ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯ

KannadaprabhaNewsNetwork |  
Published : Jun 04, 2025, 12:25 AM IST
ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಮಂಗಲ ಗ್ರಾಮದಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾರೋತ್ ಅವರು ಪ್ರತಿಭಟನಾಕಾರರನ್ನು ತಮ್ಮ ಕಚೇರಿಗೆ ಬರಮಾಡಿಕೊಂಡು ಮನವಿ ಆಲಿಸಿ, ಸ್ಥಳದಲ್ಲೇ ಹಾಜರಿದ್ದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಭಾರ ಕಾರ್ಯಪಾಲಕ ಅಭಿಯಂತರಾದ ಜಗದೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆದಿಶೇಷ ಅವರಿಗೆ 24 ತಾಸಿನೊಳಗೆ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್‌ನ ಕಾಮಗಾರಿ ರೆಕಾರ್ಡ್ ಕೊಡಬೇಕು ಸೂಚಿಸಿದರು. 2022-23ನೇ ಸಾಲಿನಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಮಂಜೂರಾಗಿದ್ದು, ಗ್ರಾಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡು ಪಾಸ್ ಆಗಿರುತ್ತದೆ. ಈ ಮಂಜೂರಾತಿ ಆದೇಶದಂತೆ ಗ್ರಾಪಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆರ್ ಡಬ್ಲ್ಯೂಎಸ್ ಇಲಾಖೆಯ ಅಧಿಕಾರಿಗಳು ಗುದ್ದಲಿಪೂಜೆ ಮಾಡಿಸಿರುತ್ತಾರೆ. ಸ್ಥಳದ ಜಂಜರ್ ನಂ. 2632 ಆಸ್ತಿ ನಂಬರ್ 909 ಆಗಿರುತ್ತದೆ. ಅದೇ ಸ್ಥಳದಲ್ಲೇ ಓವರ್‌ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಗುದ್ದಲಿಪೂಜೆ ಆಗಿರುವ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣ ಮಾಡಲು ಹೋದಾಗ ಗ್ರಾಮದ ಆರ್.ಶಿವಣ್ಣ ಡ್ರಾಮಾ ಮಾಸ್ಟರ್ ಹಾಗೂ ಅವರ ಸಂಬಂಧಿಕರಾದ ನಾಗಭೂಷಣ್, ಆಶಾ ಕಾರ್ಯಕರ್ತೆ ಮಾಲತಿ ಅವರ ಪತಿ ಬಸವರಾಜು ಮತ್ತು ಕುಟುಂಬ ವರ್ಗದವರು ಕೂಡ ತೊಂದರೆ ಕೊಡುತಿದ್ದಾರೆ. ಈ ಜಾಗವನ್ನು ಶಿವಣ್ಣ ಅವರು ತಮ್ಮ ತಾಯಿಯ ಹೆಸರಿಗೆ ಅಕ್ರಮವಾಗಿ.ಖಾತೆ ಮಾಡಿಸಿಕೊಂಡಿರುತ್ತಾರೆ. ಬೇರೆಯವರಿಗೆ ಕುಮ್ಮಕ್ಕು ನೀಡಿ ಕಾಮಗಾರಿ ಸ್ಥಗಿತಗೊಳಿಸುತ್ತಾರೆ. ಆಗಾಗಿ ಅಕ್ರಮ ಖಾತೆ ರದ್ದು ಪಡಿಸಿ ಅದೇ ಸ್ಥಳದಲ್ಲೇ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ ಗ್ರಾಮಕ್ಕೆ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಸುಮ, ಮಾಜಿ ಸದಸ್ಯ ರವಿ, ಕಾನ್ಸಿರಾಂ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹೊಂಡರಬಾಳು ವಾಸು, ಬಿಎಸ್‌ಪಿ ರಾಜ್ಯ ಕಾರಕಾರಿಣಿ ಸಮಿತಿ ಸದಸ್ಯ ಬ್ಯಾಡಮೂಡ್ಲು ಬಸವಣ್ಣ, ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ರಮೇಶ್, ಗ್ರಾಮದ ಮುಖಂಡರಾದ ರವಿಕುಮಾರ್, ಕೃಷ್ಣಮೂರ್ತಿ, ನಾಗೇಶ್, ಮಲ್ಲು, ಮಂಜು, ಭಾಗ್ಯಮ್ಮ, ಮಹದೇವಮ್ಮ, ಪಾರ್ವತಿ, ಸಿದ್ದಮ್ಮ, ಶಿವಮ್ಮ ಇತರರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ