ಕನ್ನಡಪ್ರಭ ವಾರ್ತೆ ಸಿಂಧನೂರು
ನಂತರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿ, ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲ ಎಂದು ಘೋಷಣೆ ಆಗಿದೆ. ತುಂಗಭದ್ರಾ ಡ್ಯಾಂನಲ್ಲಿ ನೀರಿಲ್ಲದ ಕಾರಣ ಒಂದು ಬೆಳೆ ಬರಲು ಸಾಧ್ಯವಾಗುತ್ತಿಲ್ಲ. ಬಿತ್ತಿದ ಜೋಳ ಬರುತ್ತದೆ ಎನ್ನುವುದು ಖಾತ್ರಿ ಇಲ್ಲ. ಇಂತಹ ಸ್ಥಿತಿಯುಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರ 2 ಕಂಪನಿಗಳಿಗೆ ರೂ.46 ಸಾವಿರ ಕೋಟಿ ಸಬ್ಸಿಡಿ ಕೊಟ್ಟಿದೆ. ಆದರೆ ರೈತರಿಗೆ ರೂ.2500 ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದ ಅಧ್ಯಕ್ಷ ಟಿ.ಹುಸೇನ್ಸಾಬ್ ಮಾತನಾಡಿ, ರೈತರು ಕೂಗು ಸರ್ಕಾರಗಳಿಗೆ ಮುಟ್ಟಿಸಲು ಈ ಪಾದಯಾತ್ರೆ ಅಣಿಯಾಗಲಿ ಎಂದರು.ಕೆಪಿಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ತಾಲೂಕು ಘಟಕದ ಅಧ್ಯಕ್ಷ ಹೆಚ್.ವಿರೂಪಾಕ್ಷಗೌಡ, ಕೃಷಿ ಕೂಲಿಕಾರ ಸಂಘದ ಅಧ್ಯಕ್ಷ ಶಂಕ್ರಪ್ಪ ಕೆಂಗಲ್, ಕಾರ್ಯದರ್ಶಿ ಅಪ್ಪಣ್ಣ ಕಾಂಬಳೆ ಪಾದಯಾತ್ರೆಯ ನೇತೃತ್ವ ವಹಿಸಿದ್ದರು. ಗಾಂಧಿ ವೃತ್ತದಿಂದ ಆರಂಭಗೊಂಡ ಪಾದಯಾತ್ರೆ ಸುಕಾಲಪೇಟೆ ಮೂಲಕ ಉದ್ಬಾಳ, ಗೋಮರ್ಸಿ, ಮಾಡಶಿರವಾರ, ಬೆಳಗುರ್ಕಿ ಮೂಲಕ ಅಲಬನೂರು ಗ್ರಾಮಕ್ಕೆ ತೆರಳಿ ವಾಸ್ತವ್ಯ ಹೂಡಿದರು.