ಏಳು ತಾಸು ವಿದ್ಯುತ್‌ ನೀಡಲು ಆಗ್ರಹ

KannadaprabhaNewsNetwork |  
Published : Nov 20, 2025, 12:45 AM IST
೧೮ ಜೆ ಎಲ್ ಆರ್ ಚಿತ್ರ ೨ಎ: ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಬೆಸ್ಕಾಂ ಪವರ್ ಸ್ಟೇಷನ್ ಮುಂದೆ ಏಳು ತಾಸು ವಿದ್ಯುತ್ಗೆ ಆಗ್ರಹಿಸಿ ಸೊಕ್ಕೆ ಭಾಗದ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ರೈತರ ಕೃಷಿ ಪಂಪ್ ಸೆಟ್ಗಳಿಗೆ ದಿನದ ಕನಿಷ್ಠ ೭ ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸಂಪರ್ಕ ಪೂರೈಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಸೊಕ್ಕೆ ಗ್ರಾಮದ ವಿದ್ಯುತ್ ಪವರ್ ಸ್ಟೇಷನ್ ಮುಂಬಾಗ ಸೊಕ್ಕೆ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು.

ಜಗಳೂರು: ರೈತರ ಕೃಷಿ ಪಂಪ್ ಸೆಟ್ಗಳಿಗೆ ದಿನದ ಕನಿಷ್ಠ ೭ ಗಂಟೆಗಳ ಕಾಲ ಗುಣಮಟ್ಟದ ವಿದ್ಯುತ್ ಸಂಪರ್ಕ ಪೂರೈಕೆಗೆ ಒತ್ತಾಯಿಸಿ ಮಂಗಳವಾರ ತಾಲೂಕಿನ ಸೊಕ್ಕೆ ಗ್ರಾಮದ ವಿದ್ಯುತ್ ಪವರ್ ಸ್ಟೇಷನ್ ಮುಂಬಾಗ ಸೊಕ್ಕೆ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳ ರೈತರು ಪ್ರತಿಭಟನೆ ನಡೆಸಿದರು.

ಮಾಜಿ ತಾ.ಪಂ ಸದಸ್ಯ ಎಚ್.ಎನ್.ಬಸವರಾಜಪ್ಪ ಮಾತನಾಡಿ, ಅಧಿಕಾರಿಗಳಿಗೆ ಹಲವುಬಾರಿ ಮನವಿಮಾಡಲಾಗಿತ್ತು. ಪ್ರತಿನಿತ್ಯ ರೈತರಿಗೆ ೭ ತಾಸ್ ವಿದ್ಯುತ್ ಸಂಪರ್ಕ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ರಾತ್ರಿ ಸಮಯದಲ್ಲಿ ಕೇವಲ ಮೂರು ತಾಸು, ಹಗಲಿನ ವೇಳೆ ಮೂರು ತಾಸಿನಲ್ಲಿ ಎರಡೂವರೆ ತಾಸು ವಿದ್ಯುತ್ ಸಂಪರ್ಕ ನೀಡುತ್ತಿದ್ದು, ಇದರಿಂದ ನೀರಾವರಿ ಜಮೀನುಗಳ ಫಸಲಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ದಿನದಲ್ಲಿ ೭ ಗಂಟೆಗಳ ಕಾಲ ಸಮರ್ಪಕವಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಎಂ.ಆರ್.ರಂಗಪ್ಪ ಮಾತನಾಡಿ, ರೈತರಿಗೆ ಅನುಕೂಲವಾಗುವಂತೆ ವಿದ್ಯುತ್ ಒದಗಿಸಬೇಕು. ರೈತರು ಅತಿವೃಷ್ಟಿ, ಅನಾವೃಷ್ಟಿಯಿಂದ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಬೇಡಿಕೆಯಂತೆ ದಿನಕ್ಕೆ ೭ ತಾಸು ವಿದ್ಯುತ್ ಸಂಪರ್ಕಗೊಳಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಇನ್ನೂ ೧೦ ದಿನಗಳೊಳಗೆ ಈಡೇರಿಸಲಾಗುವುದು. ಕಾಲಾವಕಾಶ ನೀಡುವ ಮೂಲಕ ರೈತರು ಸಹಕರಿಸಬೇಕು ಎಂದು ಬೆಸ್ಕಾಂ ಎಇಇ ಮಲ್ಲಿಕಾರ್ಜುನ್ ರೈತರಿಗೆ ಮನವಿ ಮಾಡಿದರು.

ಕೆಟಿಸಿಎಲ್ ಅಧಿಕಾರಿ ಮಂಜುನಾಥ್, ಸೊಕ್ಕೆ ಬೆಸ್ಕಾಂ ಇಲಾಖೆ ಅಧಿಕಾರಿ ಟಿ. ಶಿವಶಂಕರ್, ಮುಖಂಡರಾದ ಮಲ್ಲೇಶ್, ಪಾಪನಾಯಕ, ಗ್ರಾಪಂ ಸದಸ್ಯ ಎಲ್.ತಿರುಮಲೇಶ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ