ಕನ್ನಡಪ್ರಭ ವಾರ್ತೆ ಬೀಳಗಿ
ಪಟ್ಟಣದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ ಸಂಘ ಒಕ್ಕೂಟ ಹಾಗೂ ಭಾರತೀಯ ಮಜ್ದೂರ ಸಂಘ ಸಹಯೋಗದಲ್ಲಿ ಬೀಳಗಿ ಬಸ್ ನಿಲ್ದಾಣದಿಂದ ತಹಸೀಲ್ದಾರ್ ಕಚೇರಿಯವರಿಗೆ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಕಾರ್ಮಿಕರು ಜಾಗೃತಿ ಜಾಥಾ ಮೂಲಕ ಆಗಮಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರ್ನಾಟಕ ರಸ್ತೆ ಸಾರಿಗೆ ಭಾರತೀಯ ಮಜ್ದೂರ ಸಂಘ ಒಕ್ಕೂಟದ ಹುಬ್ಬಳ್ಳಿ ವಲಯದ ಅಧ್ಯಕ್ಷ ಭದ್ರೇಶ ಹಲಗಲಿ, ಜನವರಿ 1 2020 ರಿಂದ ಜಾರಿಯಾಗಬೇಕಿದ್ದ ವೇತನ ಪರಿಷ್ಕರಣೆ 2023ರ ಮಾರ್ಚ್‌ನಿಂದ ಜಾರಿ ಆಗಿದೆ. ಆದರೆ, 38 ತಿಂಗಳುಗಳ ಹಿಂಬಾಕಿ ನೀಡಿಲ್ಲ. ಇದರಿಂದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ಬದುಕು ನಡೆಸುವುದು ದುಸ್ತರವಾಗಿದೆ. ಸರಕಾರ ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.ಈ ವೇಳೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಬಿ.ಎಂ.ಎಸ್ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳಾದ ಗಂಗಾಧರ ಗಾಣಿಗೇರ, ಸೂರ್ಯಕಾಂತ ಪರಾಂಡೆ, ದಶರಥ ದಾಮೋಜಿ,ಮಾಂತೇಶ ಅಗಸಿಮುಂದಿನ, ಶಿವಾನಂದ ಬಡಿಗೇರ, ನಿಂಗಪ್ಪ ಬಿರಾದರ, ಹನುಮಂತ ಬಾದರದಿನ್ನಿ, ಆನಂದ ಗೌಡನ್ವನರ, ಎಸ್.ಆರ್.ಪೊಲೇಸಿ, ಮಲ್ಲಪ್ಪ ಶೇಲ್ಲಿಕೇರಿ, ಶರಣು ವಿಭೂತಿ, ಎಸ್.ಎಸ್.ಬಿರಾದಾರ, ಸಿದ್ದಪ ಟಕ್ಕಳಕಿ, ಮಲ್ಲಪ್ಪ ನ್ಯಾಮಗೌಡರ ಇದ್ದರು.