ಸಂಸದ ಗೋವಿಂದ ಕಾರಜೋಳರಿಂದ ಕೇಂದ್ರ ಸಚಿವ ಮನಸುಖ್‌ಗೆ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಹಾಗೂ ಸಿಂಥೆಟಿಕ್ ಫುಟ್‍ಬಾಲ್ ಟ್ರಾಕ್ ನಿರ್ಮಾಣಕ್ಕಾಗಿ 27 ಕೋಟಿ ರು, ಹೊಳಲ್ಕೆರೆ ತಾಲೂಕು ಕ್ರೀಡಾಂಗಣದಲ್ಲಿ ಮೂಲ ಸೌಲಭ್ಯ ಒದಗಿಸಲು 18 ಕೋಟಿ ರು, ಹಿರಿಯೂರು ತಾಲೂಕು ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಸಿಂಥೆಟಿಕ್ ಟ್ರಾಕ್ ಹಾಗೂ ಈಜುಕೊಳ ನಿರ್ಮಾಣ, ಚಳ್ಳಕೆರೆ ತಾಲೂಕು ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ನಿರ್ಮಾಣಕ್ಕೆ ಅನುದಾನ ಕೋರಿದ್ದಾರೆ.
ಈ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸಚಿವಾಲಯಕ್ಕೆ ಪ್ರಸ್ತಾವನೆಗಳನು ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರದಿಂದ ಸಲ್ಲಿಸಿರುವ ಪ್ರಸ್ಥಾವನೆಗೆ ಅಗತ್ಯ ಅನುದಾನದೊಂದಿಗೆ ಅನುಮೋದನೆ ನೀಡುವಂತೆ ಸಂಸದರು ಕೇಂದ್ರ ಸಚಿವರಲ್ಲಿ ಮನವಿ ಮಾಡಿದ್ದಾರೆ.