ಇಂದು ತಲಗೋಡಿನಲ್ಲಿ ನಾಟಕ ಪ್ರದರ್ಶನ

KannadaprabhaNewsNetwork |  
Published : Apr 28, 2025, 12:46 AM IST
ಪೊಟೋ ಪೈಲ್ : 26ಬಿಕೆಲ್2 | Kannada Prabha

ಸಾರಾಂಶ

ಶ್ರೀ ಗುರು ರಂಗಭೂಮಿ ಕಲಾವಿದರ ಸಂಘವು ೨೦೧೯ರಲ್ಲಿ ಪ್ರಾರಂಭಗೊಂಡಿದ್ದು ಸಂಘವು ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸಹಾಯ ಮಾಡುವುದು ಸೇರಿದಂತೆ ಕಲಾವಿದರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಭಟ್ಕಳ: ಇಲ್ಲಿನ ಶ್ರೀಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿ ಕಲಾ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಎ.೨೮ರಂದು ತಲಗೋಡಿನ ಬೋಳೆಜಟ್ಗ ದೇವಸ್ಥಾನದ ಆವರಣದಲ್ಲಿ "ಹೃದಯ ಮೀಟಿದ ಕೋಗಿಲೆ " ಎಂಬ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಜದದೀಶ ನಾಯ್ಕ ಹೇಳಿದರು.

ಅವರು ಪಟ್ಟಣದ ಆಸರಕೇರಿಯ ಗುರುಮಠದ ದೇವಸ್ಥಾನದ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಶ್ರೀ ಗುರು ರಂಗಭೂಮಿ ಕಲಾವಿದರ ಸಂಘವು ೨೦೧೯ರಲ್ಲಿ ಪ್ರಾರಂಭಗೊಂಡಿದ್ದು ಸಂಘವು ಸಂಕಷ್ಟಕ್ಕೆ ಸಿಲುಕಿದ ಕಲಾವಿದರಿಗೆ ಸಹಾಯ ಮಾಡುವುದು ಸೇರಿದಂತೆ ಕಲಾವಿದರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಕಲಾಪೋಷಕ ಪ್ರಶಸ್ತಿ, ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸುನಿಲ್ ನಾಯ್ಕ, ಅತಿಥಿಗಳಾಗಿ ಶ್ರೀನಿವಾಸ ನಾರಾಯಣ ಮೊಗೇರ, ವೆಂಕಟರಮಣ ಶನಿಯಾರ ನಾಯ್ಕ, ದಾಸ ಮಾಸ್ತಪ್ಪ ನಾಯ್ಕ, ಶ್ರೀಧರ ಮಾಸ್ತಪ್ಪ ನಾಯ್ಕ, ಮೋಹನ ಕರಿಯಪ್ಪ ನಾಯ್ಕ, ಪಾರ್ವತಿ ಮಂಜುನಾಥ ನಾಯ್ಕ, ಮಾಲಿನಿ ಶನಿಯಾರ ಮೊಗೇರ ಉಪಸ್ಥಿತರಿರುವರು ಎಂದರು.

ಪತ್ರಿಕಾಗೊಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಅಶೋಕ ಮಹಾಲೆ, ಕೆ.ಆರ್. ನಾಯ್ಕ, ಎಸ್.ಎನ್. ದೇವಾಡಿಗ, ವೆಂಕಟೇಶ ನಾಯ್ಕ ತಲಗೋಡು, ದಾಸ ನಾಯ್ಕ, ಮಂಜುನಾಥ ನಾಯ್ಕ, ಶ್ರೀಧರ ನಾಯ್ಕ, ನರಸಿಂಹ ನಾಯ್ಕ ಉಪಸ್ಥಿತರಿದ್ದರು.

ಭಟ್ಕಳದ ಶ್ರೀಗುರು ರಂಗಭೂಮಿ ಜನಪದ ಹಾಗೂ ಸಾಂಸ್ಕೃತಿಕ ಕಲಾ ಸಂಘದ ಪ್ರಮುಖರು ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ