ಮುತವಾಡ-ಮದನಭಾಂವಿ ರಸ್ತೆ ಸುಧಾರಣೆಗೆ ಆಗ್ರಹ

KannadaprabhaNewsNetwork |  
Published : Jun 10, 2025, 10:39 AM IST
ಬೈಲಹೊಂಗಲ ಮತಕ್ಷೇತ್ರದ ಮುತವಾಡದಿಂದ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ಮದನಭಾಂವಿವರೆಗೆ ರಸ್ತೆ ಅಭಿವೃದ್ಧಿ ಪಡಿಸಲು ಆಗ್ರಹಿಸಿ ಮುತವಾಡ ಗ್ರಾಮಸ್ಥರು ಎಂ.ಅನಿಲಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಡುವ ಸವದತ್ತಿ ತಾಲೂಕಿನ ಮುತವಾಡ ಗ್ರಾಮದಿಂದ ತಾಲೂಕಿನ ಮದನಭಾಂವಿ ಗ್ರಾಮದವರೆಗಿನ ರಸ್ತೆ ತೀವ್ರ ಹದಗೆಟ್ಟಿದ್ದು ಅಭಿವೃದ್ಧಿ ಪಡಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಬೈಲಹೊಂಗಲ ಮತಕ್ಷೇತ್ರಕ್ಕೆ ಒಳಪಡುವ ಸವದತ್ತಿ ತಾಲೂಕಿನ ಮುತವಾಡ ಗ್ರಾಮದಿಂದ ತಾಲೂಕಿನ ಮದನಭಾಂವಿ ಗ್ರಾಮದವರೆಗಿನ ರಸ್ತೆ ತೀವ್ರ ಹದಗೆಟ್ಟಿದ್ದು ಅಭಿವೃದ್ಧಿ ಪಡಿಸಲು ಆಗ್ರಹಿಸಿ ಮುತವಾಡದ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಅನಿಲಗೆ ಸೋಮವಾರ ಮನವಿ ಸಲ್ಲಿಸಿದರು.

ರಾ.ಹೆ. ನಂ.138 ರಲ್ಲಿನ ಸುಮಾರು 3ರಿಂದ 4 ಕಿ.ಮೀ ಅಂತರವಿರುವ ಈ ರಸ್ತೆಯು ಸಂಚಾರ ಮಾಡದಷ್ಟು ತೀರಾ ಹದಗೆಟ್ಟಿದೆ. ಈ ಮಾರ್ಗದ ಬಸ್ ಸಂಚಾರಗಳನ್ನು ಸಾರಿಗೆ ಇಲಾಖೆ ಸ್ಥಗಿತಗೊಳಿಸಿದ್ದರಿಂದ ನಾಗರಿಕರು, ವಿದ್ಯಾರ್ಥಿಗಳು, ವಯೋವೃದ್ಧರು, ಅಂಗವಿಕಲರು, ವ್ಯಾಪರಸ್ಥರಿಗೆ ನೇಸರಗಿ ಭಾಗಕ್ಕೆ ತೆರಳಲು ತೀವ್ರ ಅನಾನುಕೂಲವಾಗಿದೆ. ಮಳೆಗಾಲ ಬಂತೆಂದರೆ ಸಾಕು ಈ ರಸ್ತೆಯು ಹೊಲದ ದಾರಿಯಾಗಿ ಮಾರ್ಪಡಾಗುತ್ತಿದ್ದು, ರಸ್ತೆ ಅಭಿವೃದ್ಧಿ ಕುರಿತು ಹಲವಾರು ಬಾರಿ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾಮಾಜಿಕ ಹೊರಾಟಗಾರ ಈರಪ್ಪ ಜರಳಿ ಹಾಗೂ ಗ್ರಾಮದ ನಾಗರಿಕರು ಆರೋಪಿಸಿದ್ದಾರೆ.

ಮುತವಾಡ ಗ್ರಾಮದಿಂದ ಅರ್ಧಭಾಗ ಬೈಲಹೊಂಗಲ ಮತಕ್ಷೇತ್ರ ಇನ್ನೊಂದು ಭಾಗ ಚನ್ನಮ್ಮನ ಕಿತ್ತೂರು ಮತಕ್ಷೇತ್ರದ ವ್ಯಾಪ್ತಿಗೆ ಬರುವುದರಿಂದ ಅಭಿವೃದ್ಧಿಗೆ ಮೀನಮೇಷ ಮಾಡಲಾಗುತ್ತಿದೆ. ರಸ್ತೆ ಹಾಳಾದಾಗಿನಿಂದ ನಿತ್ಯ ದ್ವಿಚಕ್ರ ಸವಾರರು, ದಾರಿ ಹೋಕರು, ವಾಹನ ಚಾಲಕರು ಹಲವಾರು ಸಮಸ್ಯೆ ಎದುರಿಸುತ್ತಿದ್ದು, ಈಗಲಾದರೂ ಸರ್ಕಾರ ಎಚ್ಚೆತ್ತು ಕೂಡಲೇ ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಈ ವೇಳೆ ಸಾಮಾಜಿಕ ಹೋರಾಟಗಾರ ಈರಪ್ಪ ಜರಳಿ, ಲಕ್ಷೀ ಬಸಪ್ರಭುನವರ, ರಾಣಿ ದೇಸಾಯಿ, ಪೂಜಾ ರಾಮದುರ್ಗ, ಐಶ್ವರ್ಯ ಮಾವಿನಕಟ್ಟಿ, ದೀಪಾ ದಿನ್ನಿಮನಿ, ಜ್ಯೋತಿ ಶೀಲವಂತರ, ಸುರೇಖಾ ರಾಮದುರ್ಗ, ಕಸ್ತೂರಿ ರಾಮದುರ್ಗ, ಪಾರ್ವತೆವ್ವ ರಾಮದುರ್ಗ, ಶಿಲಾ ಹೊಸೂರ, ಸುಮಿತ್ರಾ ದುರದುಂಡಿ, ಶಕುಂತಾಲಾ ಗುರಿಕನವರ, ನಿಂಗವ್ವಾ ರಾಮದುರ್ಗ, ರೂಪಾ ಮಾವಿನಕಟ್ಟಿ, ನಿಂಗಮ್ಮಾ ಮೀರಾಕೂರ, ಆನಂದ ದಿನ್ನಿಮನಿ, ಶ್ರೀಶೈಲ ಗುಟಗುದ್ದಿ, ಅಭಿಷೇಕ ಸೋಲಬನ್ನವರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ