ದಾವಣಗೆರೆ: ವಕ್ಫ್ ಮಂಡಳಿಯು ರೈತರು, ಮಠ ಮಂದಿರ, ರೈತರು, ಜನರ ಆಸ್ತಿ, ಜಮೀನುಗಳನ್ನು ತನ್ನ ವಶಕ್ಕೆ ಪಡೆಯಬಹುದಾಗಿದ್ದು, ನಮ್ಮ ಜಮೀನು ವಕ್ಫ್ ನ್ಯಾಯ ಮಂಡಳಿಗೆ ಹೋದರೆ ಅದನ್ನು ಪ್ರಶ್ನಿಸುವಂತಿಲ್ಲ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ ಕಳವಳ ವ್ಯಕ್ತಪಡಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಅನೇಕ ಕಡೆ ವಕ್ಫ್ ನೋಟಿಸ್ ನೀಡಿದ್ದು, ನಿನ್ನೆಯಷ್ಟೇ ಚಿಂತಾಮಣಿ ತಾಲೂಕಿನಲ್ಲಿ ರೈತರ ಜಮೀನು ವಶಕ್ಕೆ ಪಡೆಯಲು ಟ್ರ್ಯಾಕ್ಟರ್ ಜಪ್ತು ಮಾಡಲಾಗಿದೆ. ಹೀಗೆ ಸಾಕಷ್ಟು ಘಟನೆಗಳು ಕಣ್ಣ ಮುಂದಿವೆ ಎಂದರು.
ದುರಂತವೆಂದರೆ ಹಿಂದು ದೇವಸ್ಥಾನಗಳಿಗೆ ಸ್ವತಂತ್ರ್ಯ ನೀಡಿಲ್ಲ. ನಮ್ಮ ಜಮೀನು ಕಸಿದುಕೊಳ್ಳುವ ವಕ್ಫ್ ಮಂಡಳಿ ವಿರುದ್ಧ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ. ದೇವಾಲಯಗಳು ಸ್ವತ ಸ್ವಾತಂತ್ರವಾಗಿ ನಡೆಯುವ ಬಗ್ಗೆ ಆಲೋಚನೆ ಮಾಡಬೇಕಿದೆ. ಮುಖ್ಯವಾಗಿ ಮುಜರಾಯಿ ದೇವಸ್ಥಾನಗಳ ಆದಾಯ ಬೇರೆಡೆ ಬಳಕೆಯಾಗಬಾರದು. ದೇವಾಲಯಗಳ ಅಭಿವೃದ್ಧಿಗೆ ಅದು ಹಣ ಬಳಕೆಯಾಗಬೇಕು. ಹಿಂದು ದೇವಾಲಯಗಳಿಂದ ಬರುವ ಹಣವನ್ನು ಆಯಾ ದೇವಸ್ಥಾನಗಳ ಅಭಿವೃದ್ಧಿ ನಿರ್ವಹಣೆಗೆ ಮಾತ್ರ ವಿನಿಯೋಗಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಲಿ ಎಂದು ಆಗ್ರಹಿಸಿದರು.
ದೇವಾಲಯಗಳು ಹಿಂದೂ ಧರ್ಮದ ಜನರಿಗೆ ತಿಳಿವಳಿಕೆ ನೀಡುವ ಕೇಂದ್ರವಾಗಬೇಕು. ಆದರೆ, ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮ ಸಂಘಟಿಸಲು ಸರ್ಕಾರವು ಅನುಮತಿ ನೀಡುತ್ತಿಲ್ಲ. ಸಹಕಾರಿ ಕಾಯ್ದೆ ವ್ಯವಸ್ಥೆಯನ್ನು ದೇವಸ್ಥಾನಗಳಿಗೂ ಅನ್ವಯಿಸಿ, ದೇವಸ್ಥಾನಗಳಿಗೆ ಬರುವ ಹಣವನ್ನು ಅವುಗಳ ಅಭಿವೃದ್ಧಿ, ನಿರ್ವಹಣೆ ಮಾತ್ರ ವಿನಿಯೋಗಿಸುವ ಕಾನೂನು ತರಬೇಕೆಂದು ಆಗ್ರಹಿಸಿದರು. ವಕ್ಫ್ ಬೋರ್ಡ್ ಮಠ ಮಾನ್ಯಗಳು, ದೇವಾಲಯಗಳ ಜಮೀನು ವಕ್ಫ್‌ಗೆ ಸೇರಿದ್ದು ಅಂತಾ ಒಂದು ನೋಟಿಸ್ ಕೊಟ್ಟರೂ ಸಾಕು, ಅವೆಲ್ಲಾ ವಕ್ಫ್ ಆಸ್ತಿಯೆಂದು ಘೋಷಣೆ ಆಗುತ್ತದೆ. ಇದೇ ಮಾದರಿಯಲ್ಲಿ ದೇವಾಲಯಗಳಿಗೂ ಸ್ವತಂತ್ರ್ಯ ವ್ಯವಸ್ಥೆ, ಅಧಿಕಾರವನ್ನು ಸರ್ಕಾರ ನೀಡಬೇಕು ಎಂದರು.ಎ ಶ್ರೇಣಿ ದೇವಸ್ಥಾನಗಳಿಂದ ಬಂದ ಹಣವನ್ನು ಸಿ ಮತ್ತು ಡಿ ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿಗೆ ವಿನಿಯೋಗಿಸಬೇಕು. ದೇವಸ್ಥಾನಗಳ ನಿರ್ವಹಣೆ ಮತ್ತು ಅಭಿವೃದ್ಧಿ ಹೊರತುಪಡಿಸಿ ಮತ್ತೆ ಇನ್ಯಾವುದೇ ಕಾರ್ಯಗಳಿಗೂ ಸರ್ಕಾರವು ದೇವಾಲಯಗಳ ಹಣ ಉಪಯೋಗ ಮಾಡಬಾರದು. ಇಡಬ್ಲ್ಯೂಎಸ್ ಮೀಸಲಾತಿಯನ್ನು ಸರ್ಕಾರ ಅನುಷ್ಠನಕ್ಕೆ ತಂದಿಲ್ಲ. ಕೇಂದ್ರ ಸರ್ಕಾರದಲ್ಲಿ ಇಡಬ್ಲ್ಯುಎಸ್ ಮೀಸಲಾತಿ ಜಾರಿಯಾಗಿದೆ. ಆದರೆ, ನಮ್ಮ ರಾಜ್ಯದಲ್ಲೇ ಅಂತಹ ಮೀಸಲಾತಿ ಇಲ್ಲ. ಈ ಬಗ್ಗೆ ನಾವು ಶೀಘ್ರವೇ ಹೈಕೋರ್ಟ್ ಮೊರೆ ಹೊಗುತ್ತೇವೆ ಎಂದು ತಿಳಿಸಿದರು.
ಡಾ.ಪ್ರಭಂಜನಾಚಾರ್ಯರಿಗೆ ಕನಕ ಶ್ರೀ ಪ್ರಶಸ್ತಿಕರ್ನಾಟಕ ಸರ್ಕಾರ ಪ್ರಸಕ್ತ ಸಾಲಿನ ಕನಕ ಶ್ರೀ ಪ್ರಶಸ್ತಿಯನ್ನು ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯರಿಗೆ ಕೊಟ್ಟಿರುವುದು ಸ್ವಾಗತಾರ್ಹ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಮತ್ತು ಕನ್ನಡ ಸಂಸ್ಕೃತಿ ಸಚಿವರಿಗೆ ಇಡೀ ಬ್ರಾಹ್ಮಣ ಸಮಾಜದಿಂದ ಅಭಿನಂದನೆ. ಪ್ರಶಸ್ತಿ ಪ್ರಕ್ರಿಯೆಯಲ್ಲಿ ಸಹಕರಿಸಿದ ಮಾಜಿ ಸಚಿವ ಎಚ್.ಎಂ.ರೇವಣ್ಣನವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.
ಜ.18ರಿಂದ ಎರಡು ದಿನ ಬೆಂಗಳೂರಲ್ಲಿ ಬ್ರಾಹ್ಮಣ ಮಹಾ ಸಮ್ಮೇಳನಕನ್ನಡಪ್ರಭ ವಾರ್ತೆ, ದಾವಣಗೆರೆ
ಜ.19ರ ಬೆಳಿಗ್ಗೆ 7ರಿಂದ 8ರವರೆಗೆ ವೇದ ಪಾರಾಯಣ, ಬೆಳಿಗ್ಗೆ 8.30ರಿಂದ 10ರವರೆಗೆ ಸಾಂಸ್ಕೃತಿಕ ಕಲರವ ನಡೆಯಲಿದ್ದು, ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಧರ್ಮಸಭೆ ಜರುಗಲಿದೆ. ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದಂಗಳವರ ಸಾನಿಧ್ಯದಲ್ಲಿ ನಡೆಯಲಿದೆ ಎಂದು ವಿವರಿಸಿದರು.