ಕನ್ನಡಪ್ರಭ ವಾರ್ತೆ ಮೂಡಲಗಿ
ತಾಲೂಕಿನ ಹೊಸಯರಗುದ್ರಿ ಬರಪಿಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಹೊಸಯರಗುದ್ರಿ ಗ್ರಾಮದ ರೈತರು ಆಗ್ರಹಿಸಿ ಮೂಡಲಗಿ ತಹಸೀಲ್ದಾರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.2023-24ನೇ ಸಾಲಿನಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತು ತಾಲೂಕುಗಳಲ್ಲಿ ಮಳೆಯಾಗದೇ ಕುಡಿಯುವ ನೀರಿಗೂ ಪರದಾಡುವಂತಹ ಪರಸ್ಥಿತಿ ಬಂದಿದ್ದು, ಕಾರಣ ಸರ್ಕಾರದಿಂದ ಎಲ್ಲ ಬರಪಿಡಿತ ಪ್ರದೇಶಗಳಿಗೆ ಬರಪರಿಹಾರ ಹಣವನ್ನು ರೈತರ ಖಾತೆಗಳಿಗೆ ನೀಡಿದ್ದು ಇರುತ್ತದೆ. ಆದರೆ, ಮೂಡಲಗಿ ತಾಲೂಕಿನ ತುಂಬ ಬರಗಾಲ ಇದ್ದರೂ ಕೂಡ ಕೇವಲ 13 ಹಳ್ಳಿಗಳನ್ನು ಬರಪಿಡಿತ ಪ್ರದೇಶ ಎಂದು ಗುರುತಿಸಲಾಗಿರುತ್ತದೆ. ಅದರಂತೆ ಹೊಸ ಯರಗುದ್ರಿ ಗ್ರಾಮದಲ್ಲಿಯೂ ಕೂಡ ಈ ವರ್ಷ ಬರಗಾಲವಿದ್ದರೂ ನಮ್ಮ ಗ್ರಾಮವನ್ನು ಬರಪಿಡಿತ ಪ್ರದೇಶ ಎಂದು ಗುರುತಿಸಿಲ್ಲ. ನಮ್ಮ ಗ್ರಾಮವನ್ನು ನಿಜವಾಗಿಯೂ ಬರಪಿಡಿತ ಪ್ರದೇಶ ಇದೇಯೋ ಅಥವಾ ಇಲ್ಲವೋ ಎಂದು ಖಚಿತ ಪಡಿಸಿಕೊಂಡು ನಮ್ಮ ಗ್ರಾಮವನ್ನು ಬರಪೀಡಿತ ಪ್ರದೇಶ ಅಂತಾ ಘೋಷಿಸಿ ಮತ್ತು ಬರಗಾಲದಿಂದ ಬೆಳೆ ನಷ್ಟವಾದ ರೈತರಿಗೆ ನ್ಯಾಯ ಒದಗಿಸಿ ಬರಪರಿಹಾರ ಹಣವನ್ನು ನೀಡಬೇಕು ಎಂದು ಮನವಿ ಸಲ್ಲಿಸಿದರು.
ಶಿರಸ್ಥೆದಾರ ಪರುಶುರಾಮ ನಾಯಿಕ ರೈತರಿಂದ ಮನವಿ ಸ್ವೀಕಿಸಿ ಮೇಲಾಧೀಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಹೊಸಯರಗುದ್ರಿ ಗ್ರಾಮದ ರೈತರಾದ ವೆಂಕಪ್ಪ ನಾಯಿಕ, ನಿಂಗಪ್ಪ ಮಜ್ಜಗಿ, ಸುರೇಶ ನಾಯಕ, ಶಿವನಗೌಡ ಪಾಟೀಲ, ಬಸಪ್ಪ ಪಾಟೀಲ, ಅಡಿವೆಪ್ಪ ಮಿರ್ಜಿ, ತಿಮ್ಮನ ಮಜ್ಜಗಿ, ಪ್ರಮೋದ ಚನ್ನಾಳ, ಸುರೇಶ ಗೂಮ್ಮಡಿ, ಸಚೀನ ಮಾಳೇದ, ಸತ್ತೆಪ್ಪ ಹೂಗಾರ, ಕಷ್ಟಪ್ಪ ಪೂಜೇರಿ, ಭೀಮಪ್ಪ ಮಂಟನವರ, ಬಸನಗೌಡ ಗುದ್ದಿ, ಕಲ್ಲಪ್ಪ ಗುದ್ದಿ, ವೆಂಕಪ್ಪ ಮಜ್ಜಗಿ, ಸಿದ್ದಪ್ಪ ಮುರಕಟನಾಳ, ಶಂಕ್ರಪ್ಪ ಮಜ್ಜಗಿ, ಪದ್ಮನಾಭ ನ್ಯಾಮಗೌಡ ಮತ್ತಿತರರು ಇದ್ದರು.