ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಗೆ ಸೋಮವಾರ ಮನವಿ ಸಲ್ಲಿಸಿದರು.
ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಪಿ.ಬಿರಾದಾರ ಮಾತನಾಡಿ, ಗರ್ಭಿಣಿಯರು, ಅಂಗವಿಕಲರು ಹಾಗೂ ಮಹಿಳಾ ಶಿಕ್ಷಕರನ್ನು ಕೆಲಸದಿಂದ ಕೈಬಿಡಬೇಕು. ಚುನಾವಣೆ ಕರ್ತವ್ಯದಲ್ಲಿ ನಿರತರಾಗಿರುವ ಶಿಕ್ಷಕರಿಗೆ ಶುದ್ಧ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ, ಬಸ್, ವಸತಿ ಸೇರಿದಂತೆ ಇತರೆ ಮೂಲ ಸೌಕರ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ಯಂಕಂಚಿ, ಸಂಘದ ಖಜಾಂಚಿ ಪಿ.ಸಿ.ತಳಕೇರಿ, ಸಹಕಾರ್ಯದರ್ಶಿ ರೇಣುಕಾ ಇಂಡಿ, ಬಿಎಲ್ಒ ಗಳಾದ ಜಾಕೀರ್.ಎಸ್.ಬಗಲಿ, ದಾನು ರಾಠೋಡ, ಮಲ್ಲಿಕಾರ್ಜುನ ಶಿವಣಗಿ, ಎಸ್.ಕೆ. ಹೊಸಮನಿ, ಎಸ್.ಎಂ. ಹಿರೇಕುರುಬರ, ಮಹಾಂತಯ್ಯ ಮಠಪತಿ, ಎಂ.ಎಸ್. ಓತಿಹಾಳ, ಜಿ.ಎಸ್. ಬಿರಾದಾರ, ಆನಂದ್ ಶಿಕ್ಕೇರಿ ಸೇರಿದಂತೆ ಅನೇಕ ಶಿಕ್ಷಕರು ಉಪಸ್ಥಿತರಿದ್ದರು.