ವೃದ್ಧಾಪ್ಯ ವೇತನ ಬಿಡುಗಡೆಗೆ ಆಗ್ರಹ

KannadaprabhaNewsNetwork |  
Published : Jul 03, 2026, 02:30 AM IST
ಪೊಟೋ-ಪಟ್ಟಣದ ಗ್ರೇಡ್ -2 ತಹಶಿಲ್ದಾರ ಮಂಜುನಾಥ ಅಮಾಸಿ ಅವರಿಗೆ ಹಿರಿಯ ನಾಗರಿಕರು ವೃದ್ಯಾಪ್ಯ ಪಿಂಚಣಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ವೃದ್ಧರು ಪ್ರತಿ ತಿಂಗಳ ವೃದ್ಧಾಪ್ಯ ವೇತನವನ್ನೇ ನೆಚ್ಚಿಕೊಂಡಿದ್ದಾರೆ. ನಮ್ಮ ಸಂಘದ ಕೆಲವು ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಅನೇಕ ತಿಂಗಳುಗಳಿಂದ ಸ್ಥಗಿತಗೊಂಡಿದೆ ಎಂದರು.

ಲಕ್ಷ್ಮೇಶ್ವರ: ತಾಲೂಕಿನ ವೃದ್ಧ ಬಡವರಿಗೆ ಪ್ರತಿ ತಿಂಗಳು ತಪ್ಪದೆ ವೃದ್ಧಾಪ್ಯ ವೇತನ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕು ಘಟಕದ ವತಿಯಿಂದ ಗ್ರೇಡ್-2 ತಹಸೀಲ್ದಾರ್‌ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಆರ್. ಲಕ್ಕುಂಡಿಮಠ ಮಾತನಾಡಿ, ವೃದ್ಧರು ಪ್ರತಿ ತಿಂಗಳ ವೃದ್ಧಾಪ್ಯ ವೇತನವನ್ನೇ ನೆಚ್ಚಿಕೊಂಡಿದ್ದಾರೆ. ನಮ್ಮ ಸಂಘದ ಕೆಲವು ಹಿರಿಯ ನಾಗರಿಕರ ವೃದ್ಧಾಪ್ಯ ವೇತನ ಅನೇಕ ತಿಂಗಳುಗಳಿಂದ ಸ್ಥಗಿತಗೊಂಡಿದೆ. ಅವರು ನಿಜವಾದ ಬಡವರು ಮತ್ತು ಅರ್ಹ ಫಲಾನುಭವಿ ಆಗಿದ್ದಾರೆ. ಪಿಂಚಣಿ ಬಂದ್ ಆಗಿರುವುದರಿಂದ ಅವರಿಗೆ ಸಾಕಷ್ಟು ತೊಂದರೆ ಆಗಿದೆ. ಬಡ ವೃದ್ಧರು ಆಸ್ಪತ್ರೆ, ಔಷಧಿ ಖರ್ಚಿಗಾಗಿ ಪರಿತಪಿಸುತ್ತಿದ್ದಾರೆ. ಈ ಬಗ್ಗೆ ಅವರು ನಮ್ಮ ಸಂಘಕ್ಕೆ ಬಂದು ತಮ್ಮ ನೋವು ತೋಡಿಕೊಂಡು, ಅವಶ್ಯವಿರುವ ಕೆಲವು ದಾಖಲೆಗಳನ್ನು ಕೊಟ್ಟಿದ್ದಾರೆ. ದಾಖಲೆ ಪರಿಶೀಲಿಸಿ ಬಡ ವೃದ್ಧರ ಪಿಂಚಣಿ ಸೌಲಭ್ಯವನ್ನು ಪುನಃ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಹಿರಿಯ ಸದಸ್ಯ ಚಂಬಣ್ಣ ಬಾಳಿಕಾಯಿ ಮಾತನಾಡಿ, ಪಿಂಚಣಿ ಬಂದ್ ಆಗಿರುವುದರಿಂದ ಹಿರಿಯ ನಾಗರಿಕರಿಗೆ ನಿಜಕ್ಕೂ ತೊಂದರೆ ಉಂಟಾಗಿದೆ. ಕೆಲವು ಬಡ ವೃದ್ಧರು ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಕಾರಣ ಆದಷ್ಟು ಬೇಗನೇ ಬಂದ್ ಆಗಿರುವ ಪಿಂಚಣಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಚನ್ನಪ್ಪ ಕೋಲಕಾರ, ಸೂಗಿರಪ್ಪ ವಾಲಿಶೆಟ್ಟರ, ನೀಲಪ್ಪ, ಗೊರವರ, ಯಲ್ಲಪ್ಪ ಬಿಂಜಡಗಿ, ಬಾಬಣ್ಣ ವಡಕಣ್ಣವರ, ನಿಂಗಪ್ಪ ಜಾವೂರ ಇದ್ದರು. ಇಂದು ಜಾಗೃತಿ ಕಾರ್ಯಕ್ರಮ

ಗದಗ: ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಮತದಾರರಲ್ಲಿ ಜಾಗೃತಿ, ಅರಿವು ಮೂಡಿಸುವ ಉದ್ದೇಶದಿಂದ ಜು. 3ರಂದು ಬೆಳಗ್ಗೆ 9ಕ್ಕೆ ನಗರದ ಮುನ್ಸಿಪಲ್ ಹೈಸ್ಕೂಲ್‌ನಿಂದ ರ್ಯಾಲಿ, ವಾಕ್‌ಥಾನ್ ಆಯೋಜಿಸಲಾಗಿದೆ. ರ್ಯಾಲಿಯು ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಜೋಡು ಮಾರುತಿ ರಸ್ತೆ, ನಂತರ ಮುಳಗುಂದ ನಾಕಾದವರೆಗೆ ಬಂದು ಮುಕ್ತಾಯವಾಗುವುದು.ಜಿಲ್ಲೆಯ ಎಲ್ಲ ಇಲಾಖೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ವ- ಸಹಾಯ ಸಂಘಗಳು ವಾಕ್‌ಥಾನ್‌ದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಸಿ.ಎನ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಚನ ಸಂಸ್ಕೃತಿ ಉಳಿಸಿದ ಫ.ಗು.ಹಳಕಟ್ಟಿ
ಹಿರೇಮಾದಿನಾಳ ಮೊರೇರ ಗುಡ್ಡ ಸಂಶೋಧನೆಗೆ ಹೊಸ ತಿರುವು!