರೀತಮ್ ನೇಣಿಗೆ ಶರಣಾಗಿರುವುದು ದೈವಜ್ಞ ಸಮಾಜದಲ್ಲಿ ಮತ್ತು ಸಾರ್ವಜನಿಕರಲ್ಲಿ ಅನೇಕ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಈತನ ಸಾವು ಬ್ಲಾಕ್‌ಮೇಲ್‌ನಿಂದಾಗಿರಬಹುದು ಎಂಬ ಸಂಶಯವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ.

ಪ್ರೀತಮ್ ಪ್ರಕಾಶ ಪಾಲನಕರ ಆತ್ಮಹತ್ಯೆ ಪ್ರಕರಣದ ಸಂಬಂಧ ಅತಿ ಶೀಘ್ರವಾಗಿ ಸಮಗ್ರ ತನಿಖೆ ಮಾಡಿ ಮೃತರ ಕುಟುಂಬಕ್ಕೆ ನ್ಯಾಯ ಒದಗಿಸುವ ಮೂಲಕ ಸಮಾಜದಲ್ಲಿ ಹಂತಕರದಿಂದ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಈ ಸಂದರ್ಭದಲ್ಲಿ ದೈವಜ್ಞ ಸಮಾಜದ ಮಂಜುನಾಥ ಶೆಟ್ಟಿ, ಸಂತೋಷ ದೈವಜ್ಞ, ಪ್ರದೀಪ ಎಲ್ಲನಕರ, ಸಂತೋಷ ರೇವಣಕರ, ಸುಧಾಕರ ರಾಯ್ಕರ, ವಿನೋದ ಬನವಾಸಿ, ಮಂಜುನಾಥ ರಾಯ್ಕರ, ವಿನೋದ ಸೇರಿದಂತೆ ಇತರರು ಇದ್ದರು.ಮಾಜಿ ಪ್ರಿಯಕರನಿಂದ ಹಾಲಿ ಪ್ರಿಯಕರನ ಮೇಲೆ ಹಲ್ಲೆ

ಕುಮಟಾ: ಭಗ್ನ ಪ್ರೇಮಿಯೊಬ್ಬ ತನ್ನ ಪ್ರೀತಿ ನಿರಾಕರಿಸಿದ ಯುವತಿಯೊಂದಿಗೆ ಮದುವೆ ನಿಶ್ಚಯಿಸಿದ್ದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಪಟ್ಟಣದ ಮಣಕಿ ಮೈದಾನದ ಬಳಿ ಬುಧವಾರ ನಡೆದಿದೆ.ದುಂಡಕುಳಿಯ ಆಟೋಚಾಲಕ ವೃತ್ತಿಯ ಸಂತೋಷ ಪಾಂಡುರಂಗ ಅಂಬಿಗ (೨೭) ಹಲ್ಲೆಗೊಳಗಾದ ವ್ಯಕ್ತಿ. ಆರೋಪಿ ತಾಲೂಕಿನ ಹೆಗಡೆ ಚಿಟ್ಟಿಕಂಬಿಯ ನಿವಾಸಿ ವಾಟರ್ ಸರ್ವಿಸ್ ಕೆಲಸ ಮಾಡುವ ರಾಜೇಶ ರಮೇಶ ಅಂಬಿಗ (೨೭) ಎಂದು ಗುರುತಿಸಲಾಗಿದೆ.ಆರೋಪಿ ರಾಜೇಶ ಅಂಬಿಗ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದು, ಇತ್ತೀಚೆಗೆ ರಾಜೇಶನ ನಡವಳಿಕೆ ಸರಿಯಾಗಿಲ್ಲದಿದ್ದರಿಂದ ಯುವತಿ ರಾಜೇಶನಿಂದ ದೂರ ಸರಿದಿದ್ದಳು. ನಂತರ ಯುವತಿಯು ಸಂತೋಷ ಅಂಬಿಗನನ್ನು ಪ್ರೀತಿಸಿದ್ದು ಮದುವೆಯಾಗಲು ಇಚ್ಛಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ರಾಜೇಶ ಅಂಬಿಗ ಮಣಕಿ ಮೈದಾನಕ್ಕೆ ಸಂತೋಷ ಅಂಬಿಗನನ್ನು ಕರೆಸಿಕೊಂಡು ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗದಂತೆ ಕೊಲೆ ಬೆದರಿಕೆ ಹಾಕಿ, ಕಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆಯ ಮೇಲೆ ಇರಿದು ಹಲ್ಲೆ ಮಾಡಿದ್ದಾನೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ ತೀವ್ರ ಗಾಯಗೊಂಡ ಸಂತೋಷನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕೋಡ್ಕಣಿಯ ಸುಬ್ರಹ್ಮಣ್ಯ ನಾರಾಯಣ ಅಂಬಿಗ ದೂರಿನನ್ವಯ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!