ಕನ್ನಡಪ್ರಭ ವಾರ್ತೆ ಕೊಡೇಕಲ್
ಈ ವೇಳೆ ಮಾತನಾಡಿದ ಕರವೇ ವಲಯ ಅಧ್ಯಕ್ಷ ಹಣಮಗೌಡ ಮಾತನಾಡಿ, ಈಗಾಗಲೇ ಪ್ರಸ್ತಕ ಸಾಲಿನ ಕಾಮಗಾರಿಗಳ ಬಗ್ಗೆ ಹಲವು ಗುತ್ತಿಗೆದಾರರಿಂದ ಅರ್ಜಿಗಳು ಕೆಬಿಜೆಎನ್‌ಎಲ್‌ಗೆ ಸಲ್ಲಿಸಿದ್ದು, ಬಹುತೇಕ ಅದರಲ್ಲಿ ಟೆಂಡರ್ ಅನ್ವಯ ಕಿಮೀ ಲೆಕ್ಕದಲ್ಲಿ ಅತೀ ಕಡಿಮೆ ಮೊತ್ತ ಸಲ್ಲಿಸಿ ಟೆಂಡರ್ ಪಡೆದಿದ್ದಾರೆ.
ನಿಯಮಾವಳಿಗಳ ಪ್ರಕಾರ ಅಷ್ಟೊಂದು ಕಡಿಮೆ ಮೊತ್ತಕ್ಕೆ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಲು ಅಸಾಧ್ಯವಾಗಿದ್ದು, ಆದಕಾರಣ ಅಂತವರ ಮೇಲೆ ನಿಗಾವಹಿಸಿ ಉತ್ತಮ ಗುಣಮಟ್ಟದ ಕಾಮಗಾರಿಗಳನ್ನು ಕಲ್ಪಿಸಿ, ಕಾಲುವೆಗಳಲ್ಲಿ ಜಂಗಲ್ ಮತ್ತು ಸಿಲ್ಟ್ ಹೆಚ್ಚಿನ ಪ್ರಮಾಣದಲ್ಲಿ ಕೂಡಿರುವುದರಿಂದ ಅವುಗಳನ್ನು ಸ್ವಚ್ಛಗೊಳಿಸಿ ಕೊನೆ ಭಾಗದ ರೈತರಿಗೆ ನೀರು ಹಾಗೂ ಸಂಚರಿಸಲು ಸೂಕ್ತ ದಾರಿ ಮಾಡಿಕೊಡಬೇಕೆಂದು ವಿನಂತಿಸಿದರು.ಈ ವೇಳೆ ಉಪಾಧ್ಯಕ್ಷರಾದ ಬಸವರಾಜ ಕೊಂಡಗೂಳಿ, ಪ್ರಧಾನ ಕಾರ್ಯದರ್ಶಿ ಮೌಲಾನಿ ಸಯ್ಯದ್, ಸಂಗು ಜಾಲಳ್ಳಿ, ಪರಶು ಬಗಾನಳ್ಳಿ, ಹಣಮಗೌಡ ಪಾಟೀಲ್, ಸಂಜೀವ ಬರದೇವನಾಳ ಸೇರಿದಂತೆ ಇತರರಿದ್ದರು.