ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡಲು ಆಗ್ರಹ

KannadaprabhaNewsNetwork |  
Published : Mar 30, 2026, 02:00 AM IST
ಮುಖ್ಯ ಶಿಕ್ಷಕರ ಹುದ್ದೆಗೆ ಸಹ ಶಿಕ್ಷಕರಿಗೆ ಬಡ್ತಿ ನೀಡಲು ಆಗ್ರಹಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ವಿಳಂಬಕ್ಕೆ ಅವಕಾಶ ನೀಡದೇ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರಧಾನ ಗುರುಗಳ ಹುದ್ದೆಗೆ ಬಡ್ತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಗದಗ: ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಮುಖ್ಯ ಶಿಕ್ಷಕರ ಹುದ್ದೆಗೆ ಅರ್ಹ ಸಹ ಶಿಕ್ಷಕರಿಗೆ ಬಡ್ತಿ ನೀಡಿ ಆದೇಶ ನೀಡಬೇಕೆಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ಘಟಕದಿಂದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಖಾಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಹ ಶಿಕ್ಷಕರ ಹುದ್ದೆಯಿಂದ ಪ್ರಧಾನ ಗುರುಗಳ ಹುದ್ದೆಗೆ ಬಡ್ತಿ ನೀಡಲು ಈಗಾಗಲೇ ಆಯುಕ್ತರಿಂದ ಆದೇಶವಾಗಿದ್ದು, ಅಲ್ಲದೇ ನೇಮಕಾತಿ ಪ್ರಾಧಿಕಾರವು ತಾವೇ ಆಗಿರುವುದರಿಂದ ಪ್ರಧಾನ ಗುರುಗಳ ಬಡ್ತಿ ಕೌನ್ಸಲಿಂಗ್‌ನ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಅಧಿಕಾರ ತಮಗೆ ಇರುವುದರಿಂದ 2026ರ ಜ. 1ಕ್ಕೆ ಇದ್ದಂತೆ ಜೇಷ್ಠತಾ ಪಟ್ಟಿಯನ್ನು ಬಿಡುಗಡೆ ಮಾಡಬೇಕು.ವಿಳಂಬಕ್ಕೆ ಅವಕಾಶ ನೀಡದೇ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಹುದ್ದೆಯಿಂದ ಪ್ರಧಾನ ಗುರುಗಳ ಹುದ್ದೆಗೆ ಬಡ್ತಿ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಮನವಿ ಸ್ವೀಕರಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕ ಆರ್.ಎಸ್. ಬುರಡಿ ಅವರು, ಶೀಘ್ರದಲ್ಲಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಹೇಶ ಕುರಿಯವರ, ಉಪಾಧ್ಯಕ್ಷ ಎಂ.ವೈ. ಜಕ್ಕರಸಾನಿ, ಮೋಹನ ಮೆಣಸಿನಕಾಯಿ, ಎ.ಕೆ. ವಂಟಿ, ಹರ್ತಿ, ಎಸ್.ಆರ್. ಬಂಡಿ, ಎನ್.ಟಿ. ಪಾಟೀಲ, ಐ.ಡಿ. ಗಾಣಿಗೇರ, ಸಿ.ಕೆ. ಕೇಸರಿ, ಎಂ.ವೈ. ಮಲಕಶೆಟ್ಟಿ, ಕೆ.ಬಿ. ಕೊಣ್ಣೂರ, ಬಿ.ಬಿ. ಹಡಪದ, ಅಣ್ಣಿಗೇರಿ, ಆರ್.ಬಿ. ರಂಗಣ್ಣವರ, ಐ.ಕೆ. ಮೋಟಗಿ, ಬಿ.ಎಸ್. ತಮ್ಮನಗೌಡರ ಸೇರಿದಂತೆ ಮುಂತಾದವರಿದ್ದರು.ಜಾನುವಾರುಗಳು ರೈತರ ಜೀವನಾಡಿಗಳು

ಲಕ್ಷ್ಮೇಶ್ವರ: ರೈತರ ಕೃಷಿ ಚಟುವಟಿಕೆಯಲ್ಲಿ ಜಾನುವಾರು ಪ್ರಮುಖ ಪಾತ್ರ ವಹಿಸುತ್ತವೆ. ದೇಶದ ಹಾಲು ಉತ್ಪಾದನೆಗೆ ಜಾನುವಾರುಗಳ ಕೊಡುಗೆ ಅಪಾರ ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.ಸಮೀಪದ ಬಟ್ಟೂರು ಗ್ರಾಮದ ಗ್ರಾಪಂ ಆವರಣದಲ್ಲಿ ಶುಕ್ರವಾರ ನಡೆದ ಜಾನುವಾರು ಸಂತೆ ಉದ್ಘಾಟಿಸಿ ಮಾತನಾಡಿದರು.ಅನ್ನದಾತರ ಶ್ರಮದಲ್ಲಿ ಬಹಳಷ್ಟು ಕೆಲಸವನ್ನು ಜಾನುವಾರುಗಳು ಮಾಡುತ್ತವೆ. ಎತ್ತು ರೈತರ ಕಣ್ಣುಗಳಿದ್ದ ಹಾಗೆ. ಕೃಷಿ ಚಟುವಟಿಕೆಯಲ್ಲಿ ಜಾನುವಾರುಗಳ ಪಾತ್ರ ಬಹುಮುಖ್ಯವಾಗಿದೆ. ಅಲ್ಲದೆ ಹೈನುಗಾರಿಕೆ. ಕೊಟ್ಟಿಗೆ ಗೊಬ್ಬರ ಸೇರಿದಂತೆ ವಿವಿಧ ಕಾರ್ಯಗಳಲ್ಲಿ ಜಾನುವಾರುಗಳ ಪಾತ್ರ ಮಹತ್ವದ್ದಾಗಿದೆ.

ರೈತರು ಜಾನುವಾರುಗಳಿಂದ ವಿಮುಖರಾಗಿ ಆಧುನಿಕ ಯಾಂತ್ರೀಕರಣ ಕೃಷಿಯತ್ತ ಒಲವು ತೋರಿದ್ದರಿಂದ ಜಾನುವಾರುಗಳ ಸಾಕಾಣಿಕೆ ವಿರೆಳವಾಗುತ್ತಿರುವುದು ನೋವಿನ ಸಂಗತಿ. ರೈತರು ಯಾಂತ್ರೀಕರಣದ ಜತೆ ಹೈನುಗಾರಿಕಯಂತಹ ಉಪಕಸುಬಿಗೆ ಒಲವು ತೋರಿಸಬೇಕು ಎಂದರು.ಈ ವೇಳೆ ಕಲ್ಲಪ್ಪ ಹಡಪದ, ಪರಸಪ್ಪ ಇಮ್ಮಡಿ, ಜಗದೀಶಗೌಡ ಪಾಟೀಲ, ತಾಪಂ ಇಒ ಕೃಷ್ಣಪ್ಪ ಧರ್ಮರ, ಪರಶುರಾಮ ಹತ್ತಾಳ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು, ಪಿಡಿಒ, ಸಿಬ್ಬಂದಿ ಇದ್ದರು. ಈ ವೇಳೆ ಗ್ರಾಮದ ನೂರಾರು ರೈತರು ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಉತ್ತಮ ಹಾಗೂ ಆರೋಗ್ಯವಂತ ಜಾನುವಾರುಗಳಿಗೆ ಶಾಸಕರು ಬಹುಮಾನ ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಶೋಧಕರಿಗೆ ಆಳವಾದ ಅಧ್ಯಯನ ಅಗತ್ಯ
ರೈತರ ಏಳ್ಗೆಗೆ ಬೆನ್ನೆಲುಬಾಗಿ ನಿಂತ ಸಹಕಾರಿ ರಂಗ: ಶಿವರಾಮ ಹೆಬ್ಬಾರ್