ಶಾಶ್ವತ ಕುಡಿವ ನೀರಿನ ಯೋಜನೆಗೆ ಆಗ್ರಹ

KannadaprabhaNewsNetwork |  
Published : Jul 25, 2024, 01:27 AM IST
ಪೊಟೋ-ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವಂತೆ ಪುರಸಭೆಯ ಮುಖ್ಯಾಧಿಕಾರಿ ಮೂಲಕ ಸರ್ಕಾರಕ್ಕೆ ಕರವೇ ಸ್ವಾಭಿಮಾನಿ ಸೇನೆಯ ಸದಸ್ಯರು ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಈ ಹಿಂದೆ ಮೇವುಂಡಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದು.ಆದರೆ ಬೇಸಿಗೆ ಕಾಲದಲ್ಲಿ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದಲ್ಲದೆ ಬಹಳಷ್ಟು ಸಲ ಬತ್ತಿ ಹೋಗುತ್ತದೆ

ಲಕ್ಷ್ಮೇಶ್ವರ: ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತುಂಗಭದ್ರಾ ನದಿ ತೀರದ ಪ್ರದೇಶವಾದ ಗುಮ್ಮಗೋಳ ಗ್ರಾಮದಿಂದ ಪಟ್ಟಣಕ್ಕೆ ನೀರು ಪೂರೈಸುವ ಯೋಜನೆ ಜಾರಿಗೊಳಿಸಬೇಕು ಎಂದು ಕರವೇ ಸ್ವಾಭಿಮಾನಿ ಸೇನೆಯ ಗದಗ ಜಿಲ್ಲಾಧ್ಯಕ್ಷ ಶರಣು ಗೋಡಿ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಬುಧವಾರ ಪಟ್ಟಣದ ಪುರಸಭೆಗೆ ಆಗಮಿಸಿದ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಿ ಮಾತನಾಡಿದರು.

ಲಕ್ಷ್ಮೇಶ್ವರ ಪಟ್ಟಣವು ಗದಗ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದ್ದು, ಪಟ್ಟಣದಲ್ಲಿ ಸುಮಾರು 50 ಸಾವಿರ ಜನರು ವಾಸವಿದ್ದು, ಪಟ್ಟಣಕ್ಕೆ ಪ್ರತಿನಿತ್ಯ 20 ಸಾವಿರ ಜನರು ವ್ಯಾಪಾರ ವಹಿವಾಟು, ಉದ್ಯೋಗ ಮಾಡಲು ಹಾಗೂ ಪ್ರಸಿದ್ಧವಾದ ಸೋಮೇಶ್ವರ ದೇವಾಲಯ, ದೂದಪೀರಾಂ ದರ್ಗಾ ಹಾಗೂ ಜೈನರ್‌ ಬಸೀದಿ ಸೇರಿದಂತೆ ಇನ್ನಿತರ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಮಾಡಲು ಆಗಮಿಸುತ್ತಾರೆ. ಇಂತಹ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅವಶ್ಯಕತೆ ಇದೆ ಎಂದರು.

ಈ ಹಿಂದೆ ಮೇವುಂಡಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದು.ಆದರೆ ಬೇಸಿಗೆ ಕಾಲದಲ್ಲಿ ನದಿ ಪಾತ್ರದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದಲ್ಲದೆ ಬಹಳಷ್ಟು ಸಲ ಬತ್ತಿ ಹೋಗುತ್ತದೆ.ಇದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಪರದಾಡುವಂತಾಗುತ್ತದೆ. ಆದ್ದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹಮ್ಮಗಿ ಬ್ಯಾರೇಜಿನ ಹಿನ್ನೀರಿನ ಗ್ರಾಮವಾದ ಗುಮ್ಮಗೋಳದಿಂದ ನೀರು ಪೂರೈಸುವ ಜಾಕ್‌ವೆಲ್ ನಿರ್ಮಾಣ ಮಾಡಿ ನೀರು ಪೂರೈಸುವ ಶಾಶ್ವತ ಯೋಜನೆ ರೂಪಿಸುವುದು ಅಗತ್ಯವಾಗಿದ್ದು. ಸರ್ಕಾರ ಶೀಘ್ರದಲ್ಲಿ ಹೊಸ ಯೋಜನೆ ರೂಪಿಸಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಕರವೇ ಸ್ವಾಭಿಮಾನಿ ಸೇನೆಯ ಗದಗ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ,ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ನಾಗೇಶ ಅಮರಾಪೂರ, ಪ್ರವೀಣ ಆಚಾರಿ, ಮಹ್ಮದಲಿ ಶಿಗ್ಗಾವಿ, ಮೈನುದ್ದೀನ ಮನಿಯಾರ, ವಿನಾಯಕ ಚಿತ್ರಬಾವಿ, ಅಭಿಷೇಕ ಸಾತಪೂತೆ., ವಿನಾಯಕ ಸಂಶಿ, ನಾಗರಾಜ ಅಣ್ಣಿಗೇರಿ, ಯಲ್ಲಪ್ಪ ಹಂಜಗಿ, ಯಲ್ಲಪ್ಪಗೌಡ ಮದ್ನೂರ,ಚಂದ್ರಕಾಂತ ರೊಟ್ಟಿಗವಾಡ, ಮಹಾಂತಗೌಡ ಪಾಟೀಲ, ಶಂಕರ ಬೂದಿಹಾಳ, ಪ್ರಕಾಶ ತೇರದಾಳ, ಗಣೇಶ ಕಳಸೂರ, ಸುಧಾಕರ ಸವಣೂರ, ನಾಗರಾಜ ಬನ್ನಿ, ಕಿರಣ ಸಾಳಂಕಿ ಸೇರಿದಂತೆ ಅನೇಕರು ಇದ್ದರು.

PREV

Recommended Stories

ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿವಿಗೆ ಅನುದಾನ: ಸಚಿವ
ಸಂಭ್ರಮದ ಮೌನೇಶ್ವರ ಜಾತ್ರಾ ಮಹೋತ್ಸವ