ಸಿದ್ದಾಪುರ: ರಾಜ್ಯ ಸರ್ಕಾರವು ಶೀಘ್ರವಾಗಿ ೭ನೇ ವೇತನ ಆಯೋಗದ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಅಧ್ಯಕ್ಷ ರಾಜೇಶ ನಾಯ್ಕ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ನೌಕರರು ತಹಸೀಲ್ದಾರ ಎಂ.ಆರ್. ಕುಲಕರ್ಣಿಯವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರಮುಖ ಬೇಡಿಕೆಗಳಾದ ೭ನೇ ವೇತನ ಆಯೋಗದ ವರದಿ ಯಥಾವತ್ತಾಗಿ ಅನುಷ್ಠಾನ, ಎನ್‌ಪಿಎಸ್ ರದ್ದು ಮಾಡಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು, ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು ಮುಂತಾದವುಗಳ ಶೀಘ್ರ ಅನುಷ್ಠಾನಕ್ಕೆ ಮನವಿಯಲ್ಲಿ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರಾಜೇಶ ನಾಯ್ಕ, ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್., ಕಾರ್ಯದರ್ಶಿ ಪರಶುರಾಮ ನಾಯ್ಕ, ಖಜಾಂಚಿ ತೇಜಸ್ವಿ ನಾಯ್ಕ, ಪದಾಧಿಕಾರಿಗಳಾದ ಸಿ.ಎನ್. ನಾಯ್ಕ, ಹರೀಶ ನಾಯ್ಕ, ಸುಬ್ರಹ್ಮಣ್ಯ ಹೆಗಡೆ, ಪೀಟರ್, ಉಪನ್ಯಾಸಕ ರತ್ನಾಕರ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಟಿ.ಕೆ. ನಾಯ್ಕ, ರಾಜ್ಯ ಪ್ರತಿನಿಧಿ ಗೋಪಾಲ ನಾಯ್ಕ, ವಿ.ಡಿ. ನಾಯ್ಕ, ವಿವಿಧ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಚತುಷ್ಪಥ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಕಾರವಾರ: ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಜಯಕರ್ನಾಟಕ ಜನಪರ ವೇದಿಕೆ ಜಿಲ್ಲಾಡಳಿತದ ಮೂಲಕ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರನ್ನು ಆಗ್ರಹಿಸಿದೆ.ಈ ಕುರಿತು ಮನವಿ ನೀಡಿರುವ ವೇದಿಕೆಯ ಪದಾಧಿಕಾರಿಗಳು, ಅಪೂರ್ಣವಾಗಿರುವ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಜಿಲ್ಲಾದ್ಯಂತ ಗುಡ್ಡ ಕುಸಿವ ಆತಂಕ ಎದುರಾಗಿದ್ದು, ಕೂಡಲೇ ಕಂಪನಿಯ ಮೂಲಕ ಸುರಕ್ಷಿತ ಕ್ರಮಕ್ಕೆ ಮುಂದಾಗಬೇಕು.
ಭಟ್ಕಳ ಗಡಿಯಿಂದ ಕಾರವಾರದ ಗಡಿಯವರಿಗೆ ಸುರಕ್ಷಿತ ತಡೆಬೇಲಿ(ಬ್ಯಾರಿಕೇಡ್)ನಿರ್ಮಿಸಿ ಜಾನುವಾರುಗಳು ಮತ್ತು ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕು. ಅಂಕೋಲಾ ಮತ್ತು ಕಾರವಾರ ತಾಲೂಕುಗಳ ಗಡಿಭಾಗದಲ್ಲಿ ಕಳೆದ ಒಂದು ದಶಕದಿಂದ ಅಲ್ಲಿನ ಕರಿದೇವರ ಗುಡ್ಡದ ಮೇಲೆ ಕಾಮಗಾರಿಯ ನೆಪದಲ್ಲಿ ಸಾವಿರಾರು ಟನ್ ಕಲ್ಲುಗಳನ್ನು ಬೇರೆಡೆ ಸಾಗಿಸಲಾಗಿದ್ದು, ಈ ಕಲ್ಲುಗಳು ಯಾರಿಂದ ಎಲ್ಲಿ ಹೋಗಿವೆ ಎಂಬ ಮಾಹಿತಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದರೆ ಸಾರ್ವಜನಿಕರ ಹಿತಾಸಕ್ತಿಯಿಂದ ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ವೇದಿಕೆಯ ಜಿಲ್ಲಾಧ್ಯಕ್ಷ ದಿಲೀಪ್ ಜಿ. ಅರ್ಗೇಕರ, ರೋಷನ್ ಹರಿಕಂತ್ರ, ಸುದೇಶ್ ನಾಯ್ಕ್ ಮತ್ತಿತರರು ಇದ್ದರು.