ಅಧಿವೇಶನದಲ್ಲೇ ಚಿಕ್ಕೋಡಿ ಜಿಲ್ಲೆ ಘೋಷಣೆಗೆ ಆಗ್ರಹ

KannadaprabhaNewsNetwork |  
Published : Dec 18, 2025, 04:00 AM IST
ಧರಣಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ ಹತ್ತನೇ ದಿನವಾದ ಬುಧವಾರ ಹೋರಾಟ ತೀವ್ರ ಸ್ವರೂಪ ಪಡೆಯಿತು. ವಿಶಾಲವಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಆಗಬೇಕೆಂದು ನಡೆದ ದಶಕಗಳ ಹೋರಾಟದಲ್ಲಿ, ಇಂದು ಹತ್ತನೇಯ ದಿನಕ್ಕೆ ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆಯಿಂದ ಬೆಂಬಲದೊಂದಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ನಡೆದ ಧರಣಿ ಸತ್ಯಾಗ್ರಹ ಹತ್ತನೇ ದಿನವಾದ ಬುಧವಾರ ಹೋರಾಟ ತೀವ್ರ ಸ್ವರೂಪ ಪಡೆಯಿತು. ವಿಶಾಲವಾದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಆಗಬೇಕೆಂದು ನಡೆದ ದಶಕಗಳ ಹೋರಾಟದಲ್ಲಿ, ಇಂದು ಹತ್ತನೇಯ ದಿನಕ್ಕೆ ಕರ್ನಾಟಕ ರಾಜ್ಯ ರೈತ ಸಂಘ- ಹಸಿರು ಸೇನೆಯಿಂದ ಬೆಂಬಲದೊಂದಿಗೆ ನಡೆಯಿತು. ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ ನೇತೃತ್ವದಲ್ಲಿ ನೂರಾರು ರೈತ ಹೋರಾಟಗಾರರು ವೇದಿಕೆಗೆ ಆಗಮಿಸಿ, ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ರಾಜು ಪವಾರ, ಪ್ರಸ್ತುತ ಚಳಿಗಾಲ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗಬೇಕು, ಇದಕ್ಕೆ ತಪ್ಪಿದಲ್ಲಿ ಎಲ್ಲ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ರೈತ ಸಂಘದ ತಾಲೂಕಾ ಅಧ್ಯಕ್ಷ ಮನೋಜ ಮನಗುಳಿ ಮಾತನಾಡಿ, ಕರ್ನಾಟಕ ಸರ್ಕಾರ ಉಳಿದಿರುವ ಎರಡು ದಿನದ ಅಧಿವೇಶನದಲ್ಲಿ ಚಿಕ್ಕೋಡಿ ಜಿಲ್ಲೆಯನ್ನು ಘೋಷಿಸಿ, ಬೇಕಾಗುವ ಮೂಲಭೂತ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ, ನೀರಾವರಿ, ಕೈಗಾರಿಕೆ ಮತ್ತು ಉದ್ಯೋಗ ಇವುಗಳನ್ನು ನೀಡುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಕಲ್ಪಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಮುಖಂಡರಾದ ಸಿದ್ರಾಮ ಕರಗಾಂವಿ, ಕಲಗೌಡಾ ಪಾಟೀಲ, ಸಹಾದೇವ ಚಿಮ್ಮಟ, ಶಿವಗೌಡ ಪಾಟೀಲ, ವಿನಾಯಕ ಪಾಟೀಲ, ಕೆಂಪ್ಪಣ್ಣ ಕಾಮಗೌಡ, ಕೆಂಚಪ್ಪ ಕಾಮಗೌಡ, ಬಾಳೇಶ ಚನ್ನವರ, ಸಂತೋಷ ಮಠದ, ಅಶೋಕ ದಂಡಿನವರ, ಸತಿಗೌಡಾ ಬಸಗೌಡನವರ, ಶಂಕರ ಪಡೇದ, ಅಧ್ಯಕ್ಷ ಸಂಜು ಬಡಿಗೇರ, ಕಾರ್ಯದರ್ಶಿ ಚಂದ್ರಕಾಂತ ಹುಕ್ಕೇರಿ, ಚಂದ್ರಶೇಖರ ಅರಭಾಂವಿ, ಮಹಾದೇವ ಬರಗಾಲೆ, ಸಿದಗೌಡಾ ಪಾಟೀಲ, ಶಿವು ಮದಾಳೆ, ಸಿದ್ದು ಕಾಂಬಳೆ, ಸಂತೋಷ ಅಕ್ಕೆ, ಅಮೂಲ ನಾವಿ, ಡಿ.ಎ.ಮಾನೆ, ಅನೀಲ ನಾವಿ ಸೇರಿದಂತೆ ನೂರಾರು ಹೋರಾಟಗಾರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಂದ್ರಮೌಳೇಶ್ವರ ಸನ್ನಿಧಾನದಲ್ಲಿ ಪ್ರದೋಷ ಸಪ್ತರ್ಷಿ ಪೂಜೆ
ಪರಮೇಶ್ವರ್ ಸಿಎಂ ಆಗಲಿ: ಮಠಾಧೀಶರ ಒತ್ತಾಯ