ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಗಾರಂಪಳ್ಳಿ ಗ್ರಾಮಸ್ಥರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಾದಯಾತ್ರೆ ಮೂಲಕ ಚಿಂಚೋಳಿ ಪಟ್ಟಣಕ್ಕೆ ಆಗಮಿಸಿ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಗ್ರಾಮದ ಮುಖಂಡ ಚಂದ್ರಶೇಖರ ಗುತ್ತೆದಾರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಮುಲ್ಲಾಮಾರಿ ನದಿ ದಂಡೆಯಲ್ಲಿರುವ ಗಾರಂಪಳ್ಳಿ ಗ್ರಾಮವು ಪ್ರತಿವರ್ಷ ಮಳೆಗಾಲದಲ್ಲಿಸೇತುವೆ ಮೇಲೆನದಿ ಪ್ರವಾಹ ನೀರು ತುಂಬಿ ಹರಿಯುತ್ತಿರುವುದರಿಂದ ನಾಲ್ಕುತಿಂಗಳ ಕಾಲ ಗ್ರಾಮಸ್ಥರು, ರೋಗಿಗಳು, ಶಾಲೆ ಕಾಲೇಜು, ಬೇರೆ ಕಡೆಗೆ ಹೋಗಲು ಶವ ಸಂಸ್ಕಾರ ಮಾಡಲು ಆಗುತ್ತಿಲ್ಲ. ಸೇತುವೆ ಮೇಲೆ ನಡೆದುಕೊಂಡು ಬರುತ್ತಿದ್ದ ದಲಿತ ವೃದ್ಧ ಮರೆಪ್ಪ ಸಂಬಣ್ಣ ನೀರಿನಲ್ಲಿ ಕೊಚ್ಚಿಕೊಂಡ ಹೋಗಿದ ಘಟನೆ ನಡೆದಿದೆ. ಗಾರಂಪಳ್ಳಿ ಸೇತುವೆ ಮೇಲ್ದರ್ಜೆಗೇರಿಸುವಂತೆ ಅನೇಕ ಸಲ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ.
ಆದರೆ, ನಮ್ಮ ಬೇಡಿಕೆಗೆ ಸರಕಾರ ಸ್ಪಂದಿಸಿರುವುದಿಲ್ಲ ೩ ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮವನ್ನು೪೦ ಕಿಮಿ ದೂರದಲ್ಲಿರುವ ಐನಾಪೂರ ಹೋಬಳಿ ವ್ಯಾಪ್ತಿಗೆ ಸೇರಿಸಲಾಗಿದೆ.ಆದರೆ ಚಿಂಚೋಳಿ ಹೋಬಳಿ ಕೇವಲ ೧೦ ಕಿಮಿ ದೂರದಲ್ಲಿದ್ದು ನಮ್ಮ ಗ್ರಾಮವನ್ನು ಚಿಂಚೋಳಿಗೆ ಸೇರ್ಪಡೆಗೊಳಿಸಿ ಜನರಿಗೆ ಅನುಕೂಲ ಮಾಡಬೇಕೆಂದು ಆಗ್ರಹಿಸಿದರು.ಗಾರಂಪಳ್ಳಿ ಗ್ರಾಪಂ ಅಧ್ಯಕ್ಷ ಪವನಕುಮಾರ ಪಾಟೀಲ ಮಾತನಾಡಿ, ಗಾರಂಪಳ್ಳಿ ಗ್ರಾಮವು ಸರಕಾರದ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸ್ವಾತಂತ್ರ್ಯಗಳಿಸಿ೭೫ ವರ್ಷಗಳು ಗತಿಸಿದರೂ ಸಹಾ ಚುನಾಯಿತ ಜನಪ್ರತಿನಿಧಿಗಳು ಗಮನಹರಿಸಿಲ್ಲವೆಂದು ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾರುತಿ ಗಂಜರಿಗಿ, ಗೋಪಾಲ ಪೂಜಾರಿ, ಗಂಗಾಧರ ಕುಲಕರ್ಣಿ, ಬಾಬುರಾವ ಬುಳ್ಳ, ಮೌನೇಶ ಮಾತನಾಡಿದರು.
ಗ್ರಾಮಸ್ಥರಾದ ಮಹಮ್ಮದ ರಫಿ, ವೀರಶೆಟ್ಟಿ ಮೋಘಾ, ಅಜಮತ ಅಲಿ, ಸಂಗಬಸಯ್ಯಮಠ, ಮೋಹನ ಗುತ್ತೆದಾರ, ರಜನಿಕಾಂತ ಬುಳ್ಳ, ಸೋಮಶೇಖರ ಪಾಟೀಲ, ಇಸ್ಮಾಯಿಲ ಮಾರುಫ, ಸುಭಾಷ ಗುತ್ತೆದಾರ, ಪ್ರಕಾಶ ಗುತ್ತೆದಾರ, ಬಾಬುರಾವ ಬುಳ್ಳ, ರಾಜಕುಮಾರ ಪೂಜಾರಿ, ರಾಜು ಎಂಪಳ್ಳಿ, ಡಾ.ಗುರುಪ್ರಸಾದ ಅಂಬಲಗಿ, ಶಂಕರ ಕುಲಕರ್ಣಿ, ಜಗನ್ನಾಥ ಬರಮ ಇನ್ನಿತರಿದ್ದರು.