ಗ್ರಾಮಸ್ಥರೊಂದಿಗೆ ಶಿರಸ್ತೆದಾರ್ ಹೇಮಂತ್‌ಕುಮಾರ್ ಭೇಟಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೊಪ್ಪ ತಾಲೂಕಿನ ಕಾಡ್ಕೆರೆಯಲ್ಲಿ ದಲಿತರು ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿ ಶಿರಸ್ತೆದಾರ್ ಎಂ.ಎಸ್. ಹೇಮಂತ್‌ಕುಮಾರ್ ಅವರನ್ನು ಗ್ರಾಮಸ್ಥರೊಂದಿಗೆ ಭೇಟಿ ಮಾಡಿದ ಸಮಿತಿ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು. ಕೊಪ್ಪ ತಾಲೂಕಿನ ಕಾಡ್ಕೆರೆಯಲ್ಲಿರುವ ನಾಲ್ಕು ದಲಿತ ಕುಟುಂಬ ಗಳು ಸಮೀಪದ ಗುಡ್ಡದಿಂದ ತಮ್ಮ ಮನೆ ಬಳಿ ಹರಿದು ಬರುವ ನೀರನ್ನು ನೂರಾರು ವರ್ಷಗಳಿಂದ ಕುಡಿಯಲು ಬಳಸುತ್ತಿವೆ ಎಂದರು.ಮೇಲ್ವರ್ಗದ ಕೆಲವರು ಇತ್ತೀಚೆಗೆ ಆ ಹಳ್ಳಕ್ಕೆ ತಡೆಗೋಡೆ ನಿರ್ಮಿಸಿ ನೀರು ಹರಿಯದಂತೆ ಮಾಡಿದ್ದು ಇದರಿಂದ ನಾಲ್ಕು ದಲಿತ ಕುಟುಂಬಗಳು ಕುಡಿಯಲು ನೀರಿಲ್ಲದೇ ಪರದಾಡುವಂತಾಗಿದೆ ಎಂದು ಆರೋಪಿಸಿದರು.ಕುಡಿಯುವ ನೀರಿಗೆ ಅಡ್ಡಕಟ್ಟಿರುವುದನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ತಹಸೀಲ್ದಾರರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪದಾಧಿಕಾರಿಗಳು, ಜಿಲ್ಲಾಡಳಿತ ಕೂಡಲೇ ತಡೆಗೋಡೆ ತೆರವುಗೊಳಿಸಬೇಕು. ದಲಿತ ಕುಟುಂಬಗಳಿಗೆ ಕುಡಿಯುವ ನೀರು ಬಳಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕೊಪ್ಪ ತಾಲೂಕಿನ ಕೆಳಕುಳ್ಳಿ ಗ್ರಾಮದ ಸರ್ವೆ ನಂ 61 ರಲ್ಲಿ ಹಂಗಾಮಿ ಸಾಗುವಳಿ ಚೀಟಿ ನೀಡಿರುವ ದಲಿತ ಕುಟುಂಬಗಳಿಗೆ ಖಾಯಂ ಸಾಗುವಳಿ ಚೀಟಿ ನೀಡುವಂತೆ ಒತ್ತಾಯಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎಸ್. ಶ್ರೀಕಾಂತ್, ಜಿಲ್ಲಾ ಸಂಘಟನಾ ಸಂಚಾಲಕ ಡಿ. ರಾಮು. ಶೃಂಗೇರಿ ಕ್ಷೇತ್ರ ಸಂಚಾಲಕ ಎಸ್, ಹನುಮಂತ, ಗ್ರಾಮಸ್ಥರಾದ ರವಿ, ಶಾರದಾ. ಮಹೇಶ್, ಕೃಷ್ಣಮೂರ್ತಿ ಪವಿತ್ರ ನಿರ್ಮಲ ನಾಗೇಶ್ ಹಾಜರಿದ್ದರು.ಪೋಟೋ ಪೈಲ್ ನೇಮ್ 8 ಕೆಸಿಕೆಎಂ 1ಕೊಪ್ಪ ತಾಲೂಕಿನ ಕಾಡ್ಕೆರೆಯಲ್ಲಿ ದಲಿತರು ಕುಡಿಯುವ ನೀರಿನ ಹಳ್ಳಕ್ಕೆ ಪ್ರಭಾವಿಗಳು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಿರಸ್ತೇದಾರ್ ಹೇಮಂತ್ ಕುಮಾರ್ ಅವರಿಗೆ ಮನವಿ ಸಲ್ಲಿಸಿತು.