ಕುಡಿಯುವ ನೀರಿಗಾಗಿ ಅಣ್ಣಾಮಾರನಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರ ಆಗ್ರಹ: ತಿಪಟೂರು ತಾಲೂಕು ಕಚೇರಿ ಮುಂದೆ ಪ್ರತಿಭಟನೆ

KannadaprabhaNewsNetwork |  
Published : Oct 16, 2026, 01:30 AM IST
ಕುಡಿಯುವ ನೀರಿಗಾಗಿ ಅಣ್ಣಾ ಮಾರನಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರ ಆಗ್ರಹ | Kannada Prabha

ಸಾರಾಂಶ

ಕಿಬ್ಬನಹಳ್ಳಿ ಹೋಬಳಿಯಲ್ಲಿ ಕೇವಲ ಅಣ್ಣಾಮಾರನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸುಮಾರು ಎಂಬತ್ತು ಕುಟುಂಬಗಳು ವಾಸಿಸುತ್ತವೆ. ನೀರಿನ ಸಮಸ್ಯೆ ಇರುವುದು ಇದೊಂದು ಹಟ್ಟಿಗೆ ಮಾತ್ರವಲ್ಲ. ನಮ್ಮ ಸಮುದಾಯ ವಾಸಿಸುವ ೩೯ ಹಟ್ಟಿಗಳಿಗೆ ಕೂಡ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ. ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಇರುವುದು ದುರದೃಷ್ಟಕರ. ಇಂದು ನೀರಿನ ವ್ಯವಸ್ಥೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ.

ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕಿನ ಅಣ್ಣಾ ಮಾರನಹಳ್ಳಿ ಹಾಗೂ ಇತರೆ ಗ್ರಾಮಗಳ ಗೊಲ್ಲರಹಟ್ಟಿ, ದೇವರಹಟ್ಟಿಯ ಗ್ರಾಮಸ್ಥರು ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಆಗ್ರಹಿಸಿ ಖಾಲಿ ಬಿಂದಿಗೆ, ಬಕೇಟುಗಳೊಂದಿಗೆ ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ಅಣ್ಣಮಾರನಹಳ್ಳಿ ಗೊಲ್ಲರಹಟ್ಟಿಯ ಗೌರಮ್ಮ, ರಾಮಕ್ಕ ಮಾತನಾಡಿ ನಮಗೆ ಕುಡಿಯಲು ಕೂಡ ನೀರಿಲ್ಲ. ಮೂರು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಬಂದರೂ ಕೇವಲ ೩-೪ ಮನೆಯವರು ತುಂಬಿಸಿಕೊಳ್ಳುವಷ್ಟರಲ್ಲಿ ನೀರು ನಿಲ್ಲುತ್ತಿದೆ. ದಯವಿಟ್ಟು ನಮ್ಮ ಹಟ್ಟಿಗೆ ನೀರಿನ ವ್ಯವಸ್ಥೆ ಮಾಡಿಕೊಡಿ. ತಾಲೂಕು ಆಡಳಿತ ನೀರಿನ ವ್ಯವಸ್ಥೆ ಮಾಡುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಆಗ್ರಹಿಸಿದರು.

ಕಾಡುಗೊಲ್ಲರ ಸಂಘದ ಅಧ್ಯಕ್ಷ ಬಾಲರಾಜು ಮಾತನಾಡಿ, ಕಿಬ್ಬನಹಳ್ಳಿ ಹೋಬಳಿಯಲ್ಲಿ ಕೇವಲ ಅಣ್ಣಾಮಾರನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸುಮಾರು ಎಂಬತ್ತು ಕುಟುಂಬಗಳು ವಾಸಿಸುತ್ತವೆ. ನೀರಿನ ಸಮಸ್ಯೆ ಇರುವುದು ಇದೊಂದು ಹಟ್ಟಿಗೆ ಮಾತ್ರವಲ್ಲ. ನಮ್ಮ ಸಮುದಾಯ ವಾಸಿಸುವ ೩೯ ಹಟ್ಟಿಗಳಿಗೆ ಕೂಡ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇಲ್ಲ. ಈ ಬಗ್ಗೆ ಈಗಾಗಲೇ ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಡಳಿತಕ್ಕೆ ಹಲವಾರು ಬಾರಿ ಮನವಿ ಮಾಡಿದರೂ ಕುಡಿಯುವ ನೀರಿನ ವ್ಯವಸ್ಥೆ ಮಾಡದೇ ಇರುವುದು ದುರದೃಷ್ಟಕರ. ಇಂದು ನೀರಿನ ವ್ಯವಸ್ಥೆ ಮಾಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಕಾಡುಗೊಲ್ಲರ ಸಂಘದ ಉಪಾಧ್ಯಕ್ಷ ಶಂಕರ್ ಮಾತನಾಡಿ, ನೀರು ಕೊಡಲಾಗದಿದ್ದರೆ ನಮಗೆ ಒಂದು ತೊಟ್ಟು ವಿಷವನ್ನಾದರೂ ಕೊಡಲಿ ಎಂದು ಬೇಸರದಿಂದ ನುಡಿದರು. ಇಒ ಸುದರ್ಶನ್ ಎಚ್.ಎಂ. ಮನವಿ ಸ್ವೀಕರಿಸಿ ಮಾತನಾಡಿ, ಇನ್ನು ಮೂರು ದಿನದೊಳಗೆ ಬೋರ್ ಕೊರೆಸಿ ನೀರಿನ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಪಿಡಿಓಗಳಿಗೆಗೆ ಸೂಚನೆ ನೀಡಲಾಗಿ ಎಂದು ಹೇಳಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಭವದಿಂದ ಜರುಗಿದ ಶ್ರೀರಂಗಪಟ್ಟಣ ದಸರಾ
೧೦೦ ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ