ಮುಂಡರಗಿ:ಈಚೆಗೆ ಜಮ್ಮು-ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ ಭಾರತೀಯ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ ಘಟನೆಗೆ ಕಾರಣರಾದವರಿಗೆ ಕೇಂದ್ರ ಸರ್ಕಾರ ಉಗ್ರವಾದ ಶಿಕ್ಷೆ ವಿಧಿಸಬೇಕು ಎಂದು ಮುಂಡರಗಿ ಅಂಜುಮನ್ ಎ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ನಬೀಸಾಬ್ ಕೆಲೂರು ಒತ್ತಾಯಿಸಿದರು.
ಹಿಂದು ಮುಸ್ಲಿಂ ಏಕತೆಯ ರಾಷ್ಟ್ರದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬಾಳುತ್ತಿರುವ ಈ ನಾಡಿನಲ್ಲಿ ಇಂತಹ ಹೀನ ಕೃತ್ಯ ನಡೆದಿರುವುದನ್ನು ದೇಶದ ಪ್ರತಿಯೊಬ್ಬರು ಖಂಡಿಸಬೇಕು. ಮಾನವೀಯತೆ ಮರೆತು ಅಮಾಯಕ ಪ್ರವಾಸಿಗರ ಮೇಲೆ ಉಗ್ರಗಾಮಿಗಳು ಹತ್ಯೆ ನಡೆಸಿರುವುದು ಪೈಶಾಚಿಕ ಕೃತ್ಯವಾಗಿದೆ. ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದರು.
ಎ.ಕೆ. ಮುಲ್ಲಾನವರ, ಅಮಿನಸಾಬ್ ಬಿಸನಳ್ಳಿ, ರಾಜಾಸಾಬ್ ಬೆಟಗೇರಿ, ಎಂ.ಎಚ್. ತಳಗಡೆ ಮಾತನಾಡಿ, ಈ ಭಯೋತ್ಪಾದನೆಯನ್ನು ನಾವೆಂದೂ ಸಹಿಸುವುದಿಲ್ಲ. ಎಲ್ಲಿಯವರೆಗೂ ಈ ಭಯೋತ್ಪಾದನೆಯನ್ನು ಮಟ್ಟಹಾಕುವುದಿಲ್ಲವೋ ಅಲ್ಲಿಯವರೆಗೂ ಅವರ ಉಪಟಳ ನಿಲ್ಲುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ದಿಟ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಪ್ರದಾನಿ ನರೇಂದ್ರ ಮೋದಿಯವರು ಯಾವುದೇ ರೀತಿಯ ಕ್ರಮ ಕೈಗೊಂಡರೂ ಸಹ ಅದಕ್ಕೆ ನಮ್ಮ ಬೆಂಬಲವಿದೆ ಎಂದರು.ಪುರಸಭೆ ಸದಸ್ಯ ಸಂತೋಷ ಹಿರೇಮನಿ ಮಾತನಾಡಿದರು. ಈ ಸಂದರ್ಭದಲ್ಲಿ ಕರೀಂಸಾಬ್ ಮುಲ್ಲಾ, ಕಾಶೀಂಸಾಬ್ ಸಂದಿಮನಿ, ಮಹ್ಮದರಫೀಕ್ ಬೆಟಗೇರಿ, ಮರ್ದಾನಸಾಬ್ ತಳಗಡೆ, ಮಹ್ಮದರಫೀಕ್ ವಡ್ಡಟ್ಟಿ, ಎ.ಎಂ.ಅಳವಂಡಿ, ಎಚ್.ಎಲ್.ದಿವಾನಸಾಬನವರ, ಪರೀಧ್ ಮಿರ್ಜಿ, ಹಾಸೀಂಬಾಬಾ ಮುಲ್ಲಾ, ಎಂ.ಕೆ.ತಳಗಡೆ, ಹುಸೇನಸಾಬ್ ದೊಡ್ಡಮನಿ, ಅಲ್ಲಾಭಕ್ಷಿ ಕರ್ನಾಚಿ, ಮೆಹಬೂಬ್ ಸಾಬ್ ತಳಗಡೆ, ಹುಸೇನಸಾಬ್ ಕಲೇಗಾರ, ಇಮಾಮ್ ಸಾಬ್ ತಳಗಡೆ, ಅಬ್ದುಲ್ ಸಾಬ್ ಕೊಕ್ಕರಗುಂದಿ, ಮೈನುದ್ದೀನ ಸಂಕದ, ಎಚ್.ಐ.ಮುಲ್ಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.