ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಡಾ.ಎಚ್.ಎನ್.ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೈಕ್ ರ್ಯಾಲಿ ನಡೆಸಿದ ಕರವೇ ಕಾರ್ಯಕರ್ತರು ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ ರೈಲು ಮಾರ್ಗದ ಕಾಮಗಾರಿಯನ್ನು ಪ್ರಾರಂಭಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು. ನಂತರ ಪ್ರತಿಭಟನಕಾರರು ಗ್ರೇಡ್ 2 ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಕರವೇ ಅಧ್ಯಕ್ಷ್ಷ ಹರೀಶ್, ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಆಂಧ್ರದ ಸಾಯಿಬಾಬಾ ಪುಟ್ಟಪರ್ತಿಗೆ ಕೇಂದ್ರ ಸರ್ಕಾರ ರೈಲು ಮಾರ್ಗ ಕಾಮಗಾರಿ ನಿರ್ಮಾಣಕ್ಕೆ 20 ವರ್ಷಗಳು ಕಳೆದರೂ ಸಹ ಇದುವರೆವಿಗೂ ಕಾಮಗಾರಿ ಮಾತ್ರ ಪ್ರಾರಂಭವಾಗದಿರುವುದು ತಾಲೂಕಿನ ಜನರಲ್ಲಿ ನಿರಾಸೆ ಮೂಡಿಸಿದೆ. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯಧೋರಣೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.2009ರಲ್ಲಿ ಯಶವಂತಪುರ- ಸತ್ಯಸಾಯಿ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಯೋಜನೆ ಮಾಡಲು ಅಂದಿನ ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯ ಡಾ.ಎಂ.ವೀರಪ್ಪ ಮೊಯಿಲಿ, ಮಾಜಿ ಶಾಸಕ ಎನ್.ಸಂಪಂಗಿ ಅವರು ಅಂದಿನ ರೈಲ್ವೆ ಇಲಾಖೆಯ ಸಚಿವ ಮಮತಾ ಬ್ಯಾನರ್ಜಿ ಅವರ ಮೇಲೆ ಒತ್ತಡ ಹಾಕಿದ್ದರು. ಅವರು ಮಂಡಿಸಿದ ಬಜೆಟ್ನಲ್ಲಿ ಈ ರೈಲು ಯೋಜನೆ ಕಾಮಗಾರಿಗೆ 7480 ಕೋಟಿ ರು.ಗಳನ್ನು ಮೀಸಲಿಟ್ಟು, ಅನುದಾನ ಬಿಡುಗಡೆ ಮಾಡಿದ್ದರು. ಅದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಧೋರಣೆಯಿಂದಾಗಿ ಈ ಯೋಜನೆ ನೆನಗುದ್ದಿಗೆ ಬಿದಿದೆ.
ಈ ಸಂದರ್ಭದಲ್ಲಿ ತಾಲೂಕು ಕರವೇ ಪ್ರಧಾನ ಕಾರ್ಯದರ್ಶಿ ರಿಯಾಜ್ವುಲ್ಲಾ, ಉಪಾಧ್ಯಕ್ಷ ಅಲೀಮ್, ಜಿಲ್ಲಾ ಮಹಿಳಾ ಅಧ್ಯಕ್ಷರು ಸುಜಾತಮ್ಮ, ತಾಲೂಕು ಮಹಿಳಾ ಅಧ್ಯಕ್ಷೆ ಗಂಗರತ್ನಮ್ಮ, ಉಪಾಧ್ಯಕ್ಷರು ರಘು, ನಗರ ಘಟಕ ಅಧ್ಯಕ್ಷರು ಜಾನಿ, ಮುಖಂಡರಾದ ರಾಮರೆಡ್ಡಿ, ಶಿವಕುಮಾರ್, ಮಂಜುನಾಥ ನಾಯ್ಕೆ, ನರಸಿಂಹಮೂರ್ತಿ, ಶಂಕರ್, ಶಂಕರ್, ಅನ್ವರ್, ಬಾಬಾ, ರಹಮತ್ತುಲ್ಲಾ, ಮಂಜುನಾಥ, ರಾಜೇಶ್ವರಿ, ಜರೀನಮ್ಮ, ಚಾಂದ್ ಬಾಷ, ಅನಿಲ್, ಆಕೀಲ್, ಜಬಿ, ವೆಂಕಟೇಶ್ ಮತ್ತಿತರರು ಇದ್ದರು.
26ಬಿಜಿಪಿ-1: ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ಮಾರ್ಗವಾಗಿ ಪುಟ್ಟಪರ್ತಿಗೆ ರೈಲು ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಬಾಗೇಪಲ್ಲಿಯಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದರು.