- ಹುಣಸಗಿ ರೈಲು ಹೋರಾಟ ಸಮಿತಿ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಕೆ
ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹುಣಸಗಿ ರೈಲು ಹೋರಾಟ ಸಮಿತಿ ವತಿಯಿಂದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಮುಖಂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್ ಮಾತನಾಡಿ, ವಿಜಯಪುರ ಜಿಲ್ಲೆಯ ಆಲಮಟ್ಟಿಯಿಂದ ನಿಡಗುಂದಿ, ಮುದ್ದೇಬಿಹಾಳ, ತಾಳಿಕೋಟಿ, ಹುಣಸಗಿ, ಸುರಪುರ, ಹತ್ತಿಗುಡೂರ ಮಾರ್ಗವಾಗಿ ಯಾದಗಿರಿಯವರೆಗೆ ಬ್ರಿಟಿಷ್ ರೈಲು ಮಾರ್ಗ ಹಾಕಲು ಸಿದ್ಧತೆಗಳನ್ನು ಮಾಡಿಕೊಂಡಿದ್ದರು.ಅದರ ಪ್ರಕಾರ ಮೊದಲ ಹಂತವಾಗಿ ಮುದ್ದೇಬಿಹಾಳ ಹಾಗೂ ತಾಳಿಕೋಟಿಯವರೆಗೆ ಮಾರ್ಗ ಹಾಕಲು ಆರಂಭಿಸಿ, ಕಾಮಗಾರಿಯನ್ನು ಕೂಡ ಮಾಡಿದ್ದಾರೆ. ಆದರೆ, ಈಗ ಈ ಕಾಮಗಾರಿ ಮಾಡಿದ ಕುರುಹುಗಳನ್ನು ನಾವು ಈಗಲೂ ಆಲಮಟ್ಟಿಯಿಂದ ಹುಲ್ಲೂರುವರೆಗೆ ಅಲ್ಲಲ್ಲಿ ಕಾಣಬಹುದಾಗಿದೆ. ಮುಂದೆ 1933ರ ನಂತರ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮ ತೀವ್ರಗೊಂಡಿದ್ದರಿಂದ ಕಾಮಗಾರಿ ಮುಂದುವರಿದಿಲ್ಲ. ಈಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷಗಳು ಗತಿಸುತ್ತಿದ್ದರೂ ಈ ನಿಯೋಜಿತ ರೈಲು ಮಾರ್ಗವನ್ನು ಮುಂದುವರೆಸುತ್ತಿಲ್ಲ ಎಂದು ಶಾಸಕರ ಗಮನಕ್ಕೆ ತಂದರು.
ಈ ಮಾರ್ಗದಲ್ಲಿ ಐತಿಹಾಸಿಕ ಕೂಡಲಸಂಗಮ, ವಿಶ್ವಗುರು ಬಸವಣ್ಣನವರ ಜನ್ಮಭೂಮಿ ಇಂಗಳೇಶ್ವರ, ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ತಂಗಡಗಿ, ಆಲಮಟ್ಟಿ ಡ್ಯಾಂ, ನಾರಾಯಣಪುರ ಡ್ಯಾಂ, ಗೋವಾ ಪ್ರೇಕ್ಷಣಿಯ ಸ್ಥಳಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಬರುವ ಪ್ರೇಕ್ಷಣಿಯ ಸ್ಥಳಗಳಿಂದ ಪ್ರವಾಸೋದ್ಯಮ ಬೆಳೆಯುತ್ತದೆ ಎಂದರು.
-----
ಆಲಮಟ್ಟಿ-ಹುಣಸಗಿ-ಯಾದಗಿರಿ ರೈಲು ಯೋಜನೆ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಹುಣಸಗಿ ರೈಲು ಹೋರಾಟ ಸಮಿತಿಯಿಂದ ಹುಣಸಗಿಯಲ್ಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.