ಕನ್ನಡಪ್ರಭ ವಾರ್ತೆ, ಮಂಡ್ಯ
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಮಾವಣೆಗೊಂಡ ವಕೀಲರು ಜಿಲ್ಲಾಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಕಾರಿ ಬಿ.ಆರ್. ರೂಪ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರಿನಲ್ಲಿ ವಕೀಲರೊಬ್ಬರ ಕೊಲೆ ಮತ್ತು ಇನ್ನೊಂದು ಪ್ರಕರಣದಲ್ಲಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಗಳು ವರದಿಯಾಗಿರುವುದು ವಕೀಲರ ಸಮೂಹವನ್ನು ಘಾಸಿಗೊಳಿಸಿದೆ. ಅಂಬೇಡ್ಕರ್ ರಚಿಸಿರುವ ಸಂವಿಧಾನ ಸರ್ವರ ಹಕ್ಕನ್ನು ರಕ್ಷಿಸುವ ಮತ್ತು ರಕ್ಷಣೆ ನೀಡುವ ಆಶಯ ಹೊಂದಿದೆ. ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ವಕೀಲರಿಗೆ ರಕ್ಷಣೆ ಕೇಳುವ ದುರ್ಗತಿ ಬಂದಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಸಮಾಜದಲ್ಲಿ ಮೌಲ್ಯಾಧಾರಿತ ವ್ಯಕ್ತಿತ್ವ ಮರೆಯಾಗಿ ಹಣ ಮತ್ತು ತೋಳ್ಬಲದ ಪರಾಕ್ರಮಗಳು ವಿಜೃಂಭಿಸುತ್ತಿವೆ. ನ್ಯಾಯ ದೊರಕಿಸುವ ವಕೀಲರಿಗೆ ಅತ್ಯಂತ ಮುಜುಗರ, ಜೀವಕ್ಕೆ ಅಪಾಯವಾಗುವ ಪ್ರಕರಣಗಳು ವರದಿಯಾಗುತ್ತಿರುವುದು ಸ್ವಾಸ್ತ್ಯ ಮತ್ತು ಸಮ ಸಮಾಜದ ಅವಲಕ್ಷಣವಾಗಿದೆ. ನಮ್ಮ ರಕ್ಷಣೆಗೆ ನಾವೇ ಪ್ರತಿಭಟಿಸುವ ಅನಿವಾರ‌್ಯ ಘಳಿಗೆ ಬಂದಿರುವುದು ಅತ್ಯಂತ ದುರಂತ ಎಂದು ಆರೋಪಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್. ಸತ್ಯಾನಂದ, ಉಪಾಧ್ಯಕ್ಷ ದೇವರಾಜು, ಪ್ರಧಾನ ಕಾರ‌್ಯದರ್ಶಿ ಸತೀಶ್, ಖಜಾಂಚಿ ಚಂದ್ರಕಲಾ, ಸದಸ್ಯರಾದ ಶಂಕರ, ಯೋಗಾನಂದ, ಸಿದ್ದರಾಜು, ಚಂದ್ರಶೇಖರ್, ಗೀತಾ, ಜಿ.ಪಿ.ಎಸ್. ಶೋಭಾ, ಜಯಂತ್‌ಗೌಡ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.